ಕೆರಳ್ಳಿ ಗ್ರಾಮದ ಕೆರೆ ಹೂಳೆತ್ತುವ ಸ್ಥಳದಲ್ಲಿ ವಿಶೇಷ ರೋಜಗಾರ್ ದಿನಾಚರಣೆ

ಕೊಪ್ಪಳ 04: ಕೊಪ್ಪಳ ತಾಲೂಕಿನ ಗುಳ್ಳದಳ್ಳಿ ಗ್ರಾಮ ಪಂಚಾಯತಿಯ ಕೆರಳ್ಳಿ ಗ್ರಾಮದ ಕೆರೆ ಹೂಳೆತ್ತುವ ಸ್ಥಳದಲ್ಲಿ ವಿಶೇಷ ರೋಜಗಾರ್ ದಿನಾಚರಣೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಚರಿಸಲಾಯಿತು.  

ಗುಳದಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೆರಳ್ಳಿ ಗ್ರಾಮದ ಕೆರೆ ಹೂಳೆತ್ತುವ ಕೇಂದ್ರ ಸಕರ್ಾರದ ಪುರಸೃತ ಯೋಜನೆಯಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವಿಶೇಷ ರೋಜಗಾರ್ ದಿನಾಚರಣೆಯನ್ನು ಮಂಗಳವಾರದಂದು ಆಚರಿಸಲಾಯಿತು. 

ತಾಲೂಕ ತಾಂತ್ರಿಕ ಸಂಯೋಜಕರಾದ ಸಂತೋಷ ನಂದಾಪುರ ಮಾತನಾಡಿ, ಎಂಜಿಎನ್ಆರ್ಇಜಿಎ ಯೋಜನೆಯಡಿಯಲ್ಲಿ ಹಲವಾರು ಕಾಮಗಾರಿಗಳ ವಿಧಗಳನ್ನು ಜಾರಿಗೆ ತಂದಿದ್ದು, ಕೆರೆ ಅಭಿವೃದ್ಧಿ, ಕಣ ನಿಮರ್ಾಣ, ನಮ್ಮ ಹೊಲ ನಮ್ಮ ರಸ್ತೆ, ಆಟದ ಮೈದಾನ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ಚೆಕ್ ಡ್ಯಾಂ ನಿಮರ್ಾಣ ಮುಂತಾದ ಕಾಮಗಾರಿಗಳಲ್ಲಿ ಕೂಲಿಕಾರರು ಭಾಗವಹಿಸಿ ಕೆಲಸ ನಿರ್ವಹಿಸಿ ಕೂಲಿಯನ್ನು ತಮ್ಮ ಬ್ಯಾಂಕ್ ಖಾತೆಗೆ ಪಡೆಯಲು ಅರ್ಹರು.  ಕೂಲಿಕಾರರು ನಿರ್ವಹಿಸಿದ ಕೆಲಸಕ್ಕೆ ತಕ್ಕ ಕೂಲಿ ಅವರ ಬ್ಯಾಂಕ್ ಖಾತೆಗೆ ಜಮಾ ಆಗದಿದ್ದಲ್ಲಿ ಪ್ರತಿ ತಿಂಗಳು 2ನೇ ಗುರುವಾರದಂದು ನಡೆಯುವ ರೋಜಗಾರ್ ಸಭೆಯಲ್ಲಿ ಭಾಗವಹಿಸಿ, ಕುಂದು-ಕೊರೆತೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇದು ಸಹಕಾರಿಯಾಗಿದೆ.  ಒಂದು ವೇಳೆ ರೈತರು ತಮಗೆ ಜಮೀನು ಲಭ್ಯವಿಲ್ಲದೇ ಇದ್ದ ಪಕ್ಷದಲ್ಲಿ ವೈಯಕ್ತಿಕ ಕಾಮಗಾರಿಗಳಾದ ದನದದೊಡ್ಡಿ, ಕುರಿದೊಡ್ಡಿ, ವೈಯಕ್ತಿಕ ಶೌಚಾಲಯದ ಸುತ್ತ-ಮುತ್ತಲೂ ಸಸಿಗಳನ್ನು ಬೆಳೆಸಲು ಅವಕಾಶ ಇರುತ್ತದೆ.  ಸಕರ್ಾರದ ಸುತ್ತೋಲೆಗಳಿಗೆ ಎಲ್ಲರೂ ಬದ್ದರಾಗಿ ಈ ಯೋಜನೆಯಲ್ಲಿ ಭಾಗವಹಿಸಿ ಕೂಲಿ ನಿರ್ವಹಿಸಿ ಪ್ರತಿ ದಿನಕ್ಕೆ ರೂ. 249/- ಕೂಲಿ ಪಡೆದು ಗ್ರಾಮಗಳ ಅಭಿವೃದ್ದಿಗೆ ಕಂಕಣಬದ್ದರಾಗಿ ಕೂಲಿಕಾರರು ನಿಲ್ಲಬೇಕು ಎಂದರು.  

ಐಇಸಿ ಸಂಯೋಜಕ ದೇವರಾಜ ಪತ್ತಾರ ಮಾತನಾಡಿ, ಕಳೆದ ಸಾಲಿನಲ್ಲಿ ಜಾಬಕಾರ್ಡ ಹೊಂದಿದ ಯಜಮಾನ ಮಾತ್ರ ಬ್ಯಾಂಕ್ ಖಾತೆ ಹೊಂದಿದ್ದರೆ ಸಾಕು ಕೂಲಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿತ್ತು.  ಆದರೆ ಸಕರ್ಾರದ ಸುತ್ತೋಲೆ ಹೊರಡಿಸಿದ್ದು, ಜಾಬಕಾರ್ಡನಲ್ಲಿರುವ ಎಲ್ಲಾ ಸದಸ್ಯರ ಬ್ಯಾಂಕ್ ಖಾತೆ ಹೊಂದಿ ಜೊತೆಗೆ ಆಧಾರಕಾರ್ಡ ಬ್ಯಾಂಕ್ ಖಾತೆಗೆ ಜೋಡಣೆ ಮಾಡಲು ಆಧಾರ ಕಾರ್ಡನ ಜೆರಾಕ್ಸ್ ಪ್ರತಿಯನ್ನು ಸಂಬಂಧಪಟ್ಟ ಬ್ಯಾಂಕ್ಗೆ ನೀಡಿ ಲಿಂಕ್ ಮಾಡಲು ಎಲ್ಲರೂ ಅನುಸರಿಸಬೇಕು.  ಪ್ರಸಕ್ತ ಸಾಲಿನ ಮಳೆಯ ಪ್ರಮಾಣ ಕಡಿಮೆ ಆಗಿರುವದರಿಂದ ಕೂಲಿಕಾರರು ಗುಳೆ ಹೋಗದೇ ನಿಮ್ಮ ಗ್ರಾಮ ಪಂಚಾಯತಿಯ ಕ್ರಿಯಾ ಯೋಜನೆಯಲ್ಲಿರುವ ಕಾಮಗಾರಿಗಳಲ್ಲಿ ಕೂಲಿ ಕೆಲಸ ನಿರ್ವಹಿಸಿ ಕೂಲಿ ಪಡೆದು ಆಥರ್ಿಕ ಜೀವನಮಟ್ಟ ಸುಧಾರಿಸಿಕೊಳ್ಳಲು ಇದೊಂದು ಸದಾವಕಾಶವಾಗಿದೆ.  

ವಿಶೇಷ ರೋಜಗಾರ್ ದಿನಾಚರಣೆ ಕಾರ್ಯಕ್ರಮದಲ್ಲಿ ತಾಂತ್ರಿಕ ಸಹಾಯಕ ವಿಜಯ ಬಳಿಗಾರ, ಬೇರ್ಫೂಟ್ ಟೆಕ್ನಿಷಿಯನ್ ಗಾಳೆಪ್ಪ ಸೇರಿದಂತೆ ಕಾಯಕ ಬಂಧುಗಳು, ಕೂಲಿಕಾರರು ಉಪಸ್ಥಿತರಿದ್ದರು.  118 ಕೂಲಿಕಾರರು ರೋಜಗಾರ್ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು.