ಲೋಕದರ್ಶನ ವರದಿ
ಹಳಿಯಾಳ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಹಾಗೂ ಜೆಡಿಎಸ್ ಪಕ್ಷದ ಬಗ್ಗೆ ಹಳಿಯಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನತೆಗೆ ವಿಶೇಷ ಪ್ರೀತಿಯಿರುವ ಕಾರಣ ಹಾಗೂ ಮೈತ್ರಿ ಪಕ್ಷವಾದ ಆಡಳಿತ ಕಾಂಗ್ರೆಸ್ದ ಬೆಂಬಲದ ಪರಿಣಾಮವಾಗಿ ಕ್ಷೇತ್ರದ ಜನತೆ ತಮ್ಮ ಕೈ ಹಿಡಿಯುವ ವಿಶ್ವಾಸವಿದೆ ಎಂದು ಕಾಂಗ್ರೆಸ್-ಜೆಡಿಎಸ್ ಅಭ್ಯಥರ್ಿ ಆನಂದ ಅಸ್ನೋಟಿಕರ್ ಹೇಳಿದರು.
ರವಿವಾರ ಹಳಿಯಾಳದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಗೆ ಆಗಮಿಸಿದ ಸಂದರ್ಭದಲ್ಲಿ ತಮ್ಮ ಒಡನಾಡಿಯಾದ ಎಸ್.ಎ. ಶೆಟವಣ್ಣವರ ಅವರ ಮನೆಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅಸ್ನೋಟಿಕರ್ ಮಾತನಾಡಿದರು. ಹಳಿಯಾಳ ವಿಧಾನಸಭಾ ಕ್ಷೇತ್ರವು ಕುಮಾರಸ್ವಾಮಿಯವರಿಗೆ ಪ್ರೀತಿಯ ಕ್ಷೇತ್ರವಾಗಿದೆ. ಕುಮಾರಸ್ವಾಮಿಯವರ ಪ್ರಭಾವದಿಂದ ಈ ಭಾಗದ ಜನತೆ ಜೆಡಿಎಸ್ ಅಭ್ಯಥರ್ಿ ಸುನೀಲ ಹೆಗಡೆ ಅವರಿಗೆ ಶಾಸಕರಾಗಿ ಆಯ್ಕೆ ಮಾಡಿದ್ದರು. ಸುನೀಲ ಹೆಗಡೆ ಪಕ್ಷ ತ್ಯಜಿಸಿದ ನಂತರ ತಮಗೆ ಆದ ನೋವನ್ನು ಕುಮಾರಸ್ವಾಮಿಯವರು ತನ್ನ ಬಳಿ ವೈಯಕ್ತಿಕವಾಗಿ ತೋಡಿಕೊಂಡಿದ್ದಾರೆ. ಈ ಭಾಗದಲ್ಲಿ ಸಕ್ಕರೆ ಕಾಖರ್ಾನೆ ನಿಮರ್ಿಸಲು ಚಾಲನೆ ನೀಡಲು ಮಾಡಿದ ಮಹತ್ವದ ನಿಧರ್ಾರ ಮೊದಲಾದ ಅನೇಕ ಜನಪರ ಕಾರ್ಯಗಳ ಕಾರಣ ಈ ಕ್ಷೇತ್ರದ ಜನತೆ ಜೆಡಿಎಸ್ ಪಕ್ಷದ ಬಗ್ಗೆ ಒಲವು ಹೊಂದಿದೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ತಮಗೆ ಹೆಚ್ಚಿನ ಬೆಂಬಲ ದೊರೆಯುವುದು ಎಂದು ತಿಳಿಸಿದರು.
ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ರವರುಗಳು ವಿಚಾರ-ವಿನಿಮಯ ಹಾಗೂ ಸಾಕಷ್ಟು ಚಚರ್ೆ ಮಾಡಿಯೇ ಉತ್ತರಕನ್ನಡ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡುವ ಬಗ್ಗೆ ಒಮ್ಮತದ ನಿಧರ್ಾರ ತೆಗೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ದೇವೇಗೌಡಾ, ಬಂಗಾರಪ್ಪಾ, ಕುಮಾರಸ್ವಾಮಿ ರವರ ಬಗ್ಗೆ ಭಾರೀ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಅವರುಗಳು ಹಾಗೂ ಮೈತ್ರಿ ಪಕ್ಷವಾದ ಕಾಂಗ್ರೆಸ್ ಪಕ್ಷದವರ ಪೂರ್ಣ ಸಹಕಾರ ಶ್ರೀರಕ್ಷೆಯಾಗಲಿದೆ. ಸಚಿವರಾದ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆಯವರ ಮುಂದಾಳತ್ವದಲ್ಲಿಯೇ ಪ್ರಚಾರ ಕಾರ್ಯ ಮಾಡಲಾಗುವುದು. ದೇಶಪಾಂಡೆಯವರ ಸೂಚನೆಯಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದರು.
ಭಾರತೀಯ ಜನತಾ ಪಕ್ಷದಲ್ಲಿ ಅಭ್ಯಥರ್ಿ ಅನಂತಕುಮಾರ ಹೆಗಡೆ ಅವರ ಬಗ್ಗೆ ಅತೃಪ್ತರ ಸಂಖ್ಯೆ ಸಾಕಷ್ಟಿದೆ. ಆ ಮತಗಳು ಸಹ ನಮಗೆ ದೊರೆಯುವ ನಿರೀಕ್ಷೆಯಿದೆ. ಈ ಹಿಂದಿನ ಚುನಾವಣೆಗಳಲ್ಲಿ ಬೇರೆ-ಬೇರೆ ಅಲೆಗಳಲ್ಲಿಯೇ ಗೆದ್ದು ಬಂದ ಅನಂತಕುಮಾರ ಹೆಗಡೆ ಅವರನ್ನು ಮತದಾರರು ಈ ಬಾರಿ ಸೋಲಿಸಲಿದ್ದಾರೆ. ಕೌಶಲ್ಯಾಭಿವೃದ್ಧಿ ಸಚಿವರಾದ ನಿರುದ್ಯೋಗಿ ಯುವಕರಿಗೆ ಕೆಲಸಕ್ಕೆ ಪ್ರೇರಣೆ ಹಾಗೂ ತರಬೇತಿ ನೀಡುವದನ್ನು ಬಿಟ್ಟು ಧರ್ಮ, ಜಾತಿಯ ವಿಷಬೀಜ ಬಿತ್ತಿ ಯುವಕರಿಗೆ ಯಾಮಾರಿಸುವದನ್ನು ಜನತೆ ಅರಿತುಕೊಂಡಿದ್ದಾರೆ.
ನಮ್ಮ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಏನನ್ನೂ ಮಾಡದ, ಜಿಲ್ಲೆಯ ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿ ಅಭಿವೃದ್ಧಿ ಕಾರ್ಯಗಳಿಗೆ ನಾಂದಿ ಹಾಡದ ಅನಂತಕುಮಾರ ಹೆಗಡೆ ರಾಜಕೀಯಕ್ಕೆ ನಯಾಪೈಸೆ ಉಪಯೋಗವಿಲ್ಲ. ಕೇವಲ ಮಾತುಗಳನ್ನಾಡುವ ಕಾರಣ ಅವರಿಗೆ ಮಠ ಕಟ್ಟಿಕೊಡುವುದು ಉತ್ತಮ ಎಂದು ಟೀಕಿಸಿದರು. ನಾನು ಸಂಸದನಾದರೆ ಪ್ರತಿ ತಾಲೂಕಿಗೆ ಕನಿಷ್ಠ 40 ದಿನಕ್ಕೊಮ್ಮೆಯಾದರೂ ಬಂದು ಜನಸ್ಪಂದನ ಸಭೆ ಮಾಡುತ್ತೇನೆ. ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗುವ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಪಾಲ್ಗೊಳ್ಳುತ್ತೇನೆ. ಜಿಲ್ಲೆಯ ಎಲ್ಲಾ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇನೆ ಎಂದು ಆನಂದ ಅಸ್ನೋಟಿಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಆರ್. ನಾಯ್ಕ, ಕ್ಷೇತ್ರಾಧ್ಯಕ್ಷ ನಾಗೇಂದ್ರ ಜಿವೋಜಿ, ಪ್ರಮುಖ ರಾದ ಎಸ್.ಎ. ಶೆಟವಣ್ಣವರ, ನಾರಾಯಣ ದಡ್ಡಿ ಮೊದಲಾದವರಿದ್ದರು.