ಪ್ರದೀಪ ನಾಗನೂರ, ಗೋಕಾಕ
ಪ್ರಸಕ್ತ ವರ್ಷದ ಬೇಸಿಗೆಯ ಬಿಸಿಲಿನ ತಾಪ ಈಗಾಗಲೇ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದ ಹಲವಡೆ ಈಗ ಜನ, ಜಾನುವಾರಗಳಿಗೆ ಕುಡಿಯುವ ನೀರಿನ ಹಾಹಾಕಾರದ ಪರಿಸ್ಥಿತಿ ನಿಮರ್ಾಣವಾಗುತ್ತಿದೆ. ಇಂತಹ ದುಸ್ಥಿತಿಯನ್ನರಿತಿರುವ ಗೋಕಾಕ ತಾಲೂಕಿನ ಗುಜನಾಳ ವಲಯದ ಅರಣ್ಯ ಇಲಾಖೆ ವಲಯಾಧಿಕಾರಿ ಸಂಗಮೇಶ ಎನ್ ಪ್ರಭಾಕರ ಅವರು ತಮ್ಮ ಮನೆಯ ಅಂಗಳದಲ್ಲಿ ಹಾಗೂ ಗುಜನಾಳ ಅರಣ್ಯವಲಯ ವ್ಯಾಪ್ತಿಯ ಅಲ್ಲಲ್ಲಿ ಪಕ್ಷಿಗಳಿಗೆ ಸಣ್ಣ ಪ್ರಮಾಣದ ನೀರಿನ ತೊಟ್ಟಿ, ಹೊಂಡಗಳನ್ನು ನಿಮರ್ಿಸಿ ಪಕ್ಷಿ ಸಂಕುಲ ಸಂರಕ್ಷಣೆಗೆ ಮುಂದಾಗಿದ್ದಾರೆ.
ಚಿಲಿಪಿಲಿ ಕಲರವ ಮಾಡುತ್ತಿದ್ದ ಸಣ್ಣ ಪಕ್ಷಿಗಳ ಸಂತತಿ ದಿನದಿಂದ ದಿನಕ್ಕೆ ಕಣ್ಮರೆಯಾಗುತ್ತಿದೆ. ಅದರಲ್ಲೂ ಗುಬ್ಬಚ್ಚಿಗಳ ಕಲರವ ಇಂದು ಗಪ್ ಚುಪ್.! ಇದನ್ನರಿತ ಅರಣ್ಯವಲಯಾಧಿಕಾರಿ ಸಂಗಮೇಶ ಅವರು ತಮ್ಮ ಮನೆಯ ಅಂಗಳದಲ್ಲಿ ಹಾಗೂ ಗುಜನಾಳ ಅರಣ್ಯವಲಯ ವ್ಯಾಪ್ತಿಯ ಅಲ್ಲಲ್ಲಿ ಪಕ್ಷಿಗಳಿಗೆ ಸಣ್ಣ ಪ್ರಮಾಣದ ನೀರಿನ ತೊಟ್ಟಿ, ಹೊಂಡಗಳನ್ನು ನಿಮರ್ಿಸಿ ಈಗ ಪಕ್ಷಿ ಪ್ರೇಮಿ ಎನಿಸಿಕೊಂಡಿದ್ದಾರೆ.
ಅವರು ವಾಸವಾಗಿರುವ ತಮ್ಮ ಮನೆಯಂಗಳದಲ್ಲಿರುವ ಗಿಡ, ಮನೆಯ ಅಕ್ಕ-ಪಕ್ಕ ಪಕ್ಷಿಗಳ ವಾಸಕ್ಕೆ ಅನುಗುಣವಾಗಿ ನೈಸಗರ್ಿಕ ಪರಿಸರ, ಪಕ್ಷಿಗಳ ಇರುವಿಕೆಗಾಗಿ ಮಾನವ ನಿಮರ್ಿತ ಗುಬ್ಬಚ್ಚಿ ಗೂಡುಗಳನ್ನು ಹಾಕಿ ಬಡ್ಸರ್್ ನೇಸ್ಟ್, ಬಡ್ಸರ್್ ಪೀಡರ್, ಬಡ್ಸ್ ಬಾತ್ ತೊಟ್ಟಿಗಳನ್ನು ಅಳವಡಿಸಿ ಗಾಡರ್ಿನಿಂಗ್ ಮಾಡುವ ಮೂಲಕ ಬಡ್ಸರ್್ ಹಬಿಟೆಟ್ ಆಶ್ರಯ ತಾಣ ನಿಮರ್ಿಸಿ, ನೀರು, ಅನ್ನ ಹಾಕಿ ಗುಬ್ಬಚ್ಚಿಗಳ ಹಾಗೂ ಪಕ್ಷಿ ಸಂಕುಲ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಈಗ ಮನೆಯಂಗಳ ಬಡ್ಸರ್್ ನೇಸ್ಟ್ ಗುಬ್ಬಿ, ಪಕ್ಷಿಗಳ ಮನೆಯಾಗಿ ಪರಿವರ್ತನೆಯಾಗಿದ್ದು, ಗುಬ್ಬಚ್ಚಿಗಳು ತಾ..ಮುಂದೂ...ನಾ..ಮುಂದು ಅಂತಾ ಡಾಮೇನೆಟ್ ಸ್ಪಧರ್ೆಯ ಮೂಲಕ ಗೂಡು ಸೇರುತ್ತಿವೆೆ. ಗುಬ್ಬಚ್ಚಿಗಳು ಇಲ್ಲಿ ಬಂದು ಹೋಗುವುದಲ್ಲದೇ, ವಾಸವಾಗಿರುವದರಿಂದ ಮನೆಯ ಸುತ್ತಲೂ ಗುಬ್ಬಚ್ಚಿಗಳ ಚಿಲಿಪಿಲಿ ಕಲರವ ಸದಾ ಕೇಳುತ್ತಿರುತ್ತದೆ. ಹೀಗಾಗಿ ಅರಣ್ಯಾಧಿಕಾರಿ ಸಂಗಮೇಶ ಎನ್ ಪ್ರಭಾಕರ ಅವರ ಮನೆಯಂಗಳ ಇಂದು ಪಕ್ಷಿಗಳ ಆಶ್ರಯ ತಾಣವಾಗಿ ಮಾರ್ಪಟ್ಟಿದೆ.
ಮನೆಯವರ ಕಾಳಜಿ: ನನ್ನ ಮನೆಯ ಆವರಣದಲ್ಲಿರುವ ಗಿಡ, ಗಂಟಿ, ಬಗೆ ಬಗೆಯ ಹೂ ಗಿಡಗಳು ನೀರು ಹಾಕಿ ಹಚ್ಚ ಹಸಿರಿರುವಂತೆ ಹಾಗೂ ಗುಬ್ಬಚ್ಚಿಗಳಿಗೆ ನೀರು, ಕಾಳು, ಕಡಿ ಹಾಕುವ ನಿತ್ಯ ಕಾಯಕದಲ್ಲಿ ನನ್ನ ಮಕ್ಕಳಾದ ಪ್ರೇರಣಾ, ಪ್ರತೀಕ್ಷಾ ಹಾಗೂ ಪತ್ನಿ ಗೀತಾ ಗುಬ್ಬಚ್ಚಿ ಪಕ್ಷಿ ಸಂಕುಲ ಉಳಿವಿಗಾಗಿ ನನ್ನ ಜೊತೆ ಕೈ ಜೋಡಿಸಿ ಕಾಯಕ ನಿರತ ಸಹಾಯಕವಾಗಿದ್ದಾರೆ ಎಂದು ಅರಣ್ಯ ಇಲಾಖೆಯ ಆರ್ಎಫ್ಒ ಸಂಗಮೇಶ ಅವರು ಹೇಳುವ ಮಾತು.
ಪಕ್ಷಿಗಳ ಜಲದಾಹ ತಣಿಸಲು ಮನವಿ: ಬೇಸಿಗೆಯ ಹಿನ್ನಲೆಯಲ್ಲಿ ಇಂದು ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಪಕ್ಷಿ ಸಂಕುಲದ ಜಲದಾಹ ತೀರಿಸಲು ಪ್ರತಿಯೊಬ್ಬರೂ ತಮ್ಮ ಮನೆಯ ಮೇಲ್ಛಾವಣಿೆ, ಮನೆಯ ಮುಂದೆ ಅಕ್ಕ-ಪಕ್ಕದ ಕೈತೋಟ, ಉದ್ಯಾನ ಹಾಗೂ ಸುತ್ತಲಿನ ಗಿಡಗಂಟಿಗಳಿರುವ ಪ್ರದೇಶದಲ್ಲಿ ಅಗಲವಾದ ಪಾತ್ರೆಗಳಲ್ಲಿ ನೀರು ಹಾಕಿ ಪಕ್ಷಿ ಸಂಕುಲದ ಬಾಯಾರಿಕೆ ಹಾಗೂ ಉಳುವಿಗಾಗಿ ಅರಣ್ಯ ಸಚಿವ ಸತೀಶ ಜಾರಕಿಹೊಳಿಯವರ ಆಶಯದಂತೆ ಇಂದು ಪ್ರತಿಯೊಬ್ಬರೂ ಪರಿಸರ ಹಾಗೂ ಪಕ್ಷಿ ಸಂಕುಲ ಸಂರಕ್ಷಣೆ ಮಾಡಲು ಮುಂದಾಗಬೇಕು ಅಂಬುವುದು ಸಂಗಮೇಶ ಎನ್ ಪ್ರಭಾಕರ ಅವರ ಮನವಿಯಾಗಿದೆ.