ಲೋಕದರ್ಶನ ವರದಿ
ಗದಗ 03: ಸ್ಲಂ ಜನಾಂದೋಲನ ಕನರ್ಾಟಕ ಮತ್ತು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಗದಗ-ಬೆಟಗೇರಿ ನಗರದ ಸ್ಲಂ ಪ್ರದೇಶಗಳ ಅಭಿವೃದ್ಧಿ ಹಾಗೂ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕುಂದು-ಕೊರತೆಗಳ ಸಭೆಯನ್ನು ಕರೆಯಲು ಹಾಗೂ ಸ್ಲಂ ನಿವಾಸಿಗಳ ವಿವಿಧ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನೂರಾರು ಸ್ಲಂ ನಿವಾಸಿಗಳು ಬೃಹತ್ ಪ್ರತಿಭಟನಾ ಧರಣಿ ಸಡೆಸಿದರು.
ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ ಆರ್ ಮಾನ್ವಿ ಮಾತನಾಡಿ ಗದಗ-ಬೆಟಗೇರಿ ನಗರದಲ್ಲಿ 50ಕ್ಕೂ ಹೆಚ್ಚು ಗುಡಿಸಲ ಪ್ರದೇಶಗಳನ್ನು ಸ್ಲಂ ಕಾಯ್ದೆ ಪ್ರಕಾರ ಘೋಷಣೆಯಾಗಿ ಸುಮಾರು ದಶಕಗಳು ಕಳೆದರು ಸಹ ನಮ್ಮ ಭಾಗದ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೊಳಗೇರಿಗಳನ್ನು ಅಭಿವೃದ್ಧಿ ಪಡೆಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಕಳೆದ 5 ವರ್ಷಗಳಿಂದ ನಗರದ ವಸತಿರಹಿತರ ಬೇಡಿಕೆಗಳಿಗೆ ಆಗ್ರಹಿಸಿ ನಿರಂತರ ಹೋರಾಟಗಳನ್ನು ನಡೆಸುತ್ತ ಬಂದರು ಸಹ ಅಧಿಕಾರಿಗಳು ಮಾತ್ರ ವಸತಿರಹಿತರ ನ್ಯಾಯಬದ್ದ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲಾ.
ನಮ್ಮ ಸ್ಲಂ ಪ್ರದೇಶಗಳ ಅಭಿವೃದ್ಧಿಗಾಗಿ ಮತ್ತು ವಸತಿ ಯೋಜನೆಗಳನ್ನು ಪಾರ್ದಶಕತೆಯಿಂದ ಕಾಮಗಾರಿಗಳನ್ನು ನಡೆಸಲು ಹಾಗೂ ನಗರದ ಮೂಲ ನಿವಾಸಿಗಳಿಗೆ ಸಕರ್ಾರದ ಯೋಜನೆಗಳನ್ನು ತಲುಪ ಬೇಕಾದರೆ ತಕ್ಷಣ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಮತ್ತು ಸ್ಲಂ ಸಮಿತಿ ಮುಖಂಡರನ್ನು ಒಳಗೊಂಡು ಕುಂದು-ಕೊರತೆಗಳ ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದರು, ಜಿಲ್ಲಾಧಿಕಾರಿಗಳು ನಗರದ ಕೊಳಗೇರಿಗಳ ಅಭಿವೃದ್ಧಿಗಾಗಿ ಬರುವ ಅನುದಾನವನ್ನು ಸರಿಯಾಗಿ ಬಳಕೆ ಮಾಡಲು ಹಾಗೂ ನೈಜ್ ಗುಡಿಸಲ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸಂಭಂದಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕು.
ಬಡವರ ಪ್ರದೇಶಗಳ ಅಭಿವೃದ್ಧಿಗಾಗಿ ಮಂಜೂರು ಆಗುತ್ತಿರುವ ವಸತಿ ಮತ್ತು ಮೂಲಭೂತ ಸೌಕರ್ಯಗಳ ಅನುದಾನವನ್ನು ಮೂಲ ಗುಡಿಸಲ ಪ್ರದೇಶಗಳಿಗೆ ಬಳಕೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸ್ಲಂ ಸಮಿತಿ ಉಪಾಧ್ಯಕ್ಷ ರವಿಕುಮಾರ ಬೆಳಮಕರ ಹಾಗೂ ಪ್ರಧಾನ ಕಾರ್ಯದಶರ್ಿ ಅಶೋಕ ಕುಸಬಿ ಮಾತನಾಡಿ ಗದಗ-ಬೆಟಗೇರಿ ನಗರದ ಕೊಳಗೇರಿಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಿ ಕೊಡಲೇ ಜಿಲ್ಲಾಧಿಕಾರಿಗಳು ಕುಂದು-ಕೊರತೆಗಳ ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದರು. ಸ್ಲಂ ನಿವಾಸಿಗಳ ಪ್ರಮುಖ ಬೇಡಿಕೆಗಳಾದ ನಗರದ ಕೊಳಗೇರಿ ಕುಟುಂಬಗಳಿಗೆ ನಗರಸಭೆಯಿಂದ ಆಸ್ತಿ ಉತ್ತಾರ ಪೊರೈಸಬೇಕು, ಘೋಷಣೆಯಾಗಿರುವ ಎಲ್ಲಾ ಸ್ಲಂ ಪ್ರದೇಶಗಳ ಅಭಿವೃದ್ಧಿಗೆ ಮೂದಲು ಆದ್ಯತೆ ನೀಡಬೇಕು.
ನಗರದ ಗಂಗಿಮಡಿ ಹತ್ತಿರ ನಿಮರ್ಿಸಲಾಗುತ್ತಿರುವ 3630 ಮನೆಗಳಲ್ಲಿ ಮೂಲ ಗುಡಿಸಲ ಮತ್ತು ವಸತಿಹರಹಿತರಾದ 347 ಕುಟುಂಬಗಳಿಗೆ ಮನೆಗಳನ್ನು ಹಂಚಿಕೆ ಮಾಡಬೇಕು ಇನ್ನು ಹಲವಾರು ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಅಪರ ಜಿಲ್ಲಾಧಿಕಾರಿಗಳು ಮನವಿಯನ್ನು ಸ್ವಿಕರಿಸಿ ಮಾತನಾಡಿ ಸ್ಲಂ ನಿವಾಸಿಗಳ ಬೇಡಿಕೆಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಆದಷ್ಟು ಬೇಗನೆ ಕುಂದು-ಕೊರತೆಗಳ ಸಭೆಯನ್ನು ಕರೆಯಲಾಗುವುದೆಂದು ಭರವಸೆ ನೀಡಿದರು. ಗದಗ ಜಿಲ್ಲಾ ಸ್ಲಂ ಸಮಿತಿ ಸಂಘಟನಾ ಸಂಚಾಲಕರಾದ ಪರವೀನಬಾನು ಹವಾಲ್ದಾರ, ಮಹಿಳಾ ಸಂಚಾಲಕರಾದ ಮೆಹರುನಿಸಾ ಢಾಲಾಯತ, ಬಸವರಾಜ ಯಡವಣ್ಣವರ, ಅಬುಬಕರ ಮಕಾನದಾರ, ಮಮ್ತಾಜಬೇಗಂ ಮಕಾನದಾರ, ಪಾರ್ವತಿ ಬಳ್ಳಾರಿ, ಯುವ ಸಮಿತಿ ಸಂಚಾಲಕ ಉಸ್ಮಾನ ಚಿತ್ತಾಪೂರ, ಸಹ ಸಂಚಾಲಕರಾದ ಮಹ್ಮದರಫೀಕ ಧಾರವಾಡ, ವಂದನಾ ಶ್ಯಾವಿ, ಮದರ್ಾನಬಿ ಬಳ್ಳಾರಿ, ರೇಣುಕಾ ಪಾಟೀಲ, ಮಲೇಶಪ್ಪ ಕಲಾಲ, ಜಾಫರ ಢಾಲಾಯತ, ಮೆಹಬೂಬ ಮಲಬಾರ, ವಿಶಾಲಕ್ಷಿ ಹರೇಗೌಡ್ರ, ರಾಜೇಸಾಬ ಮಲಬಾರ, ಸಾಕ್ರುಬಾಯಿ ಗೋಸಾವಿ, ಸಲೀಮ ಢಾಲಾಯತ, ದಾದು ಗೋಸಾವಿ, ಶಮಶಾದ ನರಗುಂದ, ಈರಮ್ಮ ಗೌಡ್ರ, ಬಸಮ್ಮ ಮೂಲಿಮನಿ, ನಜಮುನಿಸಾ ಮುಡಗೋಡ, ರೇಷ್ಮಾ ಪೇಂಡಾರಿ, ಕಮಲಾ ಚಲವಾದಿ ಹಾಗೂ ಗದಗ-ಬೆಟಗೇರಿ ನಗರದ ವಿವಿಧ ಸ್ಲಂ ಪ್ರದೇಶಗಳ ನೂರಾರು ಸ್ಲಂ ನಿವಾಸಿಗಳು ಮತ್ತು ವಸತಿರಹಿತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.