ಹುಲಕೋಟಿ 06: ಮಣ್ಣಿನ ಸವಕಳಿಯು ಮನುಕುಲದ ಸಕಲಜೀವರಾಶಿಗಳ ಅಸ್ಥಿತ್ವದ ಪ್ರಶ್ನೆ ಆಗಿದ್ದು, ಈ ನಿಟ್ಟಿನಲ್ಲಿ ಮಣ್ಣು ಹಾಗೂ ನೀರು ಸಂರಕ್ಷಣೆ ಹಾಗೂ ಮಣ್ಣಿನ ಫಲವತ್ತತೆ ನಿರ್ವಹಣೆಗೆ ಹೆಚ್ಚಿನ ಪ್ರಾಧಾನ್ಯತೆ ಕೊಡಬೇಕಾಗಿದೆ ಎಸ್.ಪಿ.ಬಳಿಗಾರ, ಅಧ್ಯಕ್ಷರು, ಜಿಲ್ಲಾ ಪಂಚಾಯತ ಗದಗ ಇವರು ಮಾತನಾಡಿದರು.
ಐ.ಸಿ.ಎ.ಆರ್-ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ, ಹುಲಕೋಟಿ, ಜಿಲ್ಲಾ ಪಂಚಾಯತ ಗದಗ ಜಿಲ್ಲೆ, ಗದಗ, ಕನರ್ಾಟಕ ರಾಜ್ಯ ಕೃಷಿ ಇಲಾಖೆ, ಗದಗ ಜಿಲ್ಲೆ, ಗದಗ ಹಾಗೂ ಕೃಷಿ ತಂತ್ರಜ್ಞಾನ ನಿರ್ವಹಣೆ ಸಂಸ್ಥೆ (ಆತ್ಮ), ಗದಗ ಜಿಲ್ಲೆ, ಗದಗ ಇವರ ಸಹಯೋಗದಲ್ಲಿ ದಿ. 05ರಂದು ಹುಲಕೋಟಿಯ ಕೆವಿಕೆಯ ಸಭಾಂಗಣದಲ್ಲಿ "ವಿಶ್ವ ಮಣ್ಣು ದಿನಾಚರಣೆ" ಕಾರ್ಯಕ್ರವನ್ನು ಏರ್ಪಡಿಸಲಾಗಿತ್ತು. ಸಮಾರಂಭವನ್ನು ಉದ್ಘಾಟಿಸಿದ ಕೃಷಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳು, ರೈತರ ಸಂಘಟನೆಗಳು, ಸರಕಾರಿ / ಅರೆ ಸರಕಾರಿ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮಣ್ಣು ಆರೋಗ್ಯ ಹಾಗೂ ಜಾಗೃತಿ ಶಿಬಿರಗಳನ್ನು ಏರ್ಪಡಿಸಬೇಕೆಂದು ವಿನಂತಿಸಿದರು.
ಮುಖ್ಯ ಅತಿಥಿಯಾಗಿ ಜಿ.ಸಿ.ಕೊರವನವರ, ಸದಸ್ಯರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಗದಗ ಇವರು ಮಾತನಾಡಿ, ಭೂಮಿಗೆ ಸಾವಯವ ವಸ್ತುಗಳ ಸೇರ್ಪಡೆ ಕಡಿಮೆಯಾಗುತ್ತಿದ್ದು, ಇದರ ಪರಿಣಾಮ ಬೆಳೆಯ ಉತ್ಪಾದಕತೆ ಮೇಲೆ ಆಗುತ್ತಿದೆ ಎಂದು ತಿಳಿಸಿದರು. ಮಣ್ಣಿನ ಆರೋಗ್ಯ ವೃದ್ಧಿಸಲು ರೈತರು ಹೆಚ್ಚಿನ ಪ್ರಮಾಣದಲ್ಲಿ ಸಾವಯವ ಗೊಬ್ಬರ ಹಾಗೂ ಹಸಿರೆಲೆ ಗೊಬ್ಬರವನ್ನು ಮಣ್ಣಿಗೆ ಸೇರಿಸಬೇಕೆಂದು ಹೇಳಿದರು. ಕಾರ್ಯಕ್ರಮ ಅಧ್ಯಕ್ಷ ಸ್ಥಾನ ವಹಿಸಿದ್ದ ಸಿ.ಬಿ.ಬಾಲರಡ್ಡಿ, ಜಂಟಿ ಕೃಷಿ ನಿದರ್ೇಶಕರು, ಕೃಷಿ ಇಲಾಖೆ, ಗದಗ ಇವರು ಮಾತನಾಡಿ, ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಕೃಷಿ ಇಲಾಖೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು. ಗದಗ ಜಿಲ್ಲೆಯ ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಾಗುತ್ತಿದ್ದು, ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶಗಳ ನಿರ್ವಹಣೆ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕೆವಿಕೆಯ ದತ್ತು ಗ್ರಾಮಗಳ ರೈತರಿಗೆ ಮಣ್ಣು ಆರೋಗ್ಯ ಚೀಟಿಗಳನ್ನು ವಿತರಿಸಲಾಯಿತು ಹಾಗೂ "ಮಣ್ಣು ಪರೀಕ್ಷೆ ಮತ್ತು "ಮಣ್ಣು ಮತ್ತು ನೀರು ಸಂರಕ್ಷಣೆ" ಕೈಪಿಡಿಗಳನ್ನು ಬಿಡುಗಡೆ ಮಾಡಲಾಯಿತು.
ಪ್ರಾರಂಭದಲ್ಲಿ ಕೆವಿಕೆ ಮುಖ್ಯಸ್ಥರಾದ ಡಾ. ಎಲ್.ಜಿ.ಹಿರೇಗೌಡರ ಇವರು ಅತಿಥಿಗಳನ್ನು ಸ್ವಾಗತಿಸಿದರು. ಕೃಷಿ ವಿಸ್ತರಣಾ ತಜ್ಞರಾದ ಎಸ್.ಎಚ್.ಆದಾಪೂರ ಇವರು ಮಣ್ಣು ದಿನಾಚರಣೆ ಮಹತ್ವದ ಬಗ್ಗೆ ಮಾತನಾಡಿದರು. ಮಣ್ಣು ವಿಜ್ಞಾನ ತಜ್ಞರಾದ ಎನ್.ಎಚ್.ಭಂಡಿ ಕಾರ್ಯಕ್ರಮ ನಿರೂಪಿಸಿದರು. ಸಸ್ಯ ಸಂರಕ್ಷಣಾ ತಜ್ಞರಾದ ಎಸ್.ಕೆ.ಮುದ್ಲಾಪೂರ ಇವರು ವಂದಿಸಿದರು. ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಜನ ರೈತರು ಭಾಗವಹಿಸಿದ್ದರು.