ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರ
ಬೆಳಗಾವಿ 19: ಕೆ.ಎಲ್.ಇ. ಶುಶ್ರೂಷಾ ಮಹಾವಿದ್ಯಾಲಯ ಬೆಳಗಾವಿ ಎನ್.ಎಸ್.ಎಸ್. ಘಟಕ -26 ಇವರ ಸಂಯುಕ್ತ ಆಶ್ರಯದಲ್ಲಿ ವಿಶೇಷ ವಾರ್ಷಿಕ ಶಿಬಿರವನ್ನು ದಿನಾಂಕ: 16/12/2024 ರಿಂದ ಅಗಸಗಾ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಿಬಿರದ ಅಂಗವಾಗಿ ಪ್ರತಿ ದಿನ ಸ್ವಚ್ಛತಾ ಕಾರ್ಯಕ್ರಮ ಹಾಗೂ ಧ್ವಜಾರೋಹಣ ಮತ್ತು ವಿಭಿನ್ನ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಈ ಶಿಬಿರವು ಆರೋಗ್ಯ ಜಾಗೃತಿ, ಪರಿಸರ ಮತ್ತು ವಯಕ್ತಿಕ ಸ್ವಚ್ಛತೆ, ಮಹಿಳಾ ಸಬಲಿಕರಣ ವಿಷಯದ ಮೇಲೆ ಆಧಾರಿತವಾಗಿತ್ತು. ಶಿಬಿರದ ಅಂಗವಾಗಿ, ಋತುಚಕ್ರದ ಆರೈಕೆ,ಸ್ತನ ಕ್ಯಾನ್ಸರ ಬಗ್ಗೆ ಜಾಗೃತಿ, ಗಿಡ ನೆಡುವ ಕಾರ್ಯಕ್ರಮ, ಹಿರಿಯ ನಾಗರಿಕರ ತಪಾಸಣೆ, ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಿಸುವ ಕುರಿತು ಸಮಾಲೋಚನೆ, ಸ್ಮರಣ ಶಕ್ತಿ ಸ್ಫರ್ಧೆ, ಮಧುಮೇಹ ತಪಾಸಣೆ, ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ, ಶಾಲಾ ಮಕ್ಕಳ ತಪಾಸಣೆ, ಪೋಷಣ ಅಭಿಯಾನ, ಶಾಲಾ ಶಿಕ್ಷಕರಿಗಾಗಿ ಪ್ರಥಮ ಚಿಕಿತ್ಸೆ ಮತ್ತು ಹೃದಯ ರಕ್ತನಾಳದ ಪುನ:ರುಜ್ಜೀವನ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರತಿ ದಿನ ಸಂಜೆ ಶಾಲಾ ಮಕ್ಕಳು ಮತ್ತು ಗ್ರಾಮಸ್ಥರಿಗಾಗಿ ಕ್ರೀಡೆ ರಂಗೋಲಿ, ರಸಪ್ರಶ್ನೆ, ಪ್ರಬಂಧ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳನ್ನು ಏರಿ್ಡಸಿ ಬಹುಮಾನ ವಿತರಿಸಲಾಯಿತು.
ಕೆ.ಎಲ್.ಇ. ಶುಶ್ರೂಷಾ ಮಹಾವಿದ್ಯಾಲಯ ಪ್ರಾಚಾರ್ಯರಾದ ಪ್ರೊ (ಡಾ).ವೀರೇಶಕುಮಾರ ನಂದಗಾವ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಕೆ.ಎಲ್.ಇ. ಎನ್ ಎಸ್.ಎಸ್ ವಿಶ್ವವಿದ್ಯಾಲಯದ ಸಂಯೋಜನಾಧಿಕಾರಿ ಡಾಽಽ ಸಯ್ಯದ್ ಕಿಲ್ಲೆದಾರ್, ಕೆ.ಎಲ್.ಇ. ಶುಶ್ರೂಷಾ ಮಹಾವಿದ್ಯಾಲಯದ ಎನ್.ಎಸ್.ಎಸ್. ಸಂಯೋಜನಾಧಿಕಾರಿಗಳಾದ ಶ್ರೀಮತಿ ನಮ್ರತಾ ದೇವಲಕರ, , ಶ್ರೀ. ಸಂಜೀವ ಬಡ್ಲಿ, ಶ್ರೀ ಮಹೇಶ ಬ್ಯಾಳಗೌಡರ, ಅಗಸಗಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಅಮೃತ ಮುದ್ದಣ್ಣವರ, ಉಪಾಧ್ಯಕ್ಷರಾದ ಶ್ರೀಮತಿ ಶೋಭಾ ಕುರೆನ್ನವರ, ಎಸ್‌ಡಿಎಂಸಿ, ಅಧ್ಯಕ್ಷರಾದ ಶ್ರೀ ರಮೇಶ ಸಿದ್ದಪ್ಪಾ ಪಾಟೀಲ, ಶ್ರೀ ಜ್ಯೋತಿಬಾ ಗೆವಡೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಯರಾದ ಶ್ರೀ ಪಿ.ಆರ್.ಚವಾಣ, ಶ್ರೀಮತಿ ಮಾಲತಿ ಕಾಂಬಳೆ, ಮತ್ತು ಗ್ರಾಮ ಪಂಚಾಯತ ಸದಸ್ಯರು ಹಾಗೂ ಎನ್.ಎಸ್.ಎಸ್. ಸ್ವಯಂ ಸೇವಕರು ಮತ್ತು ಊರಿನ ನಾಗರಿಕರು ಶಿಬಿರದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.