ಕ್ರೀಡೆ ಸಂಘಟಿತ, ಸ್ಪರ್ಧಾತ್ಮಕ ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆ: ಸತೀಶ ಪಾಟೀಲ

Sports Organized, competitive maneuvering physical activity: Satish Patil

ಕ್ರೀಡೆ ಸಂಘಟಿತ, ಸ್ಪರ್ಧಾತ್ಮಕ ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆ: ಸತೀಶ ಪಾಟೀಲ 

ವಿಜಯಪುರ 10: ಕ್ರೀಡೆ ಎಂಬುದು ಸಂಘಟಿತ, ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆಯಾಗಿದೆ ಶ್ರೀನಿವಾಸ ಕುಲಕರ್ಣಿ ಹೇಳಿದರು.  ಅವರು ವಿಜಯಪುರ ತಾಲೂಕಿನ ಕನ್ನೂರ ಗ್ರಾಮದಲ್ಲಿ ಶಾಂತಿ, ಪ್ರೀತಿ, ಏಕತೆಯ ಸಾಮರಸ್ಯಕ್ಕಾಗಿ ಕ್ರಿಕೆಟ್ ಎಂಬ ಧ್ಯೇಯದ ಅಡಿಯಲ್ಲಿ ಗ್ರಾಮೀಣ ವಲಯದ ಕ್ರೀಡಾಭಿಮಾನಿಗಳ ಆಶಯದಂತೆ ಗಣ್ಯಮಾನ್ಯ ಪ್ರೋತ್ಸಾಹದಿಂದ  ಕನ್ನೂರ ಪ್ರೀಮಿಯರ್ ಲೀಗ್ ಕೆ.ಎಸ.ಎಂ.ಪಿ.ಎಸ್‌. ಕನ್ನೂರ ಶಾಲೆಯಲ್ಲಿ ದಿ. 9ರಂದು 6 ಮುಕ್ತಾಯ ಸಂದರ್ಭದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿ ಮಾತನಾಡಿದರು.  

ಕ್ರೀಡೆಗಳು ನಮ್ಮ ಜೀವನದಲ್ಲಿ ಬಹುಮುಖಿ ಮತ್ತು ಅವಿಭಾಜ್ಯ ಪಾತ್ರವನ್ನು ವಹಿಸುತ್ತವೆ, ತಂಡದ ಕೆಲಸ, ಶಿಸ್ತು ಮತ್ತು ಸ್ಥಿತಿಸ್ಥಾಪಕತ್ವವನ್ನು ಬೆಳೆಸುತ್ತವೆ. ಅವು ವಿಭಿನ್ನ ಸಂಸ್ಕೃತಿಗಳ ನಡುವೆ ಸಾಮಾನ್ಯ ಭಾವನೆಯನ್ನು ಹೆಣೆಯುವ ಶಕ್ತಿಯನ್ನು ಹೊಂದಿವೆ, ಹಿನ್ನೆಲೆಯನ್ನು ಲೆಕ್ಕಿಸದೆ ಜನರನ್ನು ಒಟ್ಟುಗೂಡಿಸುತ್ತವೆ. ಒಳ್ಳೆಯದು ಅಥವಾ ಕೆಟ್ಟದು ಎಂದು ಪರಿಗಣಿಸಲಾದ ಕ್ರೀಡೆಗಳ ನಡುವೆ ವ್ಯತ್ಯಾಸವನ್ನು ಗುರುತಿಸುವ ಬದಲು, ಕ್ರೀಡೆಗಳು ನೀಡುವ ಸಕಾರಾತ್ಮಕ ಪಾಠಗಳನ್ನು ಒಪ್ಪಿಕೊಳ್ಳುವುದು ಹೆಚ್ಚು ಮೌಲ್ಯಯುತವಾಗಿದೆ. ಒಂದು ಅಂಕವನ್ನು ಸಾಧಿಸುವುದು ಅಥವಾ ಅಂಕಗಳನ್ನು ಗಳಿಸುವುದನ್ನು ಮೀರಿ, ಕ್ರೀಡೆಗಳು ಪಾತ್ರ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ರೂಪಿಸುವ ಅಗತ್ಯ ಜೀವನ ಕೌಶಲ್ಯಗಳನ್ನು ಕಲಿಸುತ್ತವೆ. ಕನ್ನೂರು ಗ್ರಾಮದಲ್ಲಿ ಕ್ರೀಕೇಟ್ ಆಡುವ ಅಭ್ಯರ್ಥಿಗಳು 60 ಆಟಗಾರರು ಇದ್ದಿದ್ದು, ಸಂತಸವನ್ನುಂಟು ಮಾಡಿದೆ. ಅದಲ್ಲದೇ ಈ 60 ಆಟಗಾರರಲ್ಲಿ ಮುಂಬರುವ ದಿನದಲ್ಲಿ ಭಾರತ ತಂಟದಲ್ಲಿ ಆಟಗಾರರಾಗಿ ಬಳಕೆಯಾಗುವುದು ಸಂದೇಹವೇ ಇಲ್ಲ ಎಂದರು.  

ರೈತ ಸಂಘದ ಜಿಲ್ಲಾ ಸಂಚಾಲಕ ಸತೀಶ ಪಾಟೀಲ ಮಾತನಾಡಿ, ಆಟದಲ್ಲಿ ಸೋಲು ಗೆಲವು ಖಚಿತ. ಸೋಲನ್ನು ಲೆಕ್ಕಿಸದೇ ಗಲುವನ್ನು ಹರ್ಷಿಸಿದೇ ಆಟದಲ್ಲಿ ಚಾಣಾಕ್ಷತನದಿಂದ ಆಡಿ ತಮ್ಮ ಗುರುತನ್ನು ಕಂಡುಕೊಳ್ಳಬೇಕು. ಶಾರ​‍್್‌ ಕೇರಲೇಯ ವ್ಯಕ್ತಿತ್ವವನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ತಮ್ಮ ಗುರಿಯನ್ನು ಸಾಧಿಸಿಕೊಳ್ಳಬೇಕು. ಆಟಗಾರರನ್ನು ಗುರುತಿಸಿ ಸರ್ಕಾರ ಮಟ್ಟದಲ್ಲಿ ಅವರ ವೈಯಕ್ತಿಕ ಜೀವನಕ್ಕೂ ಅನುಕೂಲವಾಗುವ ಪ್ರೋತ್ಸಾಹ ಧನವನ್ನು ನೀಡುವಲ್ಲಿ ಜನಪ್ರತಿನಿಧಿಗಳು ಹಾಗೂ ಸರ್ಕಾರ ಗಮನ ಹರಿಸಬೇಕು. ಕನ್ನೂರು ಗ್ರಾಮದಲ್ಲಿ ಕ್ರೀಡಾಂಗಣ ನಿರ್ಮಿಸುವುದಕ್ಕೆ ನಾವು ತನು-ಮನದಿಂದ ಶ್ರಮಿಸುತ್ತೇವೆ. ರಾಷ್ಟ್ರೀಯ ಕ್ರೀಕೇಟ್ ಪಟು ಹಾಗೂ ಕನ್ನೂರು ಗ್ರಾಮದ ಹೆಮ್ಮೆಯ ಪುತ್ರನಾದ ರಾಜೇಶ ಕನ್ನೂರ ಇವರ ಮಾದರಿಯಂತೆ ಮುಂಬರುವ ದಿನದಲ್ಲಿ ಕನ್ನೂರು ಗ್ರಾಮದ ಯುವಕರು ರಾಷ್ಟ್ರದಲ್ಲಿ ಗುರುತಿಸಿಕೊಂಡು ನಮ್ಮ ಗ್ರಾಮದ ಕೀರ್ತಿ ಹೆಚ್ಚಿಸಲಿ ಎಂದು ವಿಜೇತಾ ಕ್ರೀಡಾ ಪಟುಗಳಿಗೆ ಶುಭಹಾರೈಸಿ ಕನ್ನೂರ ಉತ್ತಮ ಮಟ್ಟದ ಕ್ರಿಕೇಟ್ ಕ್ರೀಡಾಂಗಣ ಮಾಡುವ ಕನ್ನಸನ್ನು ಹೊಂದಿರುವ ಈ ಕೆಪಿಎಲ್ ಆಯೋಜಕರಿಗೆ ಬೆನ್ನೆಲಬಾಗಿರುವೆ ಎಂದರು.  

ಮಲ್ಲಿಕಾರ್ಜುನ ಹಿರೇಮಠ ಮಾತನಾಡಿ, ಕ್ರೀಡೆ ದೈಹಿಕಕ್ಕೆ ಒಳ್ಳೆಯದು. ಯುವ ಜನಾಂಗ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಮೊಬೈಲ್‌ನಿಂದ ಯುವಕರು ಹೊರಬರಬೇಕು. ಇತ್ತೀಚಿನ ದಿನದಲ್ಲಿ ಯುವಕರು ಮೊಬೈಲ್‌ಗೆ ಬಲಿಯಾಗಿ ಕ್ರೀಡೆಗೆ ವಿರಾಮ ಹೇಳುತ್ತಿದ್ದಾರೆ. ಮೊಬೈಲ್ ಬಳಕೆ ಕಡಿಮೆ ಮಾಡಿ ಆಟೋಟಗಳಲ್ಲಿ ಪಾಲ್ಗೊಂಡು ದೇಶಕ್ಕೆ ಮಾದರಿಯಾಗಬೇಕೆಂದು ಕಿವಿಮಾತು ಹೇಳಿದರು.  

ಪ್ರೀಮಿಯರ್ ಲೀಗ್‌ನಲ್ಲಿ 5 ತಂಡ ಪಾಲ್ಗೊಂಡಿದ್ದವು. ಪ್ರಥಮ ಸ್ಥಾನ ಶೇಷಾದ್ರಿ ತಂಡ, ಕನ್ನೂರು ಕಿಂಗ್ಸ್‌  ದ್ವಿತೀಯ ಸ್ಥಾನ ಪಡೆದುಕೊಂಡಿತು. ಕ್ರಿಕೆಟ್‌ನಲ್ಲಿ ಪಾಲ್ಗೊಂಡವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.  

ರುದ್ರಗೌಡ ಪಾಟೀಲ, ಅಡಿವೆಪ್ಪ ಬೆಳ್ಳುಂಡಗಿ, ಅರ್ಜುನ ಕದಂ, ಹಣಮಂತ ಉಪ್ಪಾರ, ವಸಂತ ಬಡಿಗೇರ, ಲಾಲಸಾಬ ಕರೋಶಿ, ಗೋಪಾಲ ಘೋರೆ​‍್ಡ, ಸಿದ್ದಲಿಂಗಪ್ಪ ಅಥಣಿ, ಅನೀಲ ಅಡಳ್ಳಿ, ಸಂತೋಷ ತಳವಾರ, ಜಹಾಂಗೀರ ಬಾಲೆಬಾಯಿ, ರಾಜೇಶ ಕನ್ನೂರ, ಮುನ್ನಾ ಜಮಾದಾರ, ಹಣಮಂತ ಬಿರಾದಾರ, ಸಿದ್ದು ಪಾಜಿ, ಸಂಜೀವಕುಮಾರ ಪಾಟೀಲ, ಪ್ರಮೋದ ಪಾಟೀಲ, ಮುಸ್ತಾಕ ಪಠಾಣ, ಯಲ್ಲು ಅಥಣಿ, ಶಫೀಕ ಮುಜಾವರ, ಸಂಪತ್ ಕಾಪ್ಸೆ, ಸಿದ್ದು ಬೇನೂರ, ಸಿದ್ಧಣ್ಣ ಮೇತ್ರಿ, ಪುಂಡಲಿಕ ಇಚ್ಚೂರ, ಸಚೀನ ಪೂಜಾರಿ, ವಿಲಾಸ ಮಠಪತಿ, ಫಾರುಖ ಪಾಂಡು, ಈರ​‍್ಪ ಅಡಳ್ಳಿ, ಬುಂ.ಬುಂ ಸಚೀನ ಮುಂತಾದವರು ಇದ್ದರು.