ಮಹಿಳೆಯರು ಸಬಲರಾದಾಗ ಸಮಾಜದ ಅಭಿವೃದ್ಧಿ ಸಾಧ್ಯ

Society can develop only when women are empowered

ಮಹಿಳೆಯರು  ಸಬಲರಾದಾಗ ಸಮಾಜದ ಅಭಿವೃದ್ಧಿ ಸಾಧ್ಯ

ಹೂವಿನ ಹಡಗಲಿ 22:  ಮಹಿಳೆಯರು  ಸಬಲರಾದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಶಿಕ್ಷಕಿ ವಿದ್ಯಾ ಮಲ್ಲಿಕಾರ್ಜುನ ಹೇಳಿದರು. ಪಟ್ಟಣದ ಬಸವಪ್ರಭು ನಗರದಲ್ಲಿ ಶನಿವಾರ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಘಟಕದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.ಎಲ್ಲಾ ರಂಗಗಳಲ್ಲೂ ಮಹಿಳೆಯರಿಗೆ ಸಮಾನತೆ ದೊರೆತರೆ ಪ್ರಗತಿಗೆ ವೇಗ ಹೆಚ್ಚಾಗುತ್ತದೆ.ಸ್ತ್ರೀಯರಿಗೆ ಸೂಕ್ತ ಸ್ಥಾನಮಾನ ಹೆಚ್ಚು ಸಿಗುವಂತಾಗಬೇಕು ಎಂದು ಹೇಳಿದರು. ಮಹಿಳೆ ಕುಟುಂಬದ ನಿರ್ವಹಣೆ ಜೊತೆಗೆ ಸಾಮಾಜಿಕ ಜವಾಬ್ದಾರಿ ಅರಿಯಬೇಕು.ಸಂಘ ಸಂಸ್ಥೆಗಳೊಂದಿಗೆ ಗುರಿತಿಸಿಕೊಂಡು ವಿಕಾಸ ಹೊಂದಿರಿ ಎಂದರು.ಶಿಕ್ಷಕಿ ಜಯಶ್ರೀ ಚಟ್ರಿಕಿ ಮಾತನಾಡಿ 59 ವರ್ಷದ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಸಾಧನೆ ಎಲ್ಲರಿಗೂ ಸ್ಪೂರ್ತಿ ಆಗಬೇಕು.ಸ್ವಾವಲಂಬನೆ ಸಾಧಿಸಲು ಮಹಿಳೆಯರಿಗೆ ಛಲ ಗುರಿ ಇರಬೇಕು ಎಂದು ತಿಳಿಸಿದರು.ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಸಿಂಗಟಾಲೂರು ಶೆಟ್ರು ಅಧ್ಯಕ್ಷತೆ ವಹಿಸಿ ಮಹಿಳಾ ದಿನಾಚರಣೆಗೆ ಸಹಕರಿಸಿದ ಸರ್ವರ ಸಹಕಾರ ಸ್ಮರಿಸಿದರು.ಗಿರಿಮಲ್ಲಿಗೆ ಮಹಿಳಾ ಸೌಹಾರ್ದ ಸಹಕಾರಿ ಅಧ್ಯಕ್ಷೆ ಸವಿತಾ ಅಂಗಡಿ, ಗೌರವಾಧ್ಯಕ್ಷೆ ನಾಗರತ್ನ ಕುಂಚೂರು ಶಿಕ್ಷಕಿ ವೈ ಜಯಮ್ಮ ಇತರರು ಉಪಸ್ಥಿತರಿದ್ದರು.ಗೌರವ ಸನ್ಮಾನ: ಮಹಿಳಾ ದಿನಾಚರಣೆ ನಿಮಿತ್ತ ಮಹಿಳಾ ಶಿಕ್ಷಕಿಯರಾದ ಜಯಶ್ರೀ ಚಟ್ರಿಕಿ, ವಿದ್ಯಾ ಮಲ್ಲಿಕಾರ್ಜುನ,ಬಿ ಕೆ ವಿಜಯಲಕ್ಷ್ಮಿ ರವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.ಎಸ್ ಎಸ್ ಪೂರ್ಣಿಮಾ, ವಿಜಯ ಕಡ್ಲಿ, ಮಂಗಳ ಕರ್ಜಿಗಿಸುಮಂಗಲಾ ಕೆ, ಶೈಲಶ್ರೀ  ಸವಿತಾ ಕೆ ನಿರ್ವಹಿಸಿದರು.ಸಾವಿತ್ರಿ ಬಾಯಿ ಫುಲೆ ರೂಪಕ:ಸವಿತಾ ಕುಂಬಾರಿ ನಿರ್ದೇಶನದಲ್ಲಿ ಶಿಕ್ಷಣದ ಮಹತ್ವ ಹಾಗೂ ಸಾವಿತ್ರಿ ಬಾಯಿ ಫುಲೆ ಜೀವನ ಕಥೆ ಬಿಂಬಿಸುವ ನೃತ್ಯ ರೂಪಕ ಜನಮನ ಸೊರೆಗೊಂಡಿತು.