ಮಹಾಲಿಂಗಪುರದಲ್ಲಿ 22 ರಿಂದ 30 ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳ ಅಧ್ಯಾತ್ಮ ಪ್ರವಚನ
Spiritual discourse by Gavisiddeshwara Sri of Koppal from 22nd to 30th in Mahalingapura
ಮಹಾಲಿಂಗಪುರ 16: ನಗರದಲ್ಲಿ ಅಧ್ಯಾತ್ಮ ಹಬ್ಬದ ವಾತಾವರಣ ಕಳೆ ಗಟ್ಟಿದೆ ಎಲ್ಲಿ ನೋಡಿದರು ಅಲ್ಲಿ ಒಂದೇ ಮಾತು ಕೊಪ್ಪಳ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳ ಪ್ರವಚನ ಕೇಳುವ ಭಾಗ್ಯ ನಮ್ಮ ನಗರಕ್ಕೆ ಲಭಿಸಿದ್ದು ನಮ್ಮ ಪುಣ್ಯ ಎಂಬ ಮಾತು ಕೇಳಿ ಬರುತ್ತಿದೆ. ಕೊಪ್ಪಳ ಶ್ರೀಗಳ ಪ್ರವಚನ 22 ರಿಂದ 30 ರ ವರೆಗೆ 9 ದಿನಗಳ ಕಾಲ ನಗರದ ಕೆ ಎಲ್ ಇ ಕಾಲೇಜ್ ಹತ್ತಿರವಿರುವ ಅಂಗಡಿ ಮೈದಾನದಲ್ಲಿ ನಡೆಯಲಿದ್ದು. ಇದಕ್ಕಾಗಿ ಪೂರ್ವ ಸಿದ್ಧತೆಗಳು ಕಳೆದ 15 ದಿನಗಳಿಂದ ಭರದಿಂದ ಸಾಗಿವೆ. ಪ್ರತಿದಿನ ಸಾಯಂಕಾಲ 6 ರಿಂದ 7 ರ ವರೆಗೆ ಪ್ರವಚನ ನಡೆಯಲಿದ್ದು ಪ್ರದೇಶವನ್ನು ಸ್ವಚ್ಛಗೊಳಿಸಿದ್ದು ಮಧುವನಗಿತ್ತಿಯಂತೆ ಕಂಗೊಳಿಸುತ್ತಿದೆ.
ಸುಮಾರು 10 ರಿಂದ 20 ಸಾವಿರಕ್ಕೂ ಹೆಚ್ಚು ಭಕ್ತರು ಸೇರುವ ನೀರೀಕ್ಷೆಯಿದ್ದು ಕೆಳಗೆ ಕುಳಿತು ಪ್ರವಚನ ಕೇಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಹಿರಿಯ ಜೀವಿಗಳಿಗೆ ಪ್ರತೇಕ ಕುರ್ಚಿ ವ್ಯವಸ್ಥೆ ಮಾಡಲಾಗಿದೆ. ಸುತ್ತಲಿನ ಎಲ್ಲೆಡೆ ಬೆಳಕಿನ ವ್ಯವಸ್ಥೆ ಹಾಗೂ ಧ್ವನಿವರ್ಧಕ ಅಳವಡಿಸಲಾಗಿದೆ. ಸದ್ಭಾವನಾ ಯಾತ್ರೆ : ಪ್ರತಿ ದಿನ ಬೆಳ್ಳಿಗೆ 6,30 ಗಂಟೆಗೆ ಶ್ರೀಗಳ ನೇತೃತ್ವದಲ್ಲಿ ಅಧ್ಯಾತ್ಮ ಪ್ರವಚನ ಪ್ರಯುಕ್ತ ನಗರದ ವಿವಿಧ ಬಡಾವಣೆ ಹಾಗೂ ಗ್ರಾಮಗಳಲ್ಲಿ ಸದ್ಭಾವನಾ ಪಾದಯಾತ್ರೆ ಜರುಗಲಿದೆ.
ನ 22 ರಂದು ಶನಿವಾರ ಮಹಾಲಿಂಗೇಶ್ವರ ಮಠದಿಂದ ಪ್ರಾರಂಭವಾಗಿ ನಡುಚೌಕಿ, ಯಲ್ಲಮ್ಮನ ಗುಡಿ ಕುಬುಸದ ಗಲ್ಲಿ ನೀಲಕಂಟೇಶ್ವರ ಗುಡಿ ರಸ್ತೆ ಬುದ್ನಿ ಪಿ ಡಿ ಮಹಾಲಿಂಗೇಶ್ವರ ಗುಡಿಯಲ್ಲಿ ಸಮಾಪ್ತಿ.ನ 23 ರವಿವಾರ ಪುರಸಭೆ ಎದುರಗಡೆ ಆರಂಭವಾಗಿ ಚಿಮ್ಮಡ ಗಲ್ಲಿ ರಾಮನಗೌಡ ಪ್ಲಾಟ್, ಭೋವಿ ವಡ್ಡರ ಓಣಿ, ಸಾಧುನ ಗುಡಿ ರಸ್ತೆ, ಆಯಿಲಮಿಲ್ ಪ್ಲಾಟ್, ಪಶು ಆಸ್ಪತ್ರೆಗೆ ಸಮಾಪ್ತಿಯಾಗುವುದು. ನ 24 ಸೋಮವಾರ ಬಸವನಗರ ಮಹಾದ್ವಾರದಿಂದ ಆರಂಭವಾಗಿ ಸಿ ಆರ್ ಕುಳ್ಳೊಳ್ಳಿ ಸರ್ಕಲ್, ಬಂದಿಗಣಿ ಮಠ ರಸ್ತೆ,ಸಿ ಕೆ ಚಿಂಚಲಿ ಶಾಲೆಯ ಹತ್ತಿರ ಸಮಾಪ್ತಿಯಾಗುವುದು. ನ 25 ಮಂಗಳವಾರ ಕಲ್ಪಡಗಲ್ಲಿ ಹನುಮಾನ ಗುಡಿಯಿಂದ ಆರಂಭವಾಗಿ ಪೆಂಡಾರಿ ಗಲ್ಲಿ ನಡುಚೌಕಿ ರಸ್ತೆ, ಕುದರಿ ಓಣಿ, ಕಾಗಿ ಓಣಿ, ಚನ್ನಗಿರೇಶ್ವರ ಗುಡಿಯಲ್ಲಿ ಮುಕ್ತಾಯ. ನ 26 ಬುಧವಾರ ಚಿಮ್ಮಡ ಗ್ರಾಮದಲ್ಲಿ, ಸಂಚಾರ, ನ 27 ರಂದು ಗುರುವಾರ ನಾಗರಾಳ ಗ್ರಾಮದಲ್ಲಿ ಸಂಚಾರ, ನ 28 ಶುಕ್ರವಾರ ಮಧಬಾವಿ ಗ್ರಾಮದಲ್ಲಿ ಸಂಚಾರ, ನ 29 ಶನಿವಾರ ಮಿರ್ಜಿ ಗ್ರಾಮದಲ್ಲಿ ಸಂಚಾರ, ನ 30 ರವಿವಾರ ರನ್ನ ಬೆಳಗಲಿ ಪಟ್ಟಣದಲ್ಲಿ ಸಂಚಾರ ಹೀಗೆ ಒಂಬತ್ತು ದಿನ ಸದ್ಭಾವನಾ ಯಾತ್ರೆ ಕೈಗೊಂಡು ಭಕ್ತರ ಭವನೆ ನಿಗಿಸುವ ಉದ್ದೇಶ ಹೊಂದಿದೆ ಆದ್ದರಿಂದ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡು ಶ್ರೀಗಳ ಪ್ರವಚನ ಆಲಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮ ಯಶಸ್ವೀಗೊಳಿಸುವಂತೆ ಕೋರಲಾಗಿದೆ.
ಪೂರ್ವಭಾವಿ ಸಭೆ : ಶನಿವಾರ ಸಾಯಂಕಾಲ 7 ಗಂಟೆಗೆ ಜಗದ್ಗುರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಿ ಎಸ್ ಅಯ್ ಕಿರಣ ಸತ್ತಿಗೇರಿ ಪ್ರವಚನಕ್ಕೆ ಬರುವ ಭಕ್ತರು ಆಭರಣ ಹಾಕಿಕೊಂಡು ಬರಬಾರದು ಚಿಕ್ಕಮಕ್ಕಳನ್ನು ಕರೆದುಕೊಂಡು ಬರಬಾರದು, ಅತೀ ವಯಸ್ಸಾದ ಹಿರಿಯರು ಬರಬಾರದು. ದೂರದಿಂದ ಬರುವ ಭಕ್ತರು ಹೆಲ್ಮೆಟ್ ಕಡ್ಡಾಯವಾಗಿ ಹಾಕಿಕೊಂಡು ಬರಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ಕೊಡದೆ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಪ್ರವಚನ ಕಾರ್ಯಕ್ರಮ ಯಶಸ್ಸುಗೊಳಿಸಬೇಕೆಂದರು. ಈ ಸಂಧರ್ಭದಲ್ಲಿ ನೂರಾರು ಭಕ್ತರು ಭಾಗವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 