ಸ್ವಯಂ ಉದ್ಯೋಗ ಕುರಿತು ಕುರಿತು ವಿಶೇಷ ಉಪನ್ಯಾಸ
ಕಲಾದಗಿ 16 : ಇಂದಿನ ಯುವ ಜನತೆ ಸ್ವಯಂ ಉದ್ಯೋಗ ಮಾಡಿಕೊಂಡು ಆರ್ಥಿಕವಾಗಿ ಸದೃಡವಾಗಿ ಕುಟುಂಬವನ್ನು ಉನ್ನತ ಮಟ್ಟಕ್ಕೆ ತರಬೇಕೆಂದು ನಾಗರಾಳದ ಪ್ರಿಯದರ್ಶಿನಿ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀದೇವಿ ಮುಸರಿ(ಮುಂಡಗನೂರ) ಹೇಳಿದರು.ಸ್ಥಳೀಯ ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಪ್ಲೇಶಮೆಂಟ್ ಸೆಲ್(ಆಂತರೀಕ ಕೋಶ) ವಿಭಾಗದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಆರಿ ಕೆಲಸದ ತರಬೇತಿ ಹಾಗೂ ಸ್ವಯಂ ಉದ್ಯೋಗ ಕುರಿತು ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ, ಪಶು ಸಂಗೋಪನೆ, ಬುಟ್ಟಿ ಹೆಣೆಯುವದು, ಚಾಪೆ ಹೆಣೆಯುವದು, ಅಗರಬತ್ತಿ ತಯಾರಿಕೆ, ಕಂಪ್ಯೂಟರ್,ಮೊಬೈಲ್ ರೀಪೇರಿ, ಝರಾಕ್ಸ ಅಂಗಡಿ ಇನ್ನಿತರ ಕೌಶಲ್ಯಗಳನ್ನು ಬೆಳೆಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಒಂದೇ ಆದಾಯವನ್ನು ನಂಬಿಕೊಂಡು ಬದುಕುವದಕ್ಕಿಂತ ಮನೆಯಲ್ಲಿರುವ ಎಲ್ಲ ಸದಸ್ಯರು ಬೇರೆ ಬೇರೆ ಉದ್ಯೋಗ ಮಾಡಬಹುದು ಎಂದರು. ಆರಿ ಕೆಲಸದ ಕೌಶಲ್ಯದ ಕುರಿತು ಮಾಹಿತಿ ನೀಡಿದರು.ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ.ಎಚ್.ಬಿ.ಮಹಾಂತೇಶ ಮಾತನಾಡಿ, ಇಂದಿನ ವೈಜ್ಞಾನಿಕ ಯುಗದಲ್ಲಿ ಉದ್ಯೋಗ ಮಾಡುವಲ್ಲಿ ಯಾವುದೇ ಕೊರತೆಗಳಿಲ್ಲ.ಪ್ರತಿಯೊಂದು ಕೆಲಸದ ಕೌಶಲ್ಯಗಳನ್ನು ಅರಿತುಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು.ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು, ಐಕ್ಯೂಎಸಿ ಸಂಚಾಲಕರಾದ ಪ್ರೊ.ಸರೋಜಿನಿ ಹೊಸಕೇರಿ, ಗ್ರಂಥಪಾಲಕರಾದ ಸಿ.ವಾಯ್.ಮೆಣಸಿನಕಾಯಿ ಸೇರಿದಂತೆ ಎಲ್ಲ ಉಪನ್ಯಾಸಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.ಕು.ಯಂಕಮ್ಮ ಸ್ವಾಗತಿಸಿದರು.ಕು.ಶುಷ್ಮಾ ಗುರಿಕಾರ ನಿರೂಪಿಸಿದರು. ಕು.ರೂಪಾ ಸಂಶಿ ವಂದಿಸಿದರು.