ದಕ್ಷಿಣ ಭಾರತ ವಿಜ್ಞಾನ ವಸ್ತು ಪ್ರದರ್ಶನ ವಿಜೇತರಿಗೆ ಸನ್ಮಾನ

ದಕ್ಷಿಣ ಭಾರತ ವಿಜ್ಞಾನ ವಸ್ತು ಪ್ರದರ್ಶನ ವಿಜೇತರಿಗೆ ಸನ್ಮಾನ South India Science Exhibition winners felicitated

ಧಾರವಾಡ 29: ಇತ್ತೀಚಿಗೆ ತೆಲಂಗಾಣ ರಾಜ್ಯದ ಹೈದರಾಬಾದ್‌ನಲ್ಲಿ ಜರುಗಿದ ದಕ್ಷಿಣ ಭಾರತ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ವಿಜೇತರಾಗುವ ಮೂಲಕ ಧಾರವಾಡ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿರುವ ವಿದ್ಯಾರ್ಥಿ ಹಾಗೂ ಮಾರ್ಗದರ್ಶಿ ಶಿಕ್ಷಕರುಗಳನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪರವಾಗಿ ಉಪನಿರ್ದೇಶಕರು (ಅಭಿವೃದ್ಧಿ) ಹಾಗೂ ಪ್ರಾಚಾರ್ಯರು ಡಯಟ್ ಬಸವರಾಜ ನಾಲತವಾಡ ಅವರು ಸನ್ಮಾನಿಸಿದರು. ಉಪನಿರ್ದೇಶಕರು (ಆಡಳಿತ) ಎಸ್‌.ಎಸ್‌.ಕೆಳದಿಮಠ, ಡಿವೈಪಿಸಿ ಎಸ್‌.ಎಂಹುಡೇದಮನಿ, ಧಾರವಾಡ (ಗ್ರಾ) ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಟಿಸಿಡಬ್ಲ್ಯು ಪ್ರಾಚಾರ್ಯ ರವಿಕುಮಾರ ಬಾರಾಟಕ್ಕೆ, ಡಯಟ್ ಹಿರಿಯ ಉಪನ್ಯಾಸಕ ದೀಪಕ ಕುಲಕರ್ಣಿ ಹಾಜರಿದ್ದರು.

ಹುಬ್ಬಳ್ಳಿ ತಾಲೂಕಿನ ಶ್ರೀ.ಎಸ್‌.ಆರ್‌.ಬೊಮ್ಮಾಯಿ ಸರಕಾರಿ ಪ್ರೌಢಶಾಲೆ ಗುಂಪು ವಿಭಾಗದಲ್ಲಿ ಆಟೋಮೆಟಿಕ್ ಇಂಜಿನ್ ಲಾಕ್ ಸಿಸ್ಟಮ್ ವಿಷಯದಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿಗಳಾದ ಕುಮಾರ್ ಶಂಕರ್ ಹೂಗಾರ್ ಮತ್ತು ನವೀನ್ ನಾಯಕ್ ಇವರು ವಿಜೇತರಾಗಿದ್ದಾರೆ. ಇವರಿಗೆ ಎಸ್‌.ಬಿ.ಭಾವಿಕಟ್ಟಿ ಶಿಕ್ಷಕರು ಮಾರ್ಗದರ್ಶನ ಮಾಡಿದ್ದರು. ಈ ಶಾಲೆಯ ವಿದ್ಯಾರ್ಥಿಗಳು ಕರ್ನಾಟಕ ಸೈನ್ಸ್‌ ಮತ್ತು ಟೆಕ್ನಾಲಜಿ ಪ್ರಮೋಷನ್ ಸೊಸೈಟಿ ಬೆಂಗಳೂರು ಇವರ ವತಿಯಿಂದ ವಿಶೇಷ ಬಹುಮಾನವನ್ನು ಪಡೆದಿರುತ್ತಾರೆ.  ಧಾರವಾಡದ ಪ್ರೆಸೆಂಟೇಷನ್ ಬಾಲಕಿಯರ ಪ್ರೌಢಶಾಲೆಯ ವೈಯಕ್ತಿಕ ವಿಭಾಗದಲ್ಲಿ ಸೆನ್ಸರ್ ಲೈಟ್ ಹೌಸ್ ವಿಷಯದಲ್ಲಿ 9ನೇ ತರಗತಿಯ ಕುಮಾರಿ ಆಫಶೀನ್ ರಾಹುತ್ ಕರ್ನಾಟಕ ರಾಜ್ಯದ ವಿಭಾಗದಲ್ಲಿ  ಪ್ರಥಮ ಬಹುಮಾನವನ್ನು ಪಡೆದಿರುತ್ತಾರೆ. ಶಾಲೆಯ ಸವಿತಾ ಶಿಗಾವಿ ಶಿಕ್ಷಕರು ಮಾರ್ಗದರ್ಶನ ಮಾಡಿರುತ್ತಾರೆ.