ಸಂಬರಗಿ 05: ಸಂಬರಗಿ ಗ್ರಾಮದ ಪಶುಚಿಕಿತ್ಸಾ ಕೇಂದ್ರವನ್ನು ದುರಸ್ತಿಗಾಗಿ ಕಟ್ಟಡವನ್ನು ನೆಲಸಮ ಮಾಡಿ 2 ತಿಂಗಳು ಕಳೆದಿವೆ. ಇನ್ನೂವರೆಗೆ ಕಾಮಗಾರಿ ಪ್ರಾರಂಭವಾಗಿಲ್ಲ. ಜನರಿಗೆ ಇದರಿಂದ ತೊಂದರೆಯಾಗುತ್ತಿದೆ. ಶೀಘ್ರದಲ್ಲಿ ಈ ಕಾಮಗಾರಿಯನ್ನು ಪ್ರಾರಂಭಿಸಬೇಕೆಂದು ಸಂಬರಗಿ ಗ್ರಾ.ಪಂ ಅಧ್ಯಕ್ಷ ಮಹಾದೇವ ತಾನಗೆ ಒತ್ತಾಯಿಸಿದ್ದಾರೆ.
ಸಂಬರಗಿ ಗ್ರಾಮದ ಪಶುಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 1970ರಲ್ಲಿ ಈ ಕಟ್ಟಡವನ್ನು ನಿಮರ್ಾಣಗೊಳಿಸಲಾಯಿತು. ಇನ್ನೂವರೆಗೆ ಸುಮಾರು 49 ವರ್ಷಗಳು ಪೂರ್ಣಗೊಂಡಿವೆ. ಕನರ್ಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ಈ ಕಟ್ಟಡವನ್ನು ದುರಸ್ತಿಗೊಳಿಸಬೇಕಾಗಿದೆ. ಆದರೆ ಇನ್ನೂ ಕೆಲಸ ಪ್ರಾರಂಭವಾಗಿಲ್ಲ. ಸದ್ಯದಲ್ಲಿ ಪಶುಚಿಕಿತ್ಸಾ ಕೇಂದ್ರ ಬಾಡಿಗೆ ಮನೆಯ ಜಾಗದಲ್ಲಿ ನಡೆಯುತ್ತಿದೆ. ಈ ಕೇಂದ್ರಕ್ಕೆ ಅರಳಿಹಟ್ಟಿ, ಶಿರೂರ, ಪಾಂಡೇಗಾಂವ, ನಾಗನೂರ, ತಾಂವಶಿ ಗ್ರಾಮಗಳು ಬರುತ್ತಿವೆ. ಸದ್ಯದಲ್ಲಿ ಕಟ್ಟಡ ನೆಲಕಚ್ಚಿದ ಪರಿಣಾಮ ರೈತರಿಗೆ ಪಶು ಚಿಕಿತ್ಸಾ ಕೇಂದ್ರ ಎಲ್ಲಿದೆ? ಎಂದು ಹುಡುಕಾಡುವ ಪರಿಸ್ಥಿತಿ ಬಂದಿದೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸಿ ನೆಲಸಮ ಮಾಡಿರುವ ಕಟ್ಟಡವನ್ನು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲವಾದರೆ ಹೋರಾಟ ಮಾಡಲಾಗುವದೆಂದು ಅವರು ಎಚ್ಚರಿಸಿದರು.
ಸಚೀನ ಬನ್ನೆ, ದಗಡು ನಿಕ್ಕಮ, ನಾಮದೇವ ಲೋಹಾರ ಉಪಸ್ಥಿತರಿದ್ದರು