ಸಾಟರ್್ ಸಿಟಿಯಲ್ಲಿ ....ಸ್ಮಾಟರ್್ ಗಾರ್ಡನ್ ರೆಡಿ

ಲೋಕದರ್ಶನ ವರದಿ

ಬೆಳಗಾವಿ 28:  ವಿಭಿನ್ನ ರೀತಿಯ ಸಾಮಾಜಿಕ ಕಾರ್ಯಕ್ರಮಗಳಿಂದ ಎಲ್ಲರ ಗಮನ ಸೆಳೆಯುತ್ತಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ತಮ್ಮ ಕ್ಷೇತ್ರದಲ್ಲಿ ಸ್ಮಾಟರ್್ ಗಾರ್ಡನ್ ನಿಮರ್ಾಣ ಮಾಡಿ  ಎಲ್ಲರ ಗಮನ ಸೆಳೆದಿದ್ದಾರೆ. 

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಟಿಳಕವಾಡಿಯ ನಾಥ ಫೈ ಉದ್ಯಾನವನ್ನು ಸ್ಮಾಟರ್್ ಸಿಟಿ ಯೋಜನೆಯಲ್ಲಿ 1ಕೋಟಿ 20 ಲಕ್ಷ ರೂ ವೆಚ್ಚದಲ್ಲಿ  ವೈಶಿಷ್ಟಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದ್ದು ಶೀಘ್ರದಲ್ಲಿಯೇ ಈ ಉದ್ಯಾನವನ ಉದ್ಘಾಟನೆಯಾಗಲಿದೆ.

ಉದ್ಯಾನವನದಲ್ಲಿ ವಿವಿಧ ರೀತಿಯ ಅತ್ಯಾಕರ್ಷಕ ಹೂವಿನ ಗಿಡಗಳು,ವಾಕಿಂಗ್ ಪಾತ್,ಜಾಗಿಂಗ್ ಪಾತ್.ವಿವಿಧ ರೀತಿಯ ಹಣ್ಣಿನ ಗಿಡಗಳನ್ನು ನೆಡಲಾಗಿದೆ ಜೊತೆಗೆ ಗಾಡರ್್ ರೂಂ ಸಹ ಇಲ್ಲಿ ನಿಮರ್ಿಸಲಾಗಿದೆ 

ಉದ್ಯಾನವನದಲ್ಲಿ ಕೇವಲ ಒಬ್ಬನೇ ಮಾಲಿ ನಿರ್ವಹಣೆ ಮಾಡುವ ರೀತಿಯಲ್ಲಿ ಉದ್ಯಾನವನದಲ್ಲಿ ಸ್ಪಿಂಗ್ಲರ್ ಮತ್ತು ಡ್ರಿಪ್ ಇರಿಗೇಶನ್ ವ್ಯೆವಸ್ಥೆ ಮಾಡಲಾಗಿದೆ ಈ ಉದ್ಯಾನವನದಲ್ಲಿ ಅನೇಕ ವೈಶಿಷ್ಟತೆಗಳಿದ್ದು ಅಂತರಾಷ್ಟ್ರೀಯ ಗಾರ್ಡನ್ ಪರಿಣಿತ ಚವ್ಹಾನ್ ಅವರ ಸಲಹೆಯನ್ನು ಪಡೆದು ಈ ಉದ್ಯಾನವನ್ನು ಮಾದರಿ ಉದ್ಯಾನವನ್ನಾಗಿ ನಿಮರ್ಿಸಲಾಗಿದ್ದು ಮಾಚರ್್ ಐದರೊಳಗಾಗಿ ಇದನ್ನು ಉದ್ಘಾಟಿಸಲು ನಿರ್ಧರಿಸಲಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ  

ಇಂದು ಬೆಳಿಗ್ಗೆ ಉದ್ಯಾನವನದ ಕಾಮಗಾರಿಗಳನ್ನು ಪರಶೀಲಿಸಿದ ಅವರು ಆದಷ್ಟು ಬೇಗನೆ ಉಳಿದಿರುವ ಕಾಮಗಾರಿಗಳನ್ನು ಮುಗಿಸಿ ಈ ಉದ್ಯಾನವನ್ನು ಲೋಕಾರ್ಪಣೆ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಗುತ್ತಿಗೆದಾರನಿಗೆ ಸೂಚನೆ ನೀಡಿದರು.