ಧ್ವಜಾರೋಹಣ ಕಾರ್ಯಕ್ರಮಕ್ಕೆ ಪಿಕೆಪಿಎಸ್ ಕೆಲ ಸದಸ್ಯರು ಗೈರು: ಖಂಡನೆ

Some PKPS members absent from flag hoisting program: Condemnation

ಧ್ವಜಾರೋಹಣ ಕಾರ್ಯಕ್ರಮಕ್ಕೆ ಪಿಕೆಪಿಎಸ್ ಕೆಲ ಸದಸ್ಯರು ಗೈರು: ಖಂಡನೆ 

ಜಮಖಂಡಿ 27: ತಾಲೂಕಿನ ಸಾವಳಗಿ ಗ್ರಾಮದಲ್ಲಿ ದೇಶಕ್ಕೆ ಸಂವಿಧಾನ ನೀಡಿದ ಡಾ, ಬಿ, ಆರ್, ಅಂಬೇಡ್ಕರ್ ಅವರ ಪಾತ್ರ ಬಹುಮುಖ್ಯವಾದದ್ದು. ಸಂವಿಧಾನ ಸಮರೆ​‍್ಣ ಮಾಡಿದ ದಿನದಂದು ಪಿಕೆಪಿಎಸ್ ಕೆಲವು ಸದಸ್ಯರು 76 ನೇ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮಕ್ಕೆ ಗೈರಾಗಿದಕ್ಕೆ ದಲಿತ ಸಂಘಟನೆಗಳು ತೀವ್ರವಾಗಿ ಖಂಡಿಸಿದ್ದಾರೆ. 

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಸವರಾಜ ಪರಮಗೌಡ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಈಗಾಗಲೇ ಗಣರಾಜ್ಯೋತ್ಸವ ಕಾರ್ಯಕ್ರಮದ ಮುಂಚಿತವಾಗಿ ಎಲ್ಲರಿಗೂ ಆಹ್ವಾನ ನೀಡಿದ್ದು, ಬೆಳ್ಳಗೆ 8 ಜನ ಸದಸ್ಯರು ಹಾಜರಾಗಿಲ್ಲ, ಗಣರಾಜ್ಯೋತ್ಸವ ರಾಷ್ಟ್ರೀಯ ಹಬ್ಬವಾಗಿದ್ದು, ಇವರು ಯಾವ ಕಾರಣಕ್ಕೆ ಹಾಜರಾಗಿಲ್ಲ ಎಂಬುದು ತಿಳಿದಿರುವುದಿಲ್ಲ. ಇದು ಒಂದು ಉದ್ದೇಶ ಪೂರ್ವಕವಾಗಿ ಬಂದಿರುವುದು ಗೊತ್ತಿಲ್ಲ, ದೇಶಕ್ಕೆ ಅಗೌರವ ತೋರಿದ್ದು ನಾನು ಕೂಡಾ ಖಂಡಿಸುತ್ತೇನೆ ಎಂದರು. 

ಘಟನೆ ತಿಳಿಯುತ್ತಿದ್ದಂತೆ ದಲಿತ ಮುಖಂಡರು ಹಾಗೂ ಸ್ಥಳೀಯ ಮುಖಂಡರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಪ್ರತಿಭಟನೆ ನಡೆಸಿ ಗಣರಾಜ್ಯೋತ್ಸವಕ್ಕೆ ಬಾರದ ಸದಸ್ಯರು ಗಣರಾಜ್ಯೋತ್ಸವಕ್ಕೆ ಅವಮಾನ ಮಾಡಿದ್ದಾರೆ, ಭಾರತದಲ್ಲಿ ಸಂವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾಗಿದೆ. ಇವರಿಗೆ  ದೇಶಾಭಿಮಾನಕ್ಕಿಂತ ಸಂವಿಧಾನ ಅಭಿಮಾನಕ್ಕಿಂತ ಅಧಿಕಾರ ಮುಖ್ಯವಾಗಿದೆ ಎಂದು ಅನಿಸುತ್ತದೆ ಇದರ ಬಗ್ಗೆ ಮೇಲಾಧಿಕಾರಿಗಳ ಗಮನ ಹರಿಸಬೇಕು ಎಂದು ಆಗ್ರಹಿಸಿದರು.  

12  ಜನ ಸದಸ್ಯರಲ್ಲಿ 8 ಜನ ಗೈರಾಗಿ ಕೇವಲ 4 ಜನ ಮಾತ್ರ ಸದಸ್ಯರು ಮಾತ್ರ ಗಣರಾಜ್ಯೋತ್ಸವಕ್ಕೆ ಭಾಗಿಯಾಗಿದ್ದಾರೆ, ಸದಸ್ಯರು ಬಾರದ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವಕ್ಕೆ ಅವಮಾನ ಮಾಡಿದ್ದಾರೆ ಎಂದು ದಲಿತ ಮುಖಂಡ ರಾಜು ಕರಾಬೆ ಆಕ್ರೋಶ ವ್ಯಕ್ತಪಡಿಸಿದರು.  

ಅನೀಲ ತಿಕೋಟಾ, ಸಿದ್ದು ಬಂಡಿವಡ್ಡರ, ಅಮೀತ ಸೂರಗೊಂಡ ಮಾತನಾಡಿದರು.  

ಪ್ರತಿಭಟನೆಯಲ್ಲಿ ಸುಭಾಷ ಪಾಟೋಳಿ, ಶ್ರೀಕಾಂತ ಗೌಳಿ,ರಾಜು ಭಜಂತ್ರಿ, ರಾಜು ಕರಾಭಿ, ಸಿದ್ದಾರ್ಥ ತಳಕೇರಿ, ಸಾಗರ ಕಾಂಬಳೆ, ಚಂದು ಮಾದರ, ಗಜಾನನ ಮಾಳಿ, ಉಮೇಶ ಮಾನೆ, ಆದಿ ತೀಕೋಟಾ, ಮಾಯಪ್ಪ ಬಾಪಕರ, ಶಿವನಿಂಗ ಬಂಡಿವಡ್ಡರ, ಮಹೇಶ ಹೊನವಾಡ ಸೇರಿದಂತೆ ಅನೇಕರು ಇದ್ದರು. 


ಬಾಕ್ಸ್‌: 1, 

ಹಾಜರಾದ ಸದಸ್ಯರ ಸದಸ್ಯರು ವಿವರ: 

ಅಧ್ಯಕ್ಷ ಬಸುಗೌಡ ಪರಮಗೌಡ, ಉಪಾಧ್ಯಕ್ಷ ಅಂಬವ್ವ ಗ. ಬಾಪಕರ, ಸದಸ್ಯರಾದ ಚೇತನ ಗೌಳಿ, ಶ್ರೀಕಾಂತ ಗೌಳಿ,  


ಬಾಕ್ಸ್‌: 2 

ಗಣರಾಜ್ಯೋತ್ಸವಕ್ಕೆ ಗೈರಾದ ಸದಸ್ಯರು ಬಸವರಾಜ ಶೇಗುಣಸಿ, ಭರತೇಶ ಕವಟೇಕರ, ಸಂಗಪ್ಪ ಆಲಗೂರು, ಶಿವರಾಜ ಯಕ್ಸಂಬೆ, ಲವಾ ಮಾಳಿ, ಶೋಭಾ ವಜ್ರವಾಡ, ಅಶೋಕ ಮಾಂಗ, ರಾಜಕುಮಾರ ತಳವಾರ,