ಎಸ್ಸಿಎಚ್ ಪ್ರತಿಷ್ಠಾನದಿಂದ ಸೈನಿಕರಿಗೆ ಸನ್ಮಾನ

ಬೈಲಹೊಂಗಲ: ಸ್ಥಳೀಯ ಗೋವನಗೊಪ್ಪ ಗ್ರಾಮದ ಸಣ್ಣವೀರಪ್ಪ ಚನ್ನಬಸಪ್ಪ ಹೊಂಗಲ ಪ್ರತಿಷ್ಠಾನದಲ್ಲಿ 73ನೇಯ ಸ್ವಾತಂತ್ರ್ಯ ಉತ್ಸವವನ್ನು ವಿಶೇಷವಾಗಿ ಭಾರತೀಯ ಸೇನಾ ಸೈನಿಕರಿಗೆ ಸನ್ಮಾನ ಮಾಡುವ ಮೂಲಕ ಆಚರಿಸಲಾಯಿತು. 

  ಕಾರ್ಯಕ್ರಮದ ಅತಿಥಿಗಳಾಗಿ ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಗುಡಿಕಟ್ಟಿಯ ಸೈನಿಕ ವಿಠ್ಠಲ ಬಡಿಗೇರ, ಗೋವನಕೊಪ್ಪದ ಸೈನಿಕ ಚನ್ನಬಸಪ್ಪ ಗರಗದ, ನಾಸೀಕದಲ್ಲಿ ಸೇವೆ ಸಲ್ಲಿಸುತ್ತಿರುವ ಗುಡಿಕಟ್ಟಿಯ ಸೈನಿಕ ಶ್ರೀ ಶ್ರೀಶೈಲ ಧಾರವಾಡ ಮತ್ತು ಗೋವನಕೊಪ್ಪದ ನಿವೃತ್ತ ಸೈನಿಕ ಶ್ರೀ ಈರಪ್ಪ ನರೇಂದ್ರ ಅವರುಗಳು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪ್ರವೀಣ ಹಿರೇಮಠ ವಹಿಸಿದ್ದರು. ಎಸ್ಸಿಎಚ್ ಪ್ರತಿಷ್ಠಾನದ ಅಧ್ಯಕ್ಷರಾದ ದೀಪಾ ಮಹಾಂತೇಶ ಹೊಂಗಲ, ಗ್ರಾಮಸ್ಥರಾದ ಬಸವರಾಜ ಅನಿಕಿವಿ, ಶ್ರೀಶೈಲ ಅನಿಕಿವಿ, ಚನಬಸಪ್ಪ ಹೊಂಗಲ, ಚನಬಸಪ್ಪಾ ಛಬ್ಬಿ, ಸೋಮಲಿಂಗಪ್ಪ ಅನಿಕಿವಿ, ಬಸಪ್ಪ ಇಂಚಲ, ಈರಪ್ಪ ಹಸಬಿ, ಶಿವಾನಂದ ಅನಿಕಿವಿ, ಶೇಕಪ್ಪ ವಗ್ಗನವರ ಮುಂತಾದವರು ಮತ್ತು ಪ್ರತಿಷ್ಠಾನದ ಸ್ವಯಂ ಸೇವಕರು ಹಾಗೂ ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾಥರ್ಿಗಳಾದ ಲಕ್ಷ್ಮಿ ಲಕ್ಕುಂಡಿ ಮತ್ತು ಚೇತನ ಅನಿಕಿವಿ ಮತ್ತು ಗ್ರಾಮಸ್ಥರಾದ ನಿಂಗಪ್ಪ ಛಬ್ಬಿ ಮತ್ತು ರುದ್ರಪ್ಪ ಅನಿಕಿವಿ ಅವರು ಸ್ವಾತಂತ್ರ್ಯ ಉತ್ಸವದ ಬಗ್ಗೆ ಮಾತನಾಡಿದರು. ವಿದ್ಯಾಥರ್ಿಗಳಾದ ಪ್ರತಿಭಾ ವಗ್ಗನವರ, ದೀಪಾ ಕಲಬಾವಿ, ಲಕ್ಷ್ಮಿ ಒಡೆಯರ ಮತ್ತು ಪವಿತ್ರ ಒಡೆಯರ ದೇಶ ಭಕ್ತಿ ಗೀತೆಗಳನ್ನು ಹಾಡಿದರು. 

  ಪ್ರತಿಷ್ಠಾನದ ಸ್ವಯಂ ಸೇವಕ ಶಿವಪ್ರಸಾದ ಮದನಭಾವಿ ಕಾರ್ಯಕ್ರಮ ನಿರೂಪಿಸಿದರು, ವಿದ್ಯಾಥರ್ಿಗಳಾದ ಅಶ್ವಿನಿ ಅನಿಕಿವಿ ಸ್ವಾಗತಿಸಿದರೆ ಅನುರಾಧ ಬಾಗಲಕೋಟಿ ವಂದಿಸಿದರು.