ಸ್ಪಧರ್ಾ ಕಾರ್ಯಕ್ರಮ ಉದ್ಘಾಟನೆ

ಲೋಕದರ್ಶನ ವರದಿ

ಸಿದ್ದಾಪುರ,19: ಶ್ರೀರಾಮದೇವಮಠ ಭಾನ್ಕುಳಿಯ ಗೋಸ್ವರ್ಗ ಸಂಸ್ಥಾನದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ) ಬೆಂಗಳೂರು ಅವರು ಉತ್ತರ ಕನ್ನಡ ಪ್ರಾಂತದ ಹವ್ಯಕರಿಗಾಗಿ ರವಿವಾರ ಹಮ್ಮಿಕೊಂಡಿದ್ದ ಸ್ಪಧರ್ಾ ಕಾರ್ಯಕ್ರಮ ಪ್ರತಿಬಿಂಬ(ಉತ್ತರ)ವನ್ನು ಶಿಕ್ಷಣ ಪ್ರಸಾರಕ ಸಮಿತಿಯ ಉಪಾಧ್ಯಕ್ಷ, ಯುವ ಸಾಮಾಜಿಕ ಮುಂದಾಳು ಡಾ.ಶಶಿಭೂಷಣ ಹೆಗಡೆ ದೊಡ್ಮನೆ ಉದ್ಘಾಟಿಸಿದರು.

 ನಂತರ ಮಾತನಾಡಿದ ಅವರು ಪರಿಶ್ರಮ, ವಿದ್ಯೆ, ಪ್ರತಿಭೆ ಯಾರ ಸೊತ್ತೂ ಅಲ್ಲ. ಹುಟ್ಟಿನಲ್ಲಿ ಬಂದ ಅಸಮಾನತೆ, ರೂಪ, ಆಥರ್ಿಕ ಪರಿಸ್ಥಿತಿಯನ್ನು ಮೀರಿ ಬಹುಮುಖವಾಗಿ ಬೆಳೆಯುವಲ್ಲಿ ಪ್ರತಿಭೆ ಕೆಲಸಮಾಡುತ್ತದೆ. ಅಂಕ ಪಡೆದು ಜೀವನದಲ್ಲಿ ಮುಂದೆ ಬರುವುದು ನಿಜವಾದ ಜೀವನವಲ್ಲ, ಜೀವನ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಮುಖ್ಯ ಎಂದುರು.

 ಅಮೇರಿಕಾದಂತಹ ಮುಂದುವರಿದ ದೇಶಗಳಲ್ಲಿ ಕ್ರೀಡೆ, ಸಾಹಿತ್ಯ, ಕಲೆಯ ಮೂಲಕ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಅದರಲ್ಲೇ ಸಾಕಷ್ಟು ಜನರು ಉದ್ಯೋಗ, ಉತ್ಪನ್ನ ಕಂಡುಕೊಳ್ಳುತ್ತಿದ್ದಾರೆ. ನಮ್ಮ ದೇಶದ ದೊಡ್ಡ ಪಟ್ಟಣಗಳಲ್ಲಿಯೂ ಕಲೆಯ ಮೂಲದಿಂದ ಜೀವನವನ್ನು ಕಂಡುಕೊಳ್ಳಲು ಸಾಧ್ಯವಿದೆ ಎಂದು ಅನೇಕ ಪ್ರತಿಭೆಗಳು ಸಾದರ ಪಡಿಸಿವೆ. ಹವ್ಯಕ ಸಮುದಾಯಕ್ಕೆ ದೈವದತ್ತವಾಗಿ, ವಂಶಪಾರಂಪರ್ಯವಾಗಿ ಪ್ರತಿಭೆಯ ಅಂಶ ವಂಶವಾಹಿನಿಯಲ್ಲಿಯೇ ಹರಿದುಬರುತ್ತದೆ. ಸಮಾಜದಲ್ಲಿಯ ಏರುಪೇರು ನಿವಾರಿಸಿ ಸಮಾನತೆ ಸಾಧಿಸುವ ನಿಟ್ಟಿನಲ್ಲಿ ಪ್ರತಿಬಿಂಬದಂತಹ ಸ್ಪಧರ್ಾ ಕಾರ್ಯಕ್ರಮ ಪೂರಕ ಎಂದು ಅವರು ಅಭಿಪ್ರಾಯಪಟ್ಟರು. ಪ್ರತಿಬಿಂಬದಲ್ಲಿ ಮಕ್ಕಳ ಜೊತೆ ಮಹಿಳೆಯರಿಗೂ ತಮ್ಮ ಪ್ರತಿಭಾ ಪ್ರಕಾಶಕ್ಕೆ ಅವಕಾಶವಿರುವುದು ಸ್ವಾಗತಾರ್ಹ. ಸೃಜನಾತ್ಮಕ ಪ್ರಜೆಯಾಗಿ ರೂಪುಗೊಳ್ಳುವಲ್ಲಿ ಈ ಕಾರ್ಯಕ್ರಮ ಪೂರಕವಾಗಿದ್ದು ಇಂತಹ ಕಾರ್ಯಕ್ರಮವನ್ನು ಎಲ್ಲರೂ ಬೆಂಬಲಿಸಬೇಕು ಎಂದರು. 

     ಮುಖ್ಯ ಅತಿಥಿಗಳಾಗಿ ಗೋಸ್ವರ್ಗ ಸಂಸ್ಥಾನದ ಅಧ್ಯಕ್ಷ  ಆರ್.ಎಸ್.ಹೆಗಡೆ ಹರಗಿ, ಟಿಎಂಎಸ್ ನಿದರ್ೇಶಕ ಎಂ.ಆರ್.ಹೆಗಡೆ ನೇಗಾರ, ಸಾಮಾಜಿಕ ಮುಖಂಡ ಎನ್.ವಿ.ಹೆಗಡೆ ಮುತ್ತಿಗೆ, ಹವ್ಯಕ ಮಹಾಮಂಡಳ ವ್ಯವಸ್ಥೆಯ ಭಾಸ್ಕರ ಹೆಗಡೆ ಕೊಡಗಿಬೈಲ, ಭಾನ್ಕುಳಿ ಶ್ರೀರಾಮದೇವಮಠದ ಎಂ.ಎಂ.ಹೆಗಡೆ ಮಗೇಗಾರ, ಸಿದ್ದಾಪುರ ಮಂಡಲ ಮಾಧ್ಯಮ ಪ್ರಧಾನ ಕೆಕ್ಕಾರ ನಾಗರಾಜ ಭಟ್ಟ ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಶ್ರೀಧರ ಜಯರಾಮ ಭಟ್ಟ ಅವರು ಹವ್ಯಕ ಸಮಾಜ ಜಗತ್ತಿನ ಅತ್ಯಂತ ಬುದ್ಧಿವಂತ ಸಮಾಜಗಳಲ್ಲಿ ಒಂದೆನಿಸಿದೆ. ಹವ್ಯಕ ಪ್ರತಿಭೆಗಳು ಹಳ್ಳಿ, ಪಟ್ಟಣ ಸೇರಿದಂತೆ ವಿಶ್ವದಾದ್ಯಂತ ವ್ಯಾಪಿಸಿದ್ದಾರೆ ಎಂದರು. ಡಿಸೆಂಬರ್ 28 ರಿಂದ ಮೂರು ದಿವಸಗಳ ಕಾಲ ಬೆಂಗಳೂರಿನಲ್ಲಿ  ಜರುಗಲಿರುವ ವಿಶ್ವ ಹವ್ಯಕ ಮಹಾಸಮ್ಮೇಳನ ಕುರಿತು ಸ್ಥೂಲವಾದ ಪರಿಚಯವನ್ನು ಅವರು ನೀಡಿ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಹವ್ಯಕ ಬಾಂಧವರೂ ಪಾಲ್ಗೊಳ್ಳುವಂತಾಗಬೇಕು ಎಂದರು. ಕು.ಸಮುದ್ಯತಾ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಹವ್ಯಕ ಮಹಾಸಭಾದ ಉಪಾಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು. ಜಿ.ಜಿ.ಹೆಗಡೆ ಬಾಳಗೋಡ ನಿರ್ವಹಿಸಿದರು. ಗಣಪತಿ ಹೆಗಡೆ ಗುಂಜಗೋಡ ವಂದಿಸಿದರು