ಲೋಕದರ್ಶನ ವರದಿ
ಶಿರಹಟ್ಟಿ 29: ಕ್ರೀಡೆ ಕೇವಲ ಮನೋರಂಜನೆಗಾಗಿ ಅಲ್ಲ, ಬೌದ್ಧಿಕ ಬೆಳವಣಿಗೆಗೆ ಪೂರಕವಾಗುವ ದೈಹಿಕ ಸಾಮಥ್ರ್ಯ ಹೆಚ್ಚಿಸುವಲ್ಲಿ ಹಾಗೂ ಮಕ್ಕಳಲ್ಲಿಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವಲ್ಲಿ ಸೋಲು ಗೆಲವುಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ನಿರ್ಮಾಣ ಮಾಡುವಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಸಿ.ಸಿ.ಎನ್.ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾಂತ.ಸಿ. ನೂರಶೆಟ್ಟರ ಹೇಳಿದರು.
ಅವರು ಎಸ್.ಎಫ್.ಸಿ.ಆಂಗ್ಲ ಮಾಧ್ಯಮ ಶಾಲೆ ಶಿರಹಟ್ಟಿಯಲ್ಲಿ 2019-20 ನೇ ಸಾಲಿನ ಪ್ರಾಥಮಿಕ ಶಾಲೆಗಳ ಗ್ರೂಪ್ ಮಟ್ಟದ ಕ್ರೀಡಾಕೂಟದ ಓಲಂಪಿಕ್ ಧ್ವಜಾರೋಹಣವನ್ನು ನೆರೆವೇರಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಯಲ್ಲಿ ಗ್ರಾಮೀಣ ಮಕ್ಕಳು ಅತ್ಯಂತ ಪ್ರತಿಭಾವಂತ ಕ್ರೀಡಾ ಪಟುಗಳಾಗಿ ಹೊರ ಹೊಮ್ಮುತ್ತಿರುವದು ಶ್ಲಾಘನೀಯ. ಅವರ ಈ ಕ್ರೀಡಾ ಸಾಮಥ್ರ್ಯವನ್ನು ಗುತರ್ಿಸಿ ಪೋಷಿಸಿದಲ್ಲಿ ಮುಂದೊಂದು ದಿನ ಅವರು ದೇಶದ ಆಸ್ತಿಯಾಗಿ ಮಿಂಚುವಲ್ಲಿ ಸಂಶಯವಿಲ್ಲ. ಈ ಬಾರಿ ನಡೆಯುತ್ತಿರುವ ಕ್ರೀಡಾಕೂಟದಲ್ಲಿ ಮಕ್ಕಳು ಪ್ರಥಮ ಸ್ಥಾನ ಪಡೆದು ತಾಲೂಕ ಹಾಗೂ ಜಿಲ್ಲಾ ಮಟ್ಟದಲ್ಲಿನ ಕ್ರೀಡಾಕೂಟದಲ್ಲಿ ಜಯಶಾಲಿ ಆಗಲಿ ಎಂದು ಶುಭ ಕೋರಿದರು.
ಎಸ್.ಎಫ್.ಸಿ.ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯರಾದ ಎಚ್.ಎನ್. ಪಾಟೀಲ, ಸಿ.ಆರ್.ಪಿ ಸಂತೊಷಕುಮಾರ ಎಸ್.ಜಿ ಆರ್.ಎಚ್ ಪರಬತ(ಶಿಕ್ಷಣ ಸಂಘದ ಅಧ್ಯಕ್ಷರು) ಎಸ್.ಬಿ.ಸಜರ್ಾಪುರ ಮುಖ್ಯೋಪಾಧ್ಯಾಯರು (ಎಚ್.ಪಿ.ಎಸ್ ಶಿರಹಟ್ಟಿ), ಎಸ್.ಕೆ.ಬೆಳವಳಕಿ, ಎಸ್.ಎಫ್.ಮಠದ ಎಲ್ಲಾ ಶಾಲೆಯ ದೈಹಿಕ ಶಿಕ್ಷಕ/ಶಿಕ್ಷಕಿಯರು ಭಾಗವಹಿಸಿದ್ದರು, ಕುಮಾರಿ ಅಬೀದಾ ತಹಶೀಲ್ದಾರ್ ನಿರೂಪಣೆ ಮಾಡಿದರು.