ಶ್ರೀ ರಾಮಾಯಣ ಇಂದಿಗೂ ನಮ್ಮ ಜೀವನಕ್ಕೊಂದು ಆದರ್ಶ ಗ್ರಂಥ: ಟಿ. ರಾಮಾಂಜಿನೇಯಲು

ಬಳ್ಳಾರಿ 17: ಮಹಾನ್ ಋಷಿ ಮತ್ತು ಅವರ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ಭೋದನೆಗಳಿಗೆ ಗೌರವ ಸಲ್ಲಿಸಲು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಗುತ್ತದೆ, ಶ್ರೀ ಮಹರ್ಷಿ ವಾಲ್ಮೀಕಿ ಮಹಾಕವಿಗಳ ಶ್ರೀ ರಾಮಾಯಣ ಇಂದಿಗೂ ನಮ್ಮ ಜೀವನಕ್ಕೊಂದು ಆದರ್ಶ ಗ್ರಂಥವಾಗಿಯೇ ಉಳಿದಿದೆ.  ಎಂದು ಕ.ದ.ಸಂ.ಸ (ವಿಮೋಚನವಾದ) ಜಿಲ್ಲಾಧ್ಯಕ್ಷರಾದ ಟಿ. ರಾಮಾಂಜಿನೇಯಲುರವರು ಹೇಳಿದರು. 

ಶ್ರೀ ವೀರ ನಾಯಕ ಸಿಂಧೂರ ಲಕ್ಷ್ಮಣ ಯುವಕ ಸಂಘ (ರಿ), ಬಳ್ಳಾರಿ ಜಿಲ್ಲಾ ಘಟಕ, ಬಳ್ಳಾರಿ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ, (ವಿಮೋಚನವಾದ) ಇವರುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.  

ಶ್ರೀ ಮಹರ್ಷಿ ವಾಲ್ಮೀಕಿ ಭಾವ ಚಿತ್ರಕ್ಕೆ ವೆಂಕಟೇಶ, ವಡ್ಡರ ಸಂಘದ ಮುಖ್ಯಸ್ಥರವರಿಂದ ಮಾಲಾರೆ​‍್ಣಯನ್ನು ಮಾಡಿ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಶ್ರೀ ವೀರ ನಾಯಕ ಸಿಂಧೂರ ಲಕ್ಷ್ಮಣ ಯುವಕ ಸಂಘದ ಜಿಲ್ಲಾ ಉಪಾಧ್ಯಕ್ಷರಾದ  ಕೆ. ಲೋಕರೆಡ್ಡಿ, “ಕೂಜಂತಂ ರಾಮ ರಾಮೇತಿ” ಪ್ರಾರ್ಥೆನೆ ಮಾಡಿದರು. ಕಟ್ಟಡ ಕಾರ್ಮಿಕ ಸಂಘದ ಮುಖಂಡರಾದ ನರಸಪ್ಪ ಮಾತನಾಡದರು.  

ಈ ಕಾರ್ಯಕ್ರಮಕ್ಕೆ ಸಮಾಜದ ಹಿರಿಯ ಮುಖಂಡರಾದ ಬಾಬು, ಶ್ರೀಜಯರಾಮ,. ವೀರೇಶ, ಶ್ರೀಬಾಲಾಜಿ, ನವೀನ, ರಾಮಕೃಷ್ಣ, ಝಾನ್ಸ್‌ ರಾಣಿ ಲಕ್ಷ್ಮಿಬಾಯಿ ಸೇವಾ ಸಂಘದ ಜಿಲ್ಲಾಧ್ಯಕ್ಷರಾದ ಪಿ. ಭಾಗ್ಯ ಮತ್ತು ವಿಶ್ವಕರ್ಮದ ಮುಖಂಡರಾದ ಸೋಮಶೇಖರ ಆಚಾರಿರವರು ಕಾರ್ಯಕ್ರಮಕ್ಕೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಶ್ವಿಗೊಳಿಸಿದರು.