ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಗ್ರಾಮೀಣ ಆಚರಣೆಗಳು ವಿಷಯದ ಕುರಿತು ವಿಶೇಷ ಉಪನ್ಯಾಸ : ಜ್ಯೋತಿ ದಿವಟೆ
ಕಲಾದಗಿ 13 : ಪಾಶ್ಚಾತ್ಯರ ಅನುಕರಣೆಯಿಂದ ನಮ್ಮ ಗ್ರಾಮೀಣ ಆಚರಣೆಗಳು ಮರೆಯಾಗುತ್ತಿವೆ ಎಂದು ಬಾಗಲಕೋಟ ಬಿವಿವಿ ಸಂಘದ ಉಪನ್ಯಾಸಕರಾದ ಪ್ರೊ.ಜ್ಯೋತಿ ದಿವಟೆ ಹೇಳಿದರು. ಇಲ್ಲಿಯ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಅಡಿಯಲ್ಲಿ ಸಮಾಜಶಾಸ್ತ್ರ ವಿಭಾಗದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಬದಲಾಗುತ್ತಿರುವ ಗ್ರಾಮೀಣ ಆಚರಣೆಗಳು ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಾ, ನಮ್ಮ ಆಚರಣೆಗಳು ಪರಂಪರಾತವಾಗಿ ಬಂದಿವೆ. ಆಚರಣೆಗಳು ವೈಜ್ಞಾನಿಕ ಮನೋಭಾವಣೆಗಳಿಂದ ಕೂಡಿವೆ. ಕಾಲ ಬದಲಾದಂತೆ ಪಾಶ್ಚಾತ್ಯರ ಆಚರಣೆಗಳತ್ತ ನಮ್ಮ ಯುವಕರು ಆಕರ್ಷಿತರಾಗಿ ನಮ್ಮತನ ಮೆರೆಯುತ್ತಿದ್ದಾರೆ.ಧಾರ್ಮಿಕ ವಿಧಿ ವಿಧಾನಗಳು, ಪೂಜೆ ಪುರಸ್ಕಾರಗಳ ಆಚರಣೆಗಳಿಂದ ಯುವಕರು ವಿಮುಖರಾಗುತ್ತಿದ್ದಾರೆ. ಕೇವಲ ವಾಟ್ಸಾಪ ಸ್ಟೇಟಸ್, ಪೇಸಬುಕ್ ಗಳಲ್ಲಿ ಮಾತ್ರ ಆಚರಣೆಗಳನ್ನು ಕಾಟಾಚಾರಕ್ಕೆಂಬಂತೆ ಚಿತ್ರ ಹಾಕಿ ಫೊಸ್ ಕೊಡುವ ಸಂಸ್ಕೃತಿ ಬೆಳೆಯುತ್ತಿದೆ ಎಂದು ವಿಷಾಧ. ವ್ಯಕ್ತಪಡಿಸಿದರು.ಪ್ರಾಚಾರ್ಯ ಡಾ.ಎಚ್.ವಿ.ಮಹಾಂತೇಶ ಮಾತನಾಡಿ,ಸಮಾಜದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿವೆ. ಈ ಮೊದಲುಮನೆಯಲ್ಲಿ ಒಪ್ಪಿದ ವಧು ವರನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಬದಲಾದ ಜೀವನದಲ್ಲಿ ಮದುವೆ ಸಂಪ್ರದಾಯ ಕಡಿಮೆಯಾಗುತ್ತಿದೆ. ನಗರೀಕರಣದಿಂದ ಆಚರಣೆಗಳು ಮರೆಯಾಗುತ್ತಿವೆ. ಹಿಂದೂಗಳಲ್ಲಿ ಮುರಿಯಲಾರದ ವಿವಾಹಗಳಿದ್ದವು. ಆದರೆ ಕುಟುಂಬ ಕಲಹಗಳಿಂದ ವಿವಾಹ ವಿಛ್ಚೇದನಗಳಿಂದ ಕುಟುಂಬಗಳು ಒಡೆಯುತ್ತಿವೆ. ಮಕ್ಕಳು ಮದುವೆಯಾದ ನಂತರ ತನ್ನ ಪತ್ನಿಯೊಂದಿಗೆ ಬೇರೆ ಮನೆ ಮಾಡುತ್ತಿರುವದರಿಂದ ಅವಿಭಕ್ತ ಕುಟುಂಬಗಳು ಕಡಿಮೆಯಾಗುತ್ತಿವೆ. ಆಗ ಕಿರಿಯರು ಹಿರಿಯರ ಮಾತು ಕೇಳುತ್ತಿದ್ದರು. ಇಂದು ಹಿರಿಯರಿಗೂ ಗೌರವ ಸಿಗುತ್ತಿಲ್ಲ. ಸ್ವಾತಂತ್ರ್ಯ ಸ್ವೇಚ್ಚಾಚಾರಕ್ಕೆ ಬಲಿಯಾಗಿದೆ ಎಂದು ಹೇಳಿದರು.ಉಪನ್ಯಾಸಕಿ ಶ್ರೀಮತಿ ಶ್ರೀದೇವಿ ಮುಂಡಗನೂರ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು, ಐಕ್ಯೂಎಸಿ ಸಂಚಾಲಕರಾದ ಪ್ರೊ.ಸರೋಜಿನಿ ಹೊಸಕೇರಿ, ಡಾ.ಬಿಂದು ಎಚ್.ಎ, ಸೇರಿದಂತೆ ಎಲ್ಲ ಉಪನ್ಯಾಸಕರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ಧರು. ಕು.ಯಂಕಮ್ಮ. ಸ್ವಾಗತಿಸಿದರು. ಕು.ಶುಷ್ಮಾ ಗುರಿಕಾರ ನಿರೂಪಿಸಿದರು. ಕು.ರೂಪಾ ಸಂಶಿ ವಂದಿಸಿದರು.