ಲೋಕದರ್ಶನ ವರದಿ
ಕಾಗವಾಡ 04: ಉಗಾರದ ಯುವ ಬ್ಯಾಡಮಿಂಟನ್ ಆಟಗಾರರು ಹಾಗೂ ಖ್ಯಾತ ತರಬೇತಿಗಾರರಾದ ಸ್ನೇಹಲ ದಾದು ಕಾಂಬಳೆ ಇವರನ್ನು ನೆರೆಯ ಮಹಾರಾಷ್ಟ್ರದ ಸಾಂಗಲಿ ನಗರದಲ್ಲಿ ರಾಜ್ಯ ಮಟ್ಟದ ಅತ್ಯುತ್ತಮ ತರಬೇತಿಗಾರರೆಂದು ಆಯ್ಕೆಮಾಡಿ, ಗೌರವಿಸಿದರು.
ಸೋಮವಾರ ರಂದು ಸಾಂಗಲಿಯ ಕೃಷ್ಣಾವೇಲಿ ಸ್ಪೋಟ್ಸರ್್ ಕ್ಲಬ್ ವತಿಯಿಂದ ರಾಷ್ಟ್ರಮಟ್ಟದ ಬ್ಯಾಡಮಿಂಟನ್ ಆಟಗಾರರಿಗೆ ತರಬೇತಿ ನೀಡುವ ಕಾರ್ಯಕ್ರಮದಲ್ಲಿ ಸ್ನೇಹಲ ಕಾಂಬಳೆ ಇವರನ್ನು ರಾಷ್ಟ್ರೀಯ ತರಬೇತಿಗಾರರಾದ ಥಿಮೀರ ಅರಬರೆ ಇವರು ಆಯ್ಕೆಮಾಡಿ ಸನ್ಮಾನಿಸಿದರು.
ಸ್ನೇಹಲ ಕಾಂಬಳೆ ಉಗಾರ ಸಕ್ಕರೆ ಕಾಖರ್ಾನೆಯ ಕಾಮರ್ಿಕರಾದ ದಾದು ಕಾಂಬಳೆ ಇವರ ಸುಪುತ್ರನಾಗಿದ್ದು. ವಿಜಯಪುರ, ಬೆಳಗಾವಿ, ಬಾಗಲಕೋಟ, ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಬ್ಯಾಡಮಿಂಟನ್ ತರಬೇತಿ ನೀಡಿದ್ದಾನೆ.
ಸಾಂಗಲಿಯಲ್ಲಿ ಗುಲಬಗರ್ಾ, ಚೆನ್ನೈ, ಪುಣೆ, ಕರಾಳ, ರತ್ನಾಗಿರಿ, ಕೊಲ್ಹಾಪುರ, ಸೋಲಾಪುರ, ಸೇರಿದಂತೆ ಅನೇಕ ನಗರಗಳಿಂದ 65 ಆಟಗಾರರಿಗೆ ತರಬೇತಿ ನೀಡುವ ಶಿಬಿರ ಜರುಗಿತು.
***