ಸಮಾಜ ಸೇವೆ ಮನಃಪೂರ್ವಕವಾಗಿರಲಿ: ನೀಲಗಂಗಾ ಚರಂತಿಮಠ

ಬೆಳಗಾವಿ, 2:  ದಾನಗಳಲ್ಲಿ ದತ್ತಿ  ದಾನವು ಶ್ರೇಷ್ಠವಾದ ದಾನವಾಗಿದೆ.ಸಮಾಜದ ಏಳ್ಗೆಗೆ ನಮ್ಮ ಸ್ವತ್ತಿನಲ್ಲಿ ಅಲ್ಪಾಂಶವಾದರೂ ಮೀಸಲಿಡಬೇಕು. ಆದರೆ ಸಮಾಜಸೇವೆ ಡಂಬಾಚಾರಕ್ಕೆ ಬಲಿಯಾಗದೆ ಮನಃಪೂರ್ವಕವಾಗಿರಲಿ ಎಂದು ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಕಿವಿಮಾತು ಹೇಳಿದರು.

ಅವರು ಶುಕ್ರವಾರ ಇಲ್ಲಿನ ಅಜಂ ನಗರದ ಕಿವುಡು ಮಕ್ಕಳ ಶಾಲೆಯಲ್ಲಿ ಜಿಲ್ಲಾ ಲೇಖಕಿಯರ ಸಂಘದಿಂದ ಆಯೋಜಿಸಿದ್ದ ಲಿ.ಸಿದ್ದರಾಮಯ್ಯ ಚರಂತಿಮಠ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ದತ್ತಿ ದಾನಿಗಳಾದ ಹಿರಿಯ ಸಾಹಿತಿ ನೀಲಗಂಗಾ ಚರಂತಿಮಠ ಸಮಾಜ ಸೇವೆಯ ಮಹತ್ವದ ಕುರಿತು ಮಾತನಾಡುತ್ತಾ ದಾನಗಳಲ್ಲಿ ದತ್ತಿ  ದಾನವು ಶ್ರೇಷ್ಠವಾದ ದಾನವಾಗಿದೆ.ಸಮಾಜದ ಏಳ್ಗೆಗೆ ನಮ್ಮ ಸ್ವತ್ತಿನಲ್ಲಿ ಅಲ್ಪಾಂಶವಾದರೂ ಮೀಸಲಿಡಬೇಕು. ಆದರೆ ಸಮಾಜ ಸೇವೆ  ಕಾಟಾಚಾರಕ್ಕೆಯಾಗದಿರಲಿ ಎಂದು ಕಿವಿಮಾತು ಹೇಳಿದರು.

ಈ ಶಾಲೆಯ ವಿಶೇಷ ತರಬೇತಿ  ಶಿಕ್ಷಕರಾದ ಎಸ್.ಎಸ್.ಪಾಟೀಲ ಮಾತನಾಡಿ, ಮಕ್ಕಳಲ್ಲಿ ಯಾವುದೇ ಭೇದ ಭಾವಸಲ್ಲದು, ಇಂಥಹ ದಿವ್ಯಾಂಗ ಮಕ್ಕಳಲ್ಲಿ  ಆತ್ಮ ವಿಶ್ವಾಸ ತುಂಬಿದಲ್ಲಿ ಸತತ ಪ್ರಯತ್ನದಿಂದ ಉನ್ನತ ಗುರಿ ಮುಟ್ಟಬಲ್ಲರು ಎಂದು ತಿಳಿಸಿದರು.

ದಿವ್ಯ ಸಾನಿಧ್ಯ ವಹಿಸಿದ್ದ ನಾಗನೂರು ರುದ್ರಾಕ್ಷಿಮಠದ ಉತ್ತರಾಧಿಕಾರಿಗಳಾಗಿರುವ ಪೂಜ್ಯ ಸಾವಳಗಿ ದೇವರು ಮಾತನಾಡಿ, ವಿಶೇಷ ಚೇತನ  ಮಕ್ಕಳು ದೇವರ ಮಕ್ಕಳು. ಸಾಮಾನ್ಯರಿಗಿಂತ ಅಧಿಕ ಸಾಮಥ್ರ್ಯ ಈ ದಿವ್ಯಾಂಗ ಮಕ್ಕಳು ಹೊಂದಿರುತ್ತಾರೆ. ಇಲ್ಲಿನ ಸಿಬ್ಬಂದಿ ನಿಸ್ವಾರ್ಥ ಸೇವೆಯಿಂದ ಮಕ್ಕಳಿಗೆ ಅಭಿವೃದ್ಧಿಗೆ ಶ್ರಮಿಸಲಿ. ಈ ವಿಶೇಷ ಮಕ್ಕಳಿಗೆ ಮೆಟ್ರಿಕ್ ನಂತರ ಮುಂದಿನ ವಿದ್ಯಾಭ್ಯಾಸಕ್ಕೆ ತಮ್ಮ ಮಠದಿಂದ ಉಚಿತ ವ್ಯವಸ್ಥೆ ಮಾಡಲಾಗುವುದು ಎಂದು ಆಶೀರ್ವದಿಸಿದರು.

ಅಧ್ಯಕ್ಷತೆ ವಹಿಸಿದ್ದ ಜ್ಯೋತಿ ಬದಾಮಿಯವರು ಮಾತನಾಡಿ, ಈ ವಿಶೇಷ ಮಕ್ಕಳ ಶಾಲೆಯಲ್ಲಿ ನಮ್ಮ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ದತ್ತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಈ ವಿಶೇಷ  ಮಕ್ಕಳ ಶ್ರೇಯೋಭಿವೃದ್ಧಿ ಈ ಸಮಾಜದ ಜವಾಬ್ದಾರಿಯೂ ಆಗಿದೆ.ಸುಪ್ತವಾಗಿ ಅಡಗಿರುವ ಈ ಮಕ್ಕಳ ಪ್ರತಿಭೆಗೆ ನಾವೆಲ್ಲ ನೀರೆರೆದು ಪೋಷಿಸೋಣ.ಈ ಸಾಹಿತ್ಯ ಮತ್ತು ಕಲೆ ಪರಸ್ಪರ ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ.ಇವರಿಗೆ ಪಠ್ಯದ ಜೊತೆಗೆ ಸಾಹಿತ್ಯದ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸುವಂತೆ ಸಲಹೆ ನೀಡಿದರು.

ಕಿವುಡು ಮಕ್ಕಳ ಶಾಲೆಯ ಅಧೀಕ್ಷಕರಾದ ಆರ್.ಬಿ.ಬನಶಂಕರಿಯವರು. ಈ ಶಾಲೆಯ ವಿಶೇಷ ಮಕ್ಕಳು  ಜಿಲ್ಲಾ ಮತ್ತು ರಾಜ್ಯ ಮಟ್ಟದ ಈಜು ,ನೃತ್ಯ,ಚಿತ್ರ ಬಿಡಿಸುವ ಸ್ಪಧರ್ೆಗಳಲ್ಲಿ ಬಹುಮಾನಗಳನ್ನು ಪಡೆದು ಶಾಲೆಗೆ ಉತ್ತಮ ಹೆಸರು ತರುತ್ತಿರುವುದೇ ಮಕ್ಕಳ ಪ್ರತಿಭೆಗೆ  ಸಾಕ್ಷಿ ಎಂಬ ಹೆಮ್ಮೆಯಿದೆ. ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ ಪ್ರತಿ ವರ್ಷ ನಮ್ಮ ಶಾಲೆಯಲ್ಲಿ ದತ್ತಿ ಕಾರ್ಯಕ್ರಮ ಏರ್ಪಡಿಸಿ ಮಕ್ಕಳಿಗೆ ಪ್ರೋತ್ಸಾಹಿಸುತ್ತಿರುವುದಕ್ಕೆ ಕೃತಜ್ಞತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಸುನಂದಾ ಎಮ್ಮಿ, ದೀಪಿಕಾ ಚಾಟೆ, ಗಿರಿಜಾ ಮುಳುಗುಂದ, ಜಯಶ್ರೀ ನಿರಾಕಾರಿ,ಮಹಾದೇವಿ ಹುಲಗಬಾಳಿ, ಭಾರತಿ, ಅಮೃತ ಅಚಲ ಚರಂತಿಮಠ, ಬಸವರಾಜ ಹಿರೇಮಠ ಭಾಗಿಯಾಗಿದ್ದರು.

ಡಾ.ಹೇಮಾ ಸೋನೊಳ್ಳಿ ಸ್ವಾಗತಿಸಿದರು. ಆಶಾ ಯಮಕನಮರಡಿ ಕಾರ್ಯಕ್ರಮ  ನಿರೂಪಿಸಿದರು.ಶಾಂತಾ ಮಸೂತಿ ವಂದಿಸಿದರು. ಅನಿತಾ ಮಾಲಗತ್ತಿ ,ಪ್ರೇಮಾ,ರಂಜನಾ ಪ್ರಾರ್ಥನೆ ಗೀತೆ ಹಾಡಿದರು.