ಲೋಕದರ್ಶನ ವರದಿ
ಧಾರವಾಡ 13: ನಮ್ಮ ಸಾಂಸ್ಕೃತಿಕ ಹಿರಿಮೆ ಗರಿಮೆಯನ್ನು ಹಾಗೂ ಉತ್ತರ ಕನರ್ಾಟಕದ ಮಹತ್ವವನ್ನು ನಾಡಿಗೆ ಸಾರುವ ಕೆಲಸ ಆಗಬೇಕು, ಈ ನಿಟ್ಟಿನಲ್ಲಿ ಕಾರ್ಯಮಾಡುತ್ತಿರುವ ಯುವ ಕಲಾವಿದರು ಅಭಿನಂದನಾರ್ಹರು ಎಂದು ಅರ್. ಎಸ್. ಹಿರೇಮಠ ಹೇಳಿದರು. ಅವರು ಕನರ್ಾಟಕ ವಿದ್ಯಾವರ್ಧಕ ಸಂಘದ ಕಲಾ ಮಂಟಪವು ಆಯೋಜಿಸಿದ್ದ ಚರ್ಮವಾದ್ಯ ಹಾಗೂ ಗಾಳಿ ವಾದ್ಯ ಸ್ಪಧರ್ೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ವಿಜೇತರಾದವರಿಗೆ ಬಹುಮಾನ ಪ್ರದಾನ ಮಾಡಿ ಮಾತನಾಡುತ್ತಿದ್ದರು.
ಡಾ. ಅರಣ್ಯಕುಮಾರ ಮುನೆನ್ನಿ ಹಾಗೂ ಡಾ. ರಾಚಯ್ಯ ಹಿರೇಮಠ ಹಾಗೂ ಶೇಖ ಅಬ್ದುಲಾ ಖಾಜಿ ನಿಣರ್ಾಯಕರಾಗಿ ಕಾರ್ಯನಿರ್ವಹಿಸಿದರು.
ನಿಣರ್ಾಯಕರ ಪರವಾಗಿ ಮಾತನಾಡಿದ ಶೇಖ ಅಬ್ದುಲಾ ಖಾಜಿ, ಗಾಳಿ ಮತ್ತು ಚರ್ಮ ವಾದ್ಯಗಳು ಹಾಗೂ ಎಲ್ಲ ವಾದ್ಯಗಳನ್ನು ಯುವಜನತೆ ಕಲಿತು ಆಸ್ವಾದಿಸಬೇಕೆಂದು ಕರೆ ನೀಡಿ, ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕನರ್ಾಟಕ ವಿದ್ಯಾವರ್ಧಕ ಸಂಘದ ಕಲಾ ಮಂಟಪವು ಕಲಾವಿದರಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಸಹಕಾರ್ಯದಶರ್ಿ ಸದಾನಂದ ಶಿವಳ್ಳಿಯವರು ವಹಿಸಿದ್ದರು. ಕಲಾ ಮಂಟಪದ ಸಂಚಾಲಕ ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನರ್ಾಟಕ ವಿದ್ಯಾವರ್ಧಕ ಸಂಘವು ಕಲಾವಿದರನ್ನು ಪ್ರೋತ್ಸಾಹಿಸುವಲ್ಲಿ ಹಿಂದಿನಿಂದಲೂ ದಿಟ್ಟ ಹೆಜ್ಜೆಗಳನ್ನು ಇಟ್ಟು ಈ ವರ್ಷ ಹುಬ್ಬಳ್ಳಿ, ಹಾವೇರಿ, ಬೆಳಗಾವಿ, ಅಣ್ಣಿಗೇರಿ, ಬನವಾಸಿ ಮುಂತಾದೆಡೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಅನುಪಮ ಕಾರ್ಯ ಮಾಡುತ್ತಾ ಬಂದಿದೆ ಎಂದರು.
ಚರ್ಮವಾದ್ಯ ವಿಭಾಗದಲ್ಲಿ, 17 ವರ್ಷದ ಒಳಗಿನವರ ಗುಂಪಿನಲ್ಲಿ, ಶಮಂತ ದೇಸಾಯಿ ಪ್ರಥಮ, ಮಂಜುನಾಥ ಬೇಗೂರ ದ್ವಿತೀಯ ಹಾಗೂ ಸಂತೋಷ ರಾಠೋಡ ತೃತೀಯ ಬಹುಮಾನ ಪಡೆದರು. 18 ರಿಂದ 35 ವರ್ಷದ ಒಳಗಿನವರ ಗುಂಪಿನಲ್ಲಿ, ಮಳೆಮಲ್ಲೇಶ ಹೂಗಾರ ಪ್ರಥಮ, ಪಂಚಮಿ ಉಪಾಧ್ಯಾಯ ದ್ವಿತೀಯ ಹಾಗೂ ರಾಹುಲ ಪಾಟೀಲ ತೃತೀಯ ಬಹುಮಾನ ಪಡೆದರು.
35 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸೋಮಲಿಂಗಪ್ಪ ದಿವಟಗಿ ಪ್ರಥಮ ಬಹುಮಾನ ಪಡೆದರು. ಗಾಳಿ ವಾದ್ಯ ವಿಭಾಗದಲ್ಲಿ, 17 ವರ್ಷದ ಒಳಗಿನವರ ಗುಂಪಿನಲ್ಲಿ, ಪ್ರಮೋದ ಹೆಬ್ಬಳ್ಳಿ ಪ್ರಥಮ, ಮಧುಲತಾ ಚಲವಾದಿ ದ್ವಿತೀಯ ಹಾಗೂ ಮನೋಜ ಪಾರೋಜಿ ತೃತೀಯ ಬಹುಮಾನ ಪಡೆದರು.
18 ರಿಂದ 35 ವರ್ಷದ ಒಳಗಿನವರ ಗುಂಪಿನಲ್ಲಿ, ಪುಟ್ಟರಾಜ ಭಜಂತ್ರಿ ಪ್ರಥಮ, ಸ್ನೇಹಾ ಹೆಗಡೆ ದ್ವಿತೀಯ ಬಹುಮಾನ ಪಡೆದರು.
35 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಈರಪ್ಪ ಗುಡ್ಡದಮನಿ ಪ್ರಥಮ, ಬಸವರಾಜ ತಳವಾರ ದ್ವಿತೀಯ ಬಹುಮಾನ ಪಡೆದರು. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಯಿತು.
ಕಲಾ ಮಂಟಪದ ಸಲಹಾ ಸಮಿತಿ ಸದಸ್ಯೆ ಮೇಘಾ ಹುಕ್ಕೇರಿ ನಿರೂಪಿಸಿದರು. ಪ್ರಭು ಹಂಚಿನಾಳ ವಂದಿಸಿದರು. ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾಜರ್ುನ ತರ್ಲಗಟ್ಟಿ, ಪ್ರೊ. ಎಸ್. ವಿ. ಬಸವರಡ್ಡಿ, ಪ್ರೊ. ಪಿ. ಕೆ. ಯಾವಗಲ್ಲ, ಗುರುಪ್ರಸಾದ ಹೆಗಡೆ, ಡಾ. ಶ್ರೀಧರ ಕುಲಕಣರ್ಿ ಸೇತುರಾಮ ಹುನಗುಂದ, ಸುರೇಶ ನಿಡಗುಂದಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.