ವಾಷರ್ಿಕ ಕ್ರೀಡಾ ಕೂಟ

ಲೋಕದರ್ಶನ ವರದಿ

ಬೆಳಗಾವಿ 04:  ಸನ್ 2018-19ನೇ ಸಾಲಿನ ವಾಷರ್ಿಕ ಕ್ರೀಡಾ ಕೂಟವು ಶುಕ್ರವಾರ ದಿ. 03ರಂದು ಎಸ್.ಎಸ್.ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದಶರ್ಿ ಬಿ.ಎಫ್.ಕಲ್ಲಣ್ಣವರ ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸತ್ಯನಾರಾಯಣ ವೆಣರ್ೆಕರ ಅರಣ್ಯ ವಲಯ ಉಪ ಸಂರಕ್ಷಣಾಧಿಕಾರಿಗಳು ಇವರು ಆಗಮಿಸಿ, ಮಕ್ಕಳಿಗೆ ಕ್ರೀಡಾ ಮನೋಭಾವವನ್ನು ಬೆಳೆಸಿಕೊಳ್ಳುವದರ ಹಾಗೂ ಮುಂದಿನ ಜೀವನವನ್ನು ಹೇಗೆ ನಿರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ವಿವರಿಸಿದರು. ಉಪ ಪ್ರಾಚಾರ್ಯ ಕೆ.ಬಿ.ಹಿರೇಮಠ ಇವರು ಸ್ವಾಗತಿಸಿದರು ಹಾಗೂ ಎಸ್.ಎಸ್.ಮಾನೆಯವರು ಅತಿಥಿಗಳನ್ನು ಪರಿಚಯಿಸಿದರು. ಕೆ.ಸಿ.ಶಿವಕುಮಾರ ಇವರು  ಕಾರ್ಯಕ್ರಮ ನಿರೂಪಿಸಿದರು. ಜಿ.ಸಿ.ಕಕರ್ಿಯವರು ವಂದನಾರ್ಪನೆ ಮಾಡಿದರು. ಸದರಿ  ಕಾರ್ಯಕ್ರಮದಲ್ಲಿ  ಎಲ್ಲ ಶಾಲಾ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾಥರ್ಿಗಳು ಪಾಲ್ಗೊಂಡಿದ್ದರು.