ಸ್ಪೀಕರ್, 'ಕೈ' ಏಜೆಂಟ್ರಂತೆ ವರ್ತನೆ: ಶೋಭಾ ಕರಂದ್ಲಾಜೆ ಟೀಕೆ

ಶೋಭಾ ಕರಂದ್ಲಾಜೆ

ಬೆಂಗಳೂರು 15: ಗೌರವಾನ್ವಿತ ಸ್ಪೀಕರ್ ಸ್ಥಾನದಲ್ಲಿರುವ ರಮೇಶ್ ಕುಮಾರ್ ಅವರು ನೃತ್ಯಗಾರ್ತಿಯರು ಮತ್ತು ಹೆಣ್ಣು ಮಕ್ಕಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ಅವರ ಮಾನಸಿಕತೆಯನ್ನು ತೋರಿಸುತ್ತದೆ. 

  ಅವರು ಕಾಂಗ್ರೆಸ್ ಏಜೆಂಟ್ರಂತೆ ವರ್ತಿಸುತ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭರತನಾಟ್ಯ, ಯಕ್ಷಗಾನ ಮತ್ತು ನೃತ್ಯಗಳಿಂದ ಅನೇಕ ಮಂದಿ ದೇವರನ್ನು ಒಲಿಸಿಕೊಂಡಿದ್ದಾರೆ. ಇಂತಹ ನೃತ್ಯದ ಬಗ್ಗೆ ಸ್ಪೀಕರ್ ಅವರು ಅವಹೇಳನಕಾರಿಯಾಗಿ, ಹಗುರವಾಗಿ ಮಾತನಾಡಿದ್ದಾರೆ, ಅವರು ತಕ್ಷಣ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

   ರಾಜ್ಯ ಸಮ್ಮಿಶ್ರ ಸರಕಾರ ಬಹುಮತ ಕಳೆದುಕೊಂಡಿದೆ. 

  ಮುಖ್ಯಮಂತ್ರಿ ಸ್ವಯಂ ಇಚ್ಛೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಅವರಿಗೆ ಗೌರವ ಬರುತ್ತದೆ. ಶಾಸಕರೊಂದಿಗೆ ದರ್ಪ ತೋರಿದ ಕುಮಾರಸ್ವಾಮಿ ಅವರ ನಡೆಯಿಂದ ಅತೃಪ್ತ ಶಾಸಕರು, ಈಗ ಕಾಂಗ್ರೆಸ್ ನಾಯಕರ ಭೇಟಿಗೂ ಅವಕಾಶ ನೀಡುತ್ತಿಲ್ಲ. ಅವರ ಭೇಟಿಯನ್ನು ನಿರಾಕರಿಸುತ್ತಿದ್ದಾರೆ ಎಂದು ಹೇಳಿದರು. 

  ಮಹಾಘಟಬಂಧನ್ ಹೇಗೆ ನಡೆಯುತ್ತಿದೆ ಎಂಬುದಕ್ಕೆ ಕನರ್ಾಟಕದ ಸಮ್ಮಿಶ್ರ ಸರಕಾರವೇ  ಉತ್ತಮ ನಿದರ್ಶನ. ಸಮ್ಮಿಶ್ರ ಸರಕಾರ ಸಂಪೂರ್ಣ ವೈಫಲ್ಯ ಕಂಡಿದೆ ಎಂಬುದು ಜಗಜ್ಜಾಹೀರಾಗಿದೆ ಎಂದು ಶೋಭಾ ಹೇಳಿದರು.