ಎಸ್‌ಎಸ್ ಸಮಿತಿಯ ಮಿರ್ಜಿ ಕಾಲೇಜಿನಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ಕಾಗವಾಡ 21: ವಿದ್ಯಾರ್ಥಿಗಳು ಸಮಯ ಪಾಲನೆ, ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ರೂಢಿಸಿಕೊಂಡು, ದೇಶದ ಸುಸಂಸ್ಕೃತ ಪ್ರಜೆಗಳಾಗಿ ಹೊರಹೊಮ್ಮಬೇಕು. ಜೊತೆಗೆ ಹೆತ್ತ ತಂದೆ-ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣಬೇಕೆಂದು ಕಾಗವಾಡ ಶಾಸಕ ರಾಜು ಕಾಗೆ ತಿಳಿಸಿದ್ದಾರೆ. ಅವರು, ಗುರುವಾರ ದಿ. 19 ರಂದು ಬೆಳಗಾವಿ ನಗರದ ಎಸ್‌ಎಸ್ ಸಮಿತಿಯ ಮಹಾವೀರ್ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಆರ್‌ಸಿಯುನ ಕುಲಸಚಿವರು (ಮೌಲ್ಯಮಾಪನ) ಡಾ. ರವೀಂದ್ರನಾಥ್ ಕದಂ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡುತ್ತಾ, ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಬಹುದೆಂದು ತಿಳಿಸಿದರು. ಈ ಸಮಯದಲ್ಲಿ ಸಂಸ್ಥೆಯ ಶಾಲಾ/ಕಾಲೇಜು ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ವಿನೋದ ಪಾಟೀಲ, ಅಧ್ಯಕ್ಷತೆ ವಹಿಸಿದ್ದ ಶೇಡಬಾಳ ಎಸ್‌ಎಸ್ ಸಮಿತಿಯ ಅಧ್ಯಕ್ಷ ವಿನೋದ ಬರಗಾಲೆ ಮಾತನಾಡಿದರು. ಈ ವೇಳೆ ಎಸ್‌ಎಸ್ ಸಮಿತಿಯ ನಿರ್ದೇಶಕರಾದ ಮಹಾವೀರ ಪಾಟೀಲ, ಸಮಾಜ ಸೇವಕಾರದ ಪ್ರಕಾಶ ಮಾಳಿ, ಸಂಸ್ಥೆಯ ಶಾಲಾ/ಕಾಲೇಜು ಕಾರ್ಯ ಮಂಡಳಿಯ ಸದಸ್ಯ ಅಶೋಕ ಕುಸುನಾಳೆ, ಮಹಾವೀರ್ ಹರದಿ, ಎ.ಬಿ. ಪಾಟೀಲ, ದೈಹಿಕ ನಿರ್ದೇಶಕ ಗೀರೀಶ ಮೋರೆ ಹಾಗೂ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಕುಮಾರ ವಿನಾಯಕ ಕೊಟ್ರಶೆಟ್ಟಿ, ಕುಮಾರಿ ಸಮೃದ್ಧಿ ಸವದತ್ತಿ ಸೇರಿದಂತೆ ಮಹಾವಿದ್ಯಾಲಯದ ಸಹ ಸಂಸ್ಥೆಗಳ ಎಲ್ಲಾ ಪ್ರಾಂಶುಪಾಲರುಗಳು, ಸಂಯೋಜಕರು, ಬೋಧಕ- ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಂಶುಪಾಲ ರವಿ ಎಸ್ ದಂಡಗಿ ಸ್ವಾಗತಿಸಿದರು. ಪ್ರೊ. ನಿರ್ಮಲಾ ಗಡಾದ ಡಾ. ಭರತ ಅಲಸಂದಿ ಪರಿಚಯಿಸಿದರು. ಪ್ರೊ. ನಾಗವೇಣಿ ದರನವರ ಮತ್ತು ಪ್ರೊ. ಪೂನಮ ಪಾಟೀಲ ನಿರೂಪಿಸಿದರು. ಬಿ.ಎಸ್ ಪಾಟೀಲ ವಂದಿಸಿದರು.