ಅರಳುವ ಪ್ರತಿಭೆಗಳನ್ನು ಗುರುತಿಸಿ: ಆನಂದ ಹುಣಸಗಿ
ಇಂಡಿ, 16 : 2024-25 ನೇ ಸಾಲಿನ ಮಕ್ಕಳ ಕಲಿಕಾ ಹಬ್ಬದ ಪ್ರಯುಕ್ತ ತಡವಲಗಾ ಕ್ಲಸ್ಟರ ಮಟ್ಟದಲ್ಲಿ ವಿಜೃಂಭಣೆಯಿಂದ ಜರುಗಿತು.. ಎಫ್‌ಎಲ್‌ಎನ್ ಆಧಾರಿತ ಕಾರ್ಯಕ್ರಮ ತುಂಬಾ ಚೆನ್ನಾಗಿದೆ. ಸ್ಪಷ್ಟ ಓದು ಶುದ್ಧ ಬರಹ ಸರಳ ಲೆಕ್ಕಾಚಾರದ ಸಾಮರ್ಥ್ಯ ಗುರುತಿಸುವುದು ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದು ವಲಯದ ಶಿಕ್ಷಣ ಸಂಯೋಜಕ ಆನಂದ ಹುಣಸಗಿ ಅವರು ಹೇಳಿದರು.
ಅವರು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಎಲ್ ಪಿ ಎಸ್ ಗೊಳ್ಳಗಿ ವಸ್ತಿ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೇಳಿದರು.ಈ ಕಾರ್ಯಕ್ರಮಕ್ಕೆ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ ಅವರು ವಿದ್ಯುಕ್ತವಾಗಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಶಿಕ್ಷಕರಾದ ರಮೇಶ ಮುಂಜಣ್ಣಿ ಅವರು ಕಲಿಕಾ ಹಬ್ಬವು ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆ ಗುರುತಿಸುವ ಒಂದು ಉತ್ತಮ ಕಾರ್ಯಕ್ರಮವಾಗಿದೆ ಎಂದು ಹೇಳಿದರು. ಶ್ರೀ ಸುದೀಶ್ ಬಿರಾದಾರ್ ಶಿಕ್ಷಕರು ಮಾತನಾಡಿ ಮಕ್ಕಳಲ್ಲಿ ಭಾವಕೈತ್ಯ ಮೂಡಿಸುವ ಮಕ್ಕಳ ಶೈಕ್ಷಣಿಕ ಬಲವರ್ಧನ್ ಹಾಗೂ ಸಾಕ್ಷರತ ಮೂಡಿಸುವ ಹಬ್ಬ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ತಾಲೂಕಾ ಗ್ಯಾರಂಟಿ ಯೋಜನೆ ನಿರ್ದೇಶಕರಾದ ರಾಜು ನಾಯ್ಕೋಡಿ ಹಾಗೂ ಎಸ್ ಡಿ ಎಂ ಸಿ ಸದಸ್ಯರಾದ ಸುರೇಶ ಹಿಳ್ಳಿ,ಸಿ ಆರ್ ಪಿ ಪ್ರಕಾಶ್. ರಾಥೋಡ್,ಶಾಲಾ ಮುಖ್ಯ ಗುರುಗಳಾದ ಡಿ ಜಿ ರಾಥೋಡ್, ಎಸ್ ಎಂ ವಂದಾಲ್, ಎಸ್ ಎಸ್ ಲಾಳಸಂಗಿ ಎಮ್ ವಿ ತೇಲಿ. ಅಶೋಕ್ ಚವಾಣ್ , ಎಸ್.ಎನ್ ಝಳಕಿ, ಟಿ ಕೆ ಜಂಬಗಿ, ಎಸ್ ಆರ್ ಗಿಡಗಂಟಿ, ಶಿರಾಗನವರ ಸರ್.ಎನ್ ಜಿ ರೊಳ್ಳಿ, ಅನಿತಾ ರಾಠೋಡ, ಪ್ರೇಮಾ ಹುಬ್ಬಳ್ಳಿ, ಜೋಗುರ ಮೇಡಂ, ಎಸ್ ಎಂ ಬಿರಾದರ, ಎಸ್ ಆರ್ ಡಂಗಿ ಸೇರಿದಂತೆ ಅನೇಕ ಶಿಕ್ಷಕ ಶಿಕ್ಷಕಿಯರು ಮತ್ತು ಕ್ಲಸ್ಟರ್ ಮಟ್ಟದ ಮಕ್ಕಳು ಪಾಲ್ಗೊಂಡಿದ್ದರು. ಕಲಿಕಾ ಹಬ್ಬದಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ವಿ ಆಯ್ ಜಾಡರ ಶಿಕ್ಷಕರು ನಿರೂಪಿಸಿದರು.