ಸರ್ಕಾರದ ಆದೇಶದಂತೆ ಕೊಳಗೇರಿ ಜನರಿಗೆ ಇ-ಖಾತೆ ವಿತರಿಸಲು ಆಗ್ರಹಿಸಿ ಸ್ಲಂ ಸಮಿತಿಯಿಂದ ಮನವಿ
ಗದಗ 8: ಗದಗ-ಬೆಟಗೇರಿ ನಗರದ ಕೊಳಗೇರಿ ಪ್ರದೇಶಗಳಲ್ಲಿ ಸುಮಾರು ದಶಕಗಳಿಂದ ಯಾವುದೇ ಸೌಲಭ್ಯಗಳು ಇಲ್ಲದೇ ಸಾವಿರಾರು ಸ್ಲಂ ನಿವಾಸಿಗಳು ವಾಸ ಮಾಡುತ್ತಿದ್ದಾರೆ, ಸರ್ಕಾರಿ ಭೂಮಿಯಲ್ಲಿರುವ ಸ್ಲಂ ಪ್ರದೇಶದ ಕುಟುಂಬಗಳಿಗೆ ಸ್ಲಂ ಬೋರ್ಡನಿಂದ ಈಗಾಗಲೇ ಹಕ್ಕುಪತ್ರಗಳನ್ನು ವಿತರಿಸಲಾಗಿದೆ, ಇಂತಹ ಕುಟುಂಬಗಳಿಗೆ ರಾಜ್ಯ ಸರ್ಕಾರದ ಆದೇಶದಂತೆ ಇ-ಖಾತೆ ವಿತರಿಸಲು ಸ್ಲಂ ಬೋರ್ಡ ಅಧಿಕಾರಿಗಳು ನಗರಸಭೆಗೆ ಮಾಹಿತಿಯನ್ನು ನೀಡಬೇಕೆಂದು ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಗದಗ ಜಿಲ್ಲಾ ಸ್ಲಂ ಸಮಿತಿ ಪದಾಧಿಕಾರಿಗಳು ಸ್ಲಂ ಬೋರ್ಡ ಅಧಿಕಾರಿಗಳು ಮನವಿ ನೀಡಿ ಆಗ್ರಹಿಸಿದರು, ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷರಾದ ಇಮ್ತಿಯಾಜ್.ಆರ್.ಮಾನ್ವಿ ಮಾತನಾಡಿ ಗದಗ-ಬೆಟಗೇರಿ ನಗರದಲ್ಲಿ ಅನೇಕ ಸ್ಲಂ ಪ್ರದೇಶದ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ, ಆದರೆ ಈ ಕುಟುಂಬಗಳಿಗೆ ಭೂ ಮಾಲಿಕತ್ವ ನೀಡಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ, ಈ ಹಿಂದೆ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ 94ಸಿಸಿ ಯೋಜನೆಡಿಯಲ್ಲಿ ನೂರಾರು ಕುಟುಂಬಗಳು ತಮ್ಮಗೆ ಭೂ ಮಾಲಿಕತ್ವ ನೀಡಬೇಕೆಂದು ಅರ್ಜಿಗಳನ್ನು ಸಲ್ಲಿಸಿದರು, ಆದರೆ ಕಂದಾಯ ಇಲಾಖೆಯವರು ಯಾವುದೇ ಕ್ರಮ ಕೈಗೊಳ್ಳಲದೇ ಸರ್ಕಾರದ 94ಸಿಸಿ ಯೋಜನೆಯನ್ನು ಬೇಕಾಬಿಟ್ಟಿಯಾಗಿ ಅನುಷ್ಠಾನಗೊಳಿಸಿದ್ದರಿಂದ ಈ ಯೋಜನೆ ಕೇವಲ ಅರ್ಜಿ ಸಲ್ಲಿಸಲು ಮಾತ್ರ ಸಿಮೀತವಾಗಿದೆ, ಈಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಇ-ಖಾತೆ ಯೋಜನೆಯಲ್ಲಿ ಹಕ್ಕುಪತ್ರಗಳನ್ನು ಪಡೆದುಕೊಂಡಿರುವ ಕುಟುಂಬಗಳಿಗೆ ಅನುಕೂಲವಾಗುವ ದೃಷ್ಠಿಯಲ್ಲಿ ಅನುಷ್ಠಾನಗೊಳ್ಳಬೇಕು, ಅನೇಕ ಬಾರಿ ಸಂಘಟನೆಯ ನೇತೃತ್ವದಲ್ಲಿ ಗದಗ-ಬೆಟಗೇರಿ ನಗರದ ವಿವಿಧ ಸ್ಲಂ ಪ್ರದೇಶದ ನೂರಾರು ಸ್ಲಂ ನಿವಾಸಿಗಳು ಸ್ಲಂ ಬೋರ್ಡ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವ ಮೂಲಕ ಸ್ಲಂ ಪ್ರದೇಶದ ಕುಟುಂಬಗಳ ವಸತಿ, ಮೂಲಭೂತ ಸೌಲಭ್ಯ, ಹಕ್ಕುಪತ್ರ, ಅಘೋಷಿತ ಗುಡಿಸಲು ಪ್ರದೇಶಗಳ ಘೋಷಣೆ ಮತ್ತು ಇನ್ನು ಹಲವಾರು ಹಕ್ಕೋತ್ತಾಯಗಳಿಗೆ ಮನವಿ ನೀಡಿ ಆಗ್ರಹಿಸಲಾಗಿದೆ, ಆದರೆ ಅಧಿಕಾರಿಗಳು ಸ್ಲಂ ಸಮಿತಿಯ ಮನವಿಗೆ ಯಾವುದೇ ಪ್ರತಿಕ್ರಿಯ ನೀಡದೇ ಸ್ಲಂ ಜನರ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡಿದ್ದಾರೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಡಿಯಲ್ಲಿ ಗದಗ-ಬೆಟಗೇರಿ ನಗರದ ಕೊಳಗೇರಿ ಪ್ರದೇಶಗಳಲ್ಲಿ ಸರಿಯಾದ ಗುಣಮಟ್ಟದ ಮನೆಗಳನ್ನು ನಿರ್ಮಿಸಿದೆ ಕಳಪೆ ಕಾಮಗಾರಿ ನಡೆಸಿ ಬಡಜನರ ಕೋಟ್ಯಾಂತರ ಅನುದಾವನ್ನು ಲೋಟಿ ಮಾಡುತ್ತಿದ್ದಾರೆ, ಗದಗ-ಬೆಟಗೇರಿ ನಗರದ ಅನೇಕ ಅಘೋಷಿತ ಗುಡಿಸಲು ಪ್ರದೇಶಗಳನ್ನು ಘೋಷಣೆಗಾಗಿ ಅರ್ಜಿಗಳನ್ನು ಸಲ್ಲಿಸಿ 3 ವರ್ಷಗಳಾದರು ಈ ವರೆಗೊ ಸ್ಲಂ ಕಾಯ್ದೆ ಪ್ರಕಾರ ಘೋಷಣೆ ಆಗಿರುವದಿಲ್ಲ, ವಸತಿ ಯೋಜನೆಯಲ್ಲಿ ನಡೆಯುತ್ತಿರುವ ಭಾರಿ ಭ್ರಷ್ಟಾಚಾರವನ್ನು ಖಂಡಿಸಿ ಸ್ಲಂ ಸಮಿತಿಯಿಂದ ನಿರಂತರ ಹೋರಾಟಗಳನ್ನು ನಡೆಸಿದರು ಸಹ ಸ್ಲಂ ಬೋರ್ಡ ಅಧಿಕಾರಿಗಳು ಕಣ್ಣಿದ್ದರು ಕುರಡರಂತೆ ವರತಿಸುತ್ತಿದ್ದಾರೆ, ಕೊಡಲೇ ಅಧಿಕಾರಿಗಳು ಎಚ್ಚತ್ತುಗೊಂಡು ಸ್ಲಂಗಳಲ್ಲಿ ಮನೆಗಳನ್ನು ನಿರ್ಮಿಸಿದೇ ಖೋಟ್ಟಿ ದಾಖಲೆಗಳನ್ನು ಸೃಷ್ಠಿಸಿ ನೂರಾರು ಬಡವರ ಹೆಸರಲ್ಲಿ ಮನೆಗಳ ಅನುದಾನವನ್ನು ಲೋಟಿ ಮಾಡಿರುವ ಗುತ್ತಿಗೆದಾರರ ಮೇಲೆ ಕ್ರೀಮಿನಲ್ ಮೋಕದಮೆ ಹಾಕಲು ಹಾಗೂ ಇದನ್ನು ಉನ್ನತಮಟ್ಟದ ತನಿಖೆ ನಡೆಸಲು ಸ್ಲಂ ಬೋರ್ಡ ಆಯುಕ್ತರಿಗೆ ಮನವಿ ಮಾಡಬೇಕು, ಸ್ಲಂ ಜನರ ಬೇಡಿಕೆಗಳಿಗೆ ಅಧಿಕಾರಿಗಳು ಪ್ರಮಾಣಿಕವಾಗಿ ಸ್ಪಂದಿಸದಿದ್ದಲ್ಲಿ ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ಸ್ಲಂ ಬೋರ್ಡ ಕಚೇರಿಯ ಮುಂದೆ ನೂರಾರು ನಿವಾಸಿಗಳಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಮೂಲಕ ಎಚ್ಚರಿಸಲಾಗಿದೆ, ಸ್ಲಂ ಸಮಿತಿ ಮುಖಂಡರಾದ ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ಮೆಹಬೂಬಸಾಬ ಬಳ್ಳಾರಿ, ಮೆಹರುನಿಸಾ ಡಂಬಳ, ಮಂಜುನಾಥ ಶ್ರೀಗಿರಿ, ದುರ್ಗಪ್ಪ ಮಣ್ಣವಡರ, ಖಾಜಾಸಾಬ ಇಸ್ಮಾಯಿಲನವರ, ಮೈಮುನ ಬೈರಕದಾರ, ಶಂಕ್ರ್ಪ ಪೂಜಾರ, ಜಂದಿಸಾಬ ಬಳ್ಳಾರಿ, ಸಲೀಂ ಹರಿಹರ, ಸಾಕ್ರುಬಾಯಿ ಗೋಸಾ ಹಾಗೂ ಮುಂತಾದ ಪದಾಧಿಕಾರಿಗಳು ಮನವಿ ನೀಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.