ಸಮಾಜಮುಖಿ ಕಾರ್ಯ ಜಿದ್ದಿಯವರಿಂದಲೆ ಕಲಿಯಬೇಕು - ಸಿಂದಗಿ ಸಾರಂಗಮಠದ ಶ್ರೀಗಳು

Social work should be learned from Jiddis - Sri of Sindagi Saranga Math

ಸಮಾಜಮುಖಿ ಕಾರ್ಯ ಜಿದ್ದಿಯವರಿಂದಲೆ ಕಲಿಯಬೇಕು - ಸಿಂದಗಿ ಸಾರಂಗಮಠದ ಶ್ರೀಗಳು 

  ವಿಜಯಪುರ  10 : ಬಡವಿದ್ಯಾರ್ಥಿಗಳಿಗೆ  ವಿದ್ಯಾದಾನ,  ಅನ್ನದಾನ ಮಾಡಿ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶಿಕ್ಷಣ ವ್ಯಾಪಾರಿಕರಣವಾದೆ ಉನ್ನತಮಟ್ಟದ ಸಂಸ್ಕಾರಯುತ ಶಿಕ್ಷಣವನ್ನು ನೀಡುವಲ್ಲಿ ಜಿದ್ದಿಯವರ ಕಾರ್ಯ ಮೆಚ್ಚಲೆಬೇಕು ಎಂದು ಸಿಂದಗಿಯ ಸಾರಂಗಮಠದ ಡಾಽಽ ಪ್ರಭುಸಾರಂಗದೇವ ಶಿವಾಚಾರ್ಯರು ಇಂದಿಲ್ಲಿ ಹೇಳಿದರು. 

ಮಾಜಿ ವಿಧಾನಪರಿಷತ್ ಸದಸ್ಯ, ಕಾಳಿದಾಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ದಿ. ಎಸ್‌. ಎ. ಜಿದ್ದಿಯ ಪ್ರತಿಮೆ ಅನಾವರಣ ಹಾಗೂ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡುತ್ತ ಇಂದಿನ ಜೀವನದಲ್ಲಿ ಶಿಕ್ಷಣ ಒಂದು ವ್ಯಾಪಾರಿಕರಣವಾಗುತ್ತ ಹೊರಟಿದೆ ಎಂದು ಖೇದ ವ್ಯಕ್ತಪಡಿಸಿದ ಅವರು ಬಡವರಿಗಾಗಿಯೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬಡ ವಿದ್ಯಾರ್ಥಿಗಳಿಗೂ ವಿದ್ಯಾರ್ಜನೆ ಬದುಕನ್ನು ಕಲ್ಪಿಸಿಕೊಟ್ಟು ಪ್ರೇರಣಾಶಕ್ತಿಯಾಗಿ ಜಿದ್ದಿಯವರು ನಡೆದುಕೊಂಡರು.  ಒಳ್ಳೆಯವರ ಸಂಪರ್ಕ ಇದ್ದಾಗ ಒಳ್ಳೆಯತನ ತಾನಾಗಿಯೆ ಬೆಳೆಯುತ್ತದೆ ಅಂತ ಗುಣಗಳು ಚಾರಿತ್ರಿಕ ವ್ಯಕ್ತಿಯಲ್ಲಿ ಕಾಣಬಹುದಾಗಿದೆ ರಾಜಕಾರಣದಲ್ಲಿಯೂ ಸರಳ ಸಜ್ಜನಿಕೆಯ ರೀತಿಯಲ್ಲಿ ನಡೆದುಕೊಂಡವರು ಎಂದು ಬೇರೆ ಹೇಳಬೇಕಿಲ್ಲ, ವಿದ್ಯಾರ್ಥೀಗಳಿಗೆ ಅವರು ಒಂದು ದಾರೀದೀಪವಾದಂತೆ ಎಂದು ವರ್ಣಿಸಿದ ಇವರು ಅವರಲ್ಲಿ ದೈವಿಕಳೆ ಎದ್ದು ಕಾಣುತ್ತಿತ್ತು ಎಂದು ಹೇಳಿದರು. 

ಸಮಾಜಕ್ಕಾಗಿ ದುಡಿಯುವ ವ್ಯಕ್ತಿ ಅಜರಾಮರವಾಗಿ ಇರುತ್ತಾರೆ ಎನ್ನುವದಕ್ಕೆ ಜಿದ್ದಿಯರನ್ನೆ ಕಾಣಬೇಕು, ಗುರು ಸುಮ್ಮನೆ ಶಿಷ್ಯರ ಮೇಲೆ ಕೈ ಇಡಲಾರರು ಅವರಲ್ಲಿ ಒಂದು ಅಧ್ಬುತಶಕ್ತಿ ಇದ್ದಾಗಲೇ, ಅರಿತಾಗಲೇ ಗುರುವಿನ (ಡಿ. ಎಸ್‌. ಕಣವಿ) ಹಸ್ತ ಅವರ ಮೇಲೆ ಇಡಲು ಸಾಧ್ಯ ಈ ರೀತಿ ಇದ್ದಾಗಲೇ ಜಿದ್ದಿಯವರ ಮೇಲೆ ಅವರ ಗುರುವಿನ ಕರುಣೆ ತುಂಬಿ ಬಂದಿತು ಎಂದರು.  ಉತ್ತಮ ಸಂಸ್ಕಾರ ಪಡೆದು ಸನ್ಮಾರ್ಗದಲ್ಲಿ ಸಾಗಿ ವಿದ್ಯಾರ್ಥಿಗಳಿಗೂ ಕೂಡಾ ಸಂಸ್ಕಾರಯುತ ಶಿಕ್ಷಣವನ್ನು ನೀಡುವದಕ್ಕೆ ಈ  ಕಾಳಿದಾಸ ಶಿಕ್ಷಣ ಸಂಸ್ಥೆ ಬೆಳೆಸಿದ್ದು ಇಂದಿನ ದಿನಮಾನಗಳಲ್ಲಿ  ಯೋಗ್ಯವಾದುದಾಗಿದೆ ಎಂದು ಶ್ರೀಗಳು ನುಡಿದರು. 

ಸಾಮಾಜಿಕ ರಂಗದಲ್ಲಿ ಬದುಕಿ ಬೆಳೆಯುವ ಸ್ಥಿತಿ ನಿಂದನೆಯಾಗುತ್ತದೆ ಅಂತಹ ಎಲ್ಲಾ ನಿಂದನೆಗಳನ್ನು ಸಹಿಸಿಕೊಂಡು ಉತ್ತಮ ಸಮಾಜಕ್ಕೆ ಕೊಡುಗೆಯನ್ನು ನೀಡುವಲ್ಲಿ ಸಂಸ್ಕಾರಯುತ ಶಿಕ್ಷಣ ದಾನಮಾಡುವದು ಜಿದ್ದಿಯವರ ಕಾರ್ಯ ಅಪಾರ ಎಂದು ರೂಗಿ ಅಡವಿ ಸಿದ್ದೇಶ್ವರ ಆಶ್ರಮದ ನಿತ್ಯಾನಂದ ಮಹಾಸ್ವಾಮಿಗಳು ನುಡಿದರು.  ನಾನು  ಮಾಡಬೇಕಾದ ಕಾರ್ಯ  ಮುಗಿದಿದೆ ಸಾವು ಬರಬೇಕೆಂದರು ಕೂಡಾ ಮಾಡಿದ ಸಾಧನೆಗಳು ನಿರಂತರವಾಗಿರುತ್ತವೆ ಎಂಬುದು ಹೇಳುವದಕ್ಕೆ ಜಿದ್ದಿಯವರ ನೀತಿ ಶಿಕ್ಷಣ ಸಾಕ್ಷಿಯೆಂದರು, ಒಳ್ಳೆಯ ವಿಶಾಲವಾದ ಹೃದಯ ಎಲ್ಲರ ಮನಸ್ಸನ್ನು ಗೆಲ್ಲುವಂತಿತ್ತು ಎಂದು ಶ್ರೀಗಳು ಹೊಗಳಿದರು. 

ನುಡಿನಮನ ಕಾರ್ಯಕ್ರಮದಲ್ಲಿ ಡಾ. ಕಂಠೀರವ ಕುಲ್ಲಳ್ಳಿ ಅವರು ಮಾತನಾಡಿ ಬಡವರಿಗೆ ಶಿಕ್ಷಣ ಸಿಗುವದು ಕಠಿಣ ಎಂದು ಅರಿತ ಜಿದ್ದಿಯವರು ನಮ್ಮ ಒಡನಾಟಿನೊಂದಿಗೆ ಸಹಕರಿಸಿ ಉಚಿತ ವಿದ್ಯಾದಾನಕ್ಕೆ ಬೆಲೆಕೊಟ್ಟು ಶೈಕ್ಷಣಿಕ  ರಂಗವನ್ನು ಬೆಳಿಸಿದ ಧೀಮಂತ ವ್ಯಕ್ತಿ ಎಂದು ಅವರು ಹೇಳಿದರು.ವಿ. ಡಿ. ವಸ್ತ್ರದ ಗುರುಗಳು ಮಾತನಾಡಿ 1969ರಲ್ಲಿಯೆ ನಮ್ಮ ಜಿದ್ದಿಯವರ ಗೆಳೆತನ ಬೆಳೆದು  ಬಂದು ಧರ್ಮ- ಜಾತಿ ಮಧ್ಯಬಾರದೆ ಉತ್ತಮ ಗೆಳೆತನ ರೂಢಿಸಿಕೊಂಡು ನಮ್ಮೆಲ್ಲರ ಒಡನಾಟದೊಂದಿಗೆ ಡಿ.ಕೆ. ನಾಯ್ಕರ ಸಹಕಾರದಿಂದ ಈ 4 ಎಕರೆ ಜಾಗವನ್ನು ಪಡೆದು ಇಂದು ಅಧ್ಬುತವಾಗಿ ಬಡವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವಲ್ಲಿ ಸಹಕಾರಿಯಾಗುವಂತೆ ಈ ಸಂಸ್ಥೆಯನ್ನು ಬೆಳೆಸಿದ ಮುಂದಿನ ಪೀಳಿಗೆಯು ಇದನ್ನು ನಿರಂತರವಾಗಿ ನಡೆಸಿಕೊಂಡು ಹೊಗಲಿ ಎಂದವರು ಹೇಳಿ ಅದಕ್ಕೆ ನನ್ನ ಸಂಪೂರ್ಣ ಸಹಕಾರವಿದೆಯೆಂದು  ಹೇಳಿದರು.  

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಎಸ್‌. ಜಿದ್ದಿಯವರು ಎಲ್ಲ ಹಿರಿಯ ಗಣ್ಯರ ಆಶೀರ್ವಾದ ನಮ್ಮ ತಂದೆಯವರ ಮೇಲೆ ಇದ್ದಂತೆ ನಿರಂತರವಾಗಿ ನಮ್ಮ ಮೇಲೆ ಇಟ್ಟು ಸಿಬ್ಬಂದಿಕೊಡಾ ಅಷ್ಟೆ ಸಹಕಾರದಿಂದ ಇದೇ ಶಿಕ್ಷಣಸಂಸ್ಥೆಯನ್ನು ಮುನ್ನಡೆಸಲಿ ಎಂಬ ಬಯಕೆ ನಮ್ಮದಾಗಿದೆ ಎಂದು ಹೇಳಿ  ಈ  ಕಾರ್ಯಕ್ರಮ ಯಶಸ್ವಿಗೊಳಿಸಿದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಇದಕ್ಕೂ  ಪೂರ್ವದಲ್ಲಿ ದಿ.ಎಸ್‌.ಎ. ಜಿದ್ದಿಯವರ ಪ್ರತಿಮೆ ಅನಾವರಣ  ಕಾರ್ಯಕ್ರಮವು ನಡೆಯಿತು, ವೇದಿಕೆಯ ಮೇಲೆ ಜಿದ್ದಿಯವರಿಗೆ ಕಲಿಸಿದ ಗುರುಗಳಾದ  ಡೋಂಗ್ರಿಸಾಬ ಕಣವಿ, ಆರ್‌. ಯರನಾಳ, ಅಪ್ಪಾಸಾಬ ಈರಗೌಡ, ಕೆ.ಆರ್‌. ನಾಗೋಡ ಹಾಗೂ ಪ್ರಧಾನ ಕಾರ್ಯದರ್ಶಿ ಸುಭಾಸ ಎಸ್‌. ಜಿದ್ದಿ ಅವರು ಉಪಸ್ಥಿತರಿದ್ದರು ಬಿ. ಆರ್‌. ಬನಸೂಡೆ ಅವರು ಜಿದ್ದಿಯವರ ಕಾರ್ಯದ ಬಗ್ಗೆ ಹೊಗಳಿಕೆ ಮಾತುಗಳನ್ನಾಗಿ ಜಿದ್ದಿಯವರು 14 ಶಿಕ್ಷಣ ಸಂಸ್ಥೆಗಳನ್ನು ಕಟ್ಟಿಸಿದ ಮಹಾನ ವ್ಯಕ್ತಿ ಅವರನ್ನು ನಾವು ನೆನೆಯಲೆಬೇಕು ಎಂದರು, ಗುರನಗೌಡ ಪಾಟೀಲ, ಅಪ್ಪಾಸಬ  ಯರನಾಳ, ರೈತ ಹೋರಾಟಗಾರ ಅರವಿಂದ ಕುಲಕರ್ಣಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 


 ಪ್ರಾರಂಭದಲ್ಲಿ ಪ್ರಾಚಾರ್ಯರಾದ ಕೆ.ಆರ್‌. ಜಾಧವ ಅವರು ಸರ್ವರನ್ನು ಸ್ವಾಗತಿಸಿದರು, ಕಾರ್ಯಕ್ರಮ ನಿರೂಪಣೆಯನ್ನು ಜಿ.ಎಚ್‌. ಮರನೂರ ಹಾಗೂ ಎಸ್‌. ಡಿ. ದುರಗಣ್ಣವರ ನಡೆಸಿಕೊಟ್ಟರು ಕೊನೆಯಲ್ಲಿ ಆರ್‌. ಎಸ್‌. ವಾಡೇದ ವಂದಿಸಿದರು