ವಿಜೃಂಭಣೆಯಿಂದ ನೆರವೇರಿದ ಸಣ್ಣ ಆಂಜನೇಯ ಬೆಳ್ಳಿ ಉತ್ಸವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ
ಬ್ಯಾಡಗಿ 14: ಪಟ್ಟಣದ ಸಣ್ಣ ಆಂಜನೇಯ ದೇವಸ್ಥಾನದಲ್ಲಿ ಇಂದು ಬೆಳ್ಳಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು ಬೆಳಿಗ್ಗೆಯಿಂದಲೇ ಬೆಳ್ಳಿ ಉತ್ಸವ ಮೂರ್ತಿಗೆ ರುದ್ರಾಭಿಷೇಕ ಹೋಮ ಹವನ ನಡೆದವು ಮತ್ತು ಸಂಜೆ ನಗರದ ಪ್ರಮುಖ ಬೀದಿಗಳಲ್ಲಿ ಉತೊಸವ ಮೂರ್ತಿ ಪಲ್ಲಕ್ಕಿ ಮೆರವಣಿಗೆ ನಡೆಯಿತು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ಜತೆಂದ್ರ ಸುಣಗಾರ.ಎಸ್ ಎಸ್ ಶೆಟ್ಟರ.ಅಶೋಕ ಕುರವತ್ತಿ.ಸಿಧ್ದಣ್ಣ ಸಂಕಣ್ಣನವರ. ಪ್ರಕಾಶ ಉದ್ಯೋಗಣ್ಣನವರ.ಶಿವಯೋಗಿ ಗಡಾದ.ಪ್ರವೀಣ ಯಾದವಾಡ .ಪ್ರಶಾಂತ ಯಾದವಾಡ.ಹಾಗೂ ಅನೇಕರು ಉಪಸ್ಥಿತರಿದ್ದರು