ಶ್ರೀ ಶಿವಕುಮಾರ ಮಹಾಸ್ವಾಮಿಗಳಿಗೆ ನುಡಿನಮನ

ಲೋಕದರ್ಶನ ವರದಿ

ಸಿಂದಗಿ 23:ತ್ರಿವಿಧ ದಾಸೋಹಿ, ಶತಾಯುಷಿ, ನಡೆದಾಡುವ ದೇವರು, ಕನರ್ಾಟಕ ರತ್ನ ಸಿದ್ದಗಂಗಾ ಮಠದ ಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳ ಆತ್ಮಕ್ಕೆ ಚಿರಶಾಂತಿ ಕೊರಿ ಸ್ಥಳಿಯ ಭೀಮಾ ಯುನಿವರ್ಸಲ್ ಸೆಂಟ್ರಲ್ ಸ್ಕೂಲ್ ಮಕ್ಕಳು ಬುಧವಾರ ಭಗವಂತನಲ್ಲಿ  ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅಪರ್ಿಸಿದರು.  

ಶಾಲೆಯ ನಿದರ್ೇಶಕ, ಹಿರಿಯ ಸಂಶೋಧಕ ಡಾ. ಎಂ ಎಂ ಪಡಶೆಟ್ಟಿಯವರು ಮಾತನಾಡಿ, ಶ್ರೀಗಳ 111 ವರ್ಷಗಳ ಬಗ್ಗೆ ಮಾತನಾಡುತ್ತಾ    ಶ್ರೀಗಳು ಹೆಚ್ಚು ಆಯುಷ್ಯ ಪಡೆದುಕೊಂಡು ಈ ನಮ್ಮ ನಾಡಿನಲ್ಲಿ ಜನಿಸಿದ್ದರು. ಜಗತ್ತಿನಲ್ಲಿ 6 ನೇ ಶತಾಯುಷಿ.  ಶ್ರೀಗಳು ಶಿಕ್ಷಣಕ್ಕೆ ಬಹಳ ಮಹತ್ವ ನೀಡಿದರು. 124 ಶಿಕ್ಷಣ ಸಂಸ್ಥೆಗಳು ಸ್ಥಾಪಿಸಿದರು. 10000 ಸಾವಿರ ವಿದ್ಯಾಥರ್ಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಲ್ಲ ವಿದ್ಯಾಥರ್ಿಗಳಿಗೆ ವಿದ್ಯೆ, ವಸತಿ, ಅನ್ನ ಕೊಟ್ಟು ಜ್ಞಾನ ನೀಡಿದರು ಎಂದು ಹೇಳಿದರು.

ನಮ್ಮ ನಾಡಿನ ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದವರು. ಅವರು ನಮ್ಮಿಂದ ಅಗಲಿ ಹೋಗಿದ್ದಾರೆ. ನಾವು ಒಂದಲ್ಲ ಒಂದು ದಿನ ಅಗಲಿ ಹೋಗುತ್ತೆವೆ. ಶ್ರೀಗಳ ಅಗಲಿಕೆಯಿಂದ ನಮ್ಮೆಲ್ಲರಿಗೆ ದುಃಖ ಉಂಟು ಶಿವಕುಮಾರ ಎಂದರೆ ಶಿವನ ಕುಮಾರ, ದೇವರು ತನ್ನ ಮಗನಿಗೆ ತಾನು ಕರೆದುಕೊಂಡ ಆದ್ದರಿಂದ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾಥರ್ಿಸೋಣ ಎಂದರು.

ಶಾಲೆಯ ಅಧ್ಯಕ್ಷ ವಿಠ್ಠಲ ಜಿ. ಕೊಳ್ಳೂರ, ನಿದರ್ೇಶಕರಾದ ಜಿ.ಕೆ. ಪಡಗಾನೂರ, ಪ್ರಶಾಂತ ಕಮತಗಿ, ಭೀಮಾಶಂಕರ ತಾರಾಪೂರ, ದತ್ತು ಮಾವೂರ, ಶಿವಶರಣ ಮಾವೂರ, ಶ್ರೀಮಂತ ಮಲ್ಲೇದ, ಶಾಂತು ಕುಂಬಾರ ಪ್ರಾಚಾರ್ಯರು, ಶಿಕ್ಷಕ ವೃಂದದವರು, ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.