ಜೀವನದ ಪ್ರತಿ ಕ್ಷಣವನ್ನು ಸಂತೋಷದಿಂದ ಕಳೆಯಿರಿ: ಸಿದ್ದಲಿಂಗ ದೇವರು
ರಾಯಬಾಗ 24: ಈ ಜೀವನ ಮತ್ತೆ ಮರಳಿ ಬಾರದೇ ಇರುವುದರಿಂದ ಜೀವನದ ಪ್ರತಿ ಕ್ಷಣವನ್ನು ಸಂತೋಷದಿಂದ ಕಳೆಯಬೇಕೆಂದು ವಿಜಯಪುರ ಜಿಲ್ಲೆಯ ತಾಳಿಕೋಟೆಯ ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಹೇಳಿದರು. ಸೋಮವಾರ ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಪಟ್ಟಣದ ಸತೀಶ ಚೌಗುಲೆ ಸ್ವತಂತ್ರ ಪದವಿಪೂರ್ವ ಕಾಲೇಜ ಮತ್ತು ದಿಗ್ಗೆವಾಡಿಯ ಜಿ.ಬಿ.ಚೌಗುಲೆ ಪದವಿಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಅಂಕ ಗಳಿಸುವುದು ಮಾತ್ರ ಶಿಕ್ಷಣ ಅಲ್ಲ, ಸಮಾಜದಲ್ಲಿ ಗೌರವಯುತ ಬದುಕುವುದರ ಜೊತೆಗೆ ಎಲ್ಲರಿಗೂ ಗೌರವ ನೀಡುವುದನ್ನು ಕಲಿಯುವುದು ನಿಜವಾದ ಶಿಕ್ಷಣ ಎಂದು ತಿಳಿಸಿದರು. ತಂದೆ-ತಾಯಿಯೇ ನಮಗೆಲ್ಲ ಪ್ರೇರಣೆ ಶಕ್ತಿಯಾಗಿದ್ದು, ಅವರು ಮೆಚ್ಚುವಂತಹ ಸಾಧನೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ನ್ಯಾಯಾಧೀಶ ಅರುಣ ಚೌಗುಲೆ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಎಲ್.ಬಿ.ಚೌಗುಲೆ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ವಿನಯ ಚೌಗುಲೆ, ಪ್ರಾಚಾರ್ಯ ಎಸ್.ಎ.ನಾಂದಣಿ, ಎಸ್.ಎಸ್.ದಿಗ್ಗೆವಾಡಿ, ಉಪನ್ಯಾಸಕರಾದ ಎಮ್.ಐ.ಬಡಿಗೇರ, ಎಸ್.ಎಸ್.ಕಾಡಾಪೂರೆ, ವಿ.ಎಸ್.ಭೆಂಡೆ, ಎಸ್.ಎಸ್.ಐಹೊಳೆ, ಎಮ್.ಎನ್.ಮುಲ್ಲಾ, ಅವಿನಾಶ ಹೊನ್ನಳ್ಳಿ, ಉದಯ ಕೋಟಿವಾಲೆ, ಇಸ್ಮಾಯಿಲ ನಂದಗಡಕರ, ರಮೇಶ ಶಿವಕ್ಕನವರ, ಸುರೇಖಾ ಹೆಗಡೆ ಹಾಗೂ ವಿದ್ಯಾರ್ಥಿಗಳು ಇದ್ದರು. ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.