'ವೃದ್ಧಾಶ್ರಮದ ಸಮಾಜ ಕಳಕಳಿ ಶ್ಲಾಘನೀಯ'

ಲೋಕದರ್ಶನ ವರದಿ

ಬೆಳಗಾವಿ 16: ನಾನು ದೇಶದ ವಿವಿಧ ಭಾಗಗಿಳಲ್ಲಿನ ಸಮಾಜ ಸೇವಾ ಸಂಸ್ಥೆಗಳನ್ನು ನೋಡಿದ್ದೇನೆ. ಆದರೆ ಶಾಂತಾಯಿ ವೃದ್ಧಾಶ್ರಮನಂತಹ ಸಂಸ್ಥೆಯನ್ನು ಎಲ್ಲಿಯೂ ನೋಡಿಲ್ಲ. ಇಲ್ಲಿರುವ ವೈದ್ಯಕೀಯ ತಪಾಸಣೆ ವ್ಯವಸ್ಥೆ, ವೃದ್ದರ ಬಗ್ಗೆ ತೋರಿಸುವ ಕಾಳಜಿ ನಿಜಕ್ಕೂ ಶ್ಲಾಘನೀಯ ಎಂದು ಜಿಪಂ ಸಿಇಓ ಆರ್. ರಾಮಚಂದ್ರನ್ ಹೇಳಿದರು. ನಗರ ಹೊರವಲಯದ ಬಾಮನವಾಡಿಯಲ್ಲಿ ಜೈನ್ ಎಂಜಿನೀಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಆಶ್ರಯದಲ್ಲಿ ದಿ.14ರಂದು ನಡೆದ ಶಾಂತಾಯಿ ವೃದ್ದಾಶ್ರಮದ 20 ನೇ ವಾಷರ್ಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕೆಎಲ್ಇ ಆಸ್ಪತ್ರೆಯ ವೈದ್ಯರಿಂದ ಆಗಾಗ ವೃದ್ಧರ ಆರೋಗ್ಯ ತಪಾಸಣೆ ನಡೆಸುವುದು, ಆಹಾರ, ಬಟ್ಟೆ ಬಗ್ಗೆ ಸಂಸ್ಥೆಯವರು ತಮ್ಮ ಮನೆಯ ಹಿರಿಯರಂತೆ ನೋಡಿಕೊಳ್ಳುತ್ತಿರುವುದನ್ನು ಕಂಡು ಬಹಳ ಖುಷಿಯಾಯಿತು. ನಿಜಕ್ಕೂ ಇದು ದೇವರ ಸೇವೆಗೆ ಸಮಾನವಾದದು. ಸಂಸ್ಥೆಗೆ ತಾವು ಕೂಡ ಇಲಾಖೆ, ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಿಂಡಲಗಾ ಜೈಲಿನ ಮುಖ್ಯ ಅಧೀಕ್ಷಕ ಟಿ.ಪಿ. ಶೇಷ ಮಾತನಾಡಿ, ಪಾಟೀಲ ಬಂಧುಗಳು ಮತ್ತು ಮಾಜಿ ಮಹಾಪೌರ ವಿಜಯ ಮೋರೆ ಅವರು ವೃದ್ದಾಶ್ರಮ ಆರಂಭಿಸುವ ಮೂಲಕ ಒಳ್ಳೆಯ ಸಮಾಜ ಸೇವೆ ಮಾಡುತ್ತಿದ್ದಾರೆ. ತಾವು ಸಂಸ್ಥೆಗೆ ಕೈಲಾದಷ್ಟು ಸಹಾಯ ಮಾಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸೀಮಾ ಲಾಟ್ಕರ್ ಮಾತನಾಡಿ, ಇದು ವೃದ್ದಾಶ್ರಮ ಅಲ್ಲ. ಇಲ್ಲಿ ವೃದ್ಧರಿಗೆ ಕಲ್ಪಸಿರುವ ವ್ಯವಸ್ಥೆ, ಆರೋಗ್ಯ ಕಾಳಜಿ ನೋಡಿದರೆ ಒಂದು ರೀತಿಯಲ್ಲಿ ರೇಸಾರ್ಟ ಎಂದೇ ಅನಿಸುತ್ತದೆ. ಇಲ್ಲಿ ಬಂದಾಗ ನನಗೆ ವೃದ್ಧಾಶ್ರಮ ಚೆನ್ನಾಗಿರುವ ಬಗ್ಗೆ ಗೊತ್ತಾಯಿತು. ಸಂಸ್ಥೆಯ ಆಡಳಿತ ಮಂಡಳಿ, ಇಲ್ಲಿನ ಸಿಬ್ಬಂದಿ ಇದೇ ರೀತಿ ಇನ್ನಷ್ಟು ಉತ್ತಮ ಕಾರ್ಯ ಮಾಡಲಿ ಶುಭ ಹಾರೈಸಿದರು.

ದಂಡು ಮಂಡಳ ಪ್ರದೇಶ(ಕ್ಯಾಂಟೋನ್ಮೆಂಟ್) ಸಿಇಓ ದಿವ್ಯಾ ಶಿವರಾಮ ಮಾತನಾಡಿ, ನನಗೂ ಇಲ್ಲಿ ಬಂದು ಸೇವೆ ಮಾಡಬೇಕೆಂದು ಅನಿಸುತ್ತದೆ. ಇಲ್ಲಿರುವ ಎಲ್ಲ ವೃದ್ಧರು ಆರೋಗ್ಯದಿಂದ ಮಾತ್ರವಲ್ಲ ಎಲ್ಲ ರೀತಿಯಲ್ಲಿ ಸಮರ್ಥರಾಗಿದ್ದಾರೆ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಕೊಲ್ಲಾಪುರದ ಸಮಾಜ ಸೇವಕಿ ಗೌರಿ ಕಿಶೋರ ದೇಶಪಾಂಡೆ, ಡಾ. ಘಣಶ್ಯಾಂ ವೈದ್ಯ, ದತ್ತಾ ಘೋರ್ಪಡೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು. ಜೈನ್ ಎಂಜಿನೀಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ಮುಖ್ಯಸ್ಥ ಡಾ. ರೋಹಿತರಾಜ್ ಸ್ವಾಗತಿಸಿದರು. ಮಾಜಿ ಮಹಾಪೌರ ವಿಜಯ ಮೋರೆ ವಂದಿಸಿದರು. ಎಂಬಿಎ ವಿಭಾಗದ ವಿದ್ಯಾಥರ್ಿಗಳು ಕಾರ್ಯಕ್ರಮ ನಿರೂಪಿಸಿದರು.