ಹೋರಾಟಕ್ಕೆ ಪ್ರೇರೆಪಿಸಿದ ಸಾಮಾಜಿಕ ಜಾಲತಾಣ

ಲೋಕದರ್ಶನ ವರದಿ

ಮುಧೋಳ 02:  ಸಾಮಾಜಿಕ ಜಾಲತಾಣ ದುರ್ಬಳಕೆ ಮಾಡುತ್ತಾ ಅದರಲ್ಲಿ ಸಿನೇಮಾ ಹಾಗೂ ಮನರಂಜನೆಯಲ್ಲಿ ಕಾಲಕಳೆಯುವ ಇಂದಿನ ದಿನಮಾನದಲ್ಲಿ ಮುಧೋಳದ ಅಭಿವೃದ್ಧಿಯ ಬಗ್ಗೆಯೇ ಸದಾ ಚಿಂತಿಸುವ ಮುಧೋಳದ ಉಮೇಶ ಬಾಡಗಿ ಹಾಕಿದ ಮುಧೋಳ ಅಭಿವೃದ್ಧಿಯ ಬಗ್ಗೆ ಹಾಕಿದ ಒಂದು ಪೋಸ್ಟ್ನಿಂದ ಇಡೀ ಮುಧೋಳ ನಗರವೇ ಒಂದಾಗಿ ಬಂದ್ ಮಾಡಿ ಮೂಲಭೂತ ಸೌಲಭ್ಯಕ್ಕಾಗಿ ಧರಣಿ ಸತ್ಯಾಗ್ರಹ ಆರಂಭಿಸಿದೆ.

      ಇಂದಿನ ದಿನಗಳಲ್ಲಿ ವ್ಯಾಟ್ಸಾಪ್, ಫೇಸ್ಬುಕ್ಗಳಲ್ಲಿ ಹಾಯ್, ಗುಡ್ ಮಾನರ್ಿಂಗ್, ಹ್ಯಾಪಿ ಬರ್ತಡೇ ಮುಂತಾದ ಇಂತಹ ಬರಹಗಳನ್ನೇ ಹಾಕುತ್ತಾ ಕಾಲ ಕಳೆಯುವ ಸಂದರ್ಭದಲ್ಲಿ ಮುಧೋಳದ ಉಮೇಶ ಬಾಡಗಿಯವರು ಮಾತ್ರ ಮುಧೋಳ ಟ್ರಾಫಿಕ್ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಯುಜಿಡಿ ಕಳಪೆ ಕಾಮಗಾರಿಯ ಕುರಿತು ಫೋಟೋ ಸಹಿತ ಹಾಕಿದ ಪೋಸ್ಟ್ಗೆ ಸಾಕಷ್ಟು ಲೈಕ್, ಕಾಮೆಂಟ್ಗಳು ಬಂದವು. ಅಲ್ಲದೇ ಬಹುತೇಕರು ಒಬ್ಬರಿಂದ ಇನ್ನೊಬ್ಬರಿಗೆ ಶೇರ್ ಕೂಡಾ ಮಾಡಿದರು. ಈ ಕುರಿತು ಜಾಲತಾಣದಲ್ಲಿಯೇ ಬಿಸಿ, ಬಿಸಿ ಚಚರ್ೆ ನಡೆಯಲಾರಂಭಿಸಿತು. ಕೆಲವೇ ಕೆಲವು ಜನ ಸೇರಿ ಇನ್ನಿತರರಿಗೂ ಸಮಸ್ಯೆಯ ತೀವ್ರತೆಯ ಅರಿವು ಮೂಡಿಸಿ, ಗಾಂಧಿ ವೃತ್ತದಲ್ಲಿರುವ ಹನುಮಾನ ಮಂದಿರದಲ್ಲಿ ಸಭೆ ಕರೆದು ಮುಧೋಳ ಹಿತರಕ್ಷಣಾ ವೇದಿಕೆ ಎಂಬ ಹೆಸರಿನಿಂದ ಸಂಘಟನೆಯನ್ನು ಕೂಡಾ ಪ್ರಾರಂಭಿಸಲಾಯಿತು. ಈ ಸಮೀತಿಗೆ ಡಾ.ಸಂಜಯ ಘಾರಗೆಯವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಇಲ್ಲಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಹೋರಾಟ ಮಾಡಲು ನಿರ್ಣಯ ಕೈಗೊಳ್ಳಲಾಯಿತು. ಅದರಂತೆ ಡಿ. 17 ರಂದು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ, ಅಂದೇ ನಗರಕ್ಕೇ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹಾಗೂ ಜಿಲ್ಲಾಧಿಕಾರಿ ಕೆ.ಜೆ.ಶಾಂತಾರಾಂ ಅವರನ್ನು ರಸ್ತೆ ಮಧ್ಯೆ ತಡೆದು, ನಗರಸಭೆಗೆ ಕರೆದುಕೊಂಡು ಬಂದು ಮನವಿ ಅಪರ್ಿಸಿ ಶೀಘ್ರ ರಸ್ತೆ ಅಗಲೀಕರಣ ಸೇರಿದಂತೆ ನಗರ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ದಿ.25 ರವರೆಗೆ ಗಡುವು ನೀಡಲಾಯಿತು.

      ಸ್ನೇಹಲೋಕ ಮಹಿಳಾ ಸಂಘಟನೆಯ ಸ್ನೇಹಾ ಹಿರೇಮಠ, ಗುರುರಾಜ್ ಪೋತ್ನಿಸ್, ಕೃಷ್ಣಾ ಸುಲಾಖೆ, ಶಿವಾನಂದ ಗುರವ, ಬಸವರಾಜ ಗಣಿ ಸೇರಿದಂತೆ ನೂರಾರು ಜನ ಫೇಸ್ಬುಕ್ ಮತ್ತು ವ್ಯಾಟ್ಸಾಪ್ ಸ್ನೇಹಿತರೆಲ್ಲ ಸೇರಿ, ಸಾರ್ವಜನಿಕರನ್ನು ಸಂಘಟಿಸಿ ಮುಧೋಳ ಬಂದ್ ಮಾಡಲು ನಿರ್ಧರಿಸಿದರು. ಹೋರಾಟ ಯಾರ ವಿರುದ್ಧವೂ ಅಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ನಡೆಸುವುದು ಮತ್ತು ಯಾರನ್ನೂ ದೂಷಣೆ ಮಾಡದೇ, ಯಾರಿಗೂ ನೋವಾಗದಂತೆ ಅತ್ಯಂತ ಪ್ರಜ್ಞಾಪೂರ್ವಕವಾಗಿ ಮತ್ತು ಅರ್ಥಪೂರ್ಣವಾಗಿ ಹೋರಾಟ ಮಾಡಲು ನಿಶ್ಚಯಿಸಿ ಮೊದಲೇ ತಿಳಿಸಿದಂತೆ ಡಿ. 27ರಂದು ಮುಧೋಳ ಬಂದ್ ಮಾಡಿ ಪ್ರತಿಭಟನೆ ಮಾಡಿದರು.

      ದಿ.26ರಂದು ಮುಧೋಳ ಬಂದ್ಗೆ ಘೋಷಣೆ ಮಾಡುತ್ತಿದ್ದಂತೆ, ದಿ.27ರಂದೇ ಬೆಳಿಗ್ಗೆ ಸುಮಾರು 4-30 ಕ್ಕೆ ರಾಜ್ಯ ಹೆದ್ದಾರಿ ಅಕ್ಕಪಕ್ಕದ ಅನಧೀಕೃತ ಕಟ್ಟಡಗಳ ತೆರವುಗೊಳಿಸುವ ಕಾರ್ಯ ಆರಂಭವಾಗಿದ್ದು, ಇದರಂತೆ ಬೈಪಾಸ್ ರಸ್ತೆ, ನಗರದಲ್ಲಿ ಹಾಯ್ದಿರುವ ಬೈಪಾಸ್, ಕುಡಿಯುವ ನೀರಿನ ಸಮರ್ಪಕ ಪೂರೈಕೆ, ಯುಜಿಡಿ ಕಳಪೆ ಕಾಮಗಾರಿ,ಮುಧೋಳ ಮಹಾರಾಜರು ಕುಡಿಯಲಿಕ್ಕೇಂದೇ ನಿಮರ್ಿಸಿದ ಏಳು ಕೆರೆಗಳಲ್ಲಿ ಕೆಲವು ಕೆರೆಗಳಲ್ಲಿ ಅತೀಕ್ರಮಣ ಮಾಡಿರುವವರ ವಿರುದ್ಧ ಪ್ರತಿಭಟಿಸಿ ಅವುಗಳನ್ನು ತೆರವು ಮಾಡಿಸುವುದರ ಜತೆಗೆ ಅಲ್ಲಿ ನೀರು ತುಂಬಿಸಿ ನಗರದ ಜನತೆಗೆ ಅನುಕೂಲವಾಗುವ ರೀತಿಯಲ್ಲಿ ಮರುಪರಿಶೀಲನೆ ನಡೆಸಬೇಕಾದ ಅಗತ್ಯತೆ ಇದೆ.  

      ಪ್ರಮುಖರಾದ ಡಾ.ಮೋಹನ ಬಿರಾದಾರ, ಪ್ರಕಾಶ ವಸ್ತ್ರದ, ಡಾ.ಶಿವಾನಂದ ಕುಬಸದ, ಡಾ.ವ್ಹಿ.ಎನ್.ನಾಯಕ, ಡಾ.ಸತೀಶ ಮಲಘಾಣ, ಸತೀಶ ಬಂಡಿವಡ್ಡರ, ಕಿಶೋರ ಮಸೂರಕರ,ರಾಚಪ್ಪಣ್ಣಾ ಕರೆಹೊನ್ನ, ಡಾಕೆ.ಆರ್.ಮಸಳಿ, ಡಾ.ವಿಜಯಕುಮಾರ ಹೊಸಟ್ಟಿ ಸೇರಿದಂತೆ ಅನೇಕರು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ.