ಲೋಕದರ್ಶನ ವರದಿ
ಕಾಗವಾಡ 27: ಗಡಿನಾಡಿನ ಈ ಭಾಗದಲ್ಲಿ ಎರಡು ರಾಜ್ಯಗಳ ವಿದ್ಯಾಥರ್ಿಗಳನ್ನು ಆಮಂತ್ರಿಸಿ ಹತ್ತಾರು ಸ್ಪಧರ್ೆಗಳಲ್ಲಿ ಭಾಗವಹಿಸುವಂತೆ ಮಾಡಿ ಅವರಲ್ಲಿರುವ ಚಾಣಾಕ್ಷತನೆಯನ್ನು ಮತ್ತು ಪ್ರತಿಭೆ ಬೆಳಗುವಂತೆ ಮಾಡುವ ಈ ಕಾಲೇಜಿನ ಪಾತ್ರ ಪ್ರಶಂಸನೀಯ ಎಂದು ಧಾರವಾಡ ಕಾಲೇಜು ಶಿಕ್ಷಣ ಇಲಾಖೆಯ ಜಂಟೀ ನಿದರ್ೇಶಕರಾದ ಡಾ. ನೀಲಾಂಬಿಕಾ ಪಟ್ಟಣಶೆಟ್ಟಿ ಇವರು ಹೇಳಿದರು.
ಬುಧವಾರ ರಂದು ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ 'ಸ್ಟೆಟ್ ಕಾಮಸರ್್ 2019', 'ಪವರ್ ಆಫ್ ಫಿಫ್ಟಿ' ಈ ಸಮಾರಂಭದಲ್ಲಿ ಡಾ. ನೀಲಾಂಬಿಕಾ ಪಟ್ಟಣಶೆಟ್ಟಿ ಮಾತನಾಡುವಾಗ, ಇಂತಹ ಕಾಮಸರ್್ ಫೆಸ್ಟ್ಗಳಿಂದ ವಿದ್ಯಾಥರ್ಿಗಳಿಗೆ ಉದ್ಯೋಗದಲ್ಲಿ ತೊಡಗುವ ಕೌಶಲಗಳು ಬೆಳೆಯುತ್ತವೆ. ಅವರಿಗೆ ಪ್ರಾಯೋಗಿಕವಾಗಿ ಎದುರಾಗುವ ಸಮಸ್ಯೆಗಳ ಅರಿವು ಉಂಟಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಬೆಳಗಾವಿ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ವಾಣಿಜ್ಯಶಾಸ್ತ್ರ ವಿಭಾಗದ ಪ್ರೊಫೆಸರ್ ಡಾ. ಎಚ್.ವೈ.ಕಾಂಬಳೆ ಮತನಾಡುವಾಗ, ನಾವು ಇಲ್ಲಿಯವರೆಗೆ ಪ್ರಗತಿಯ ಬೆನ್ನುಹತ್ತಿದ್ದೇವೆ. ಆದರೆ ಅದನ್ನು ಬಿಟ್ಟು ಅಭಿವೃದ್ಧಿಯೆಡೆಗೆ ಗಮನ ಹರಿಸಬೇಕು. ಡೆವ್ಹಲಪ್ಮೆಂಟ್ ಶಬ್ದವನ್ನು ಅತ್ಯಂತ ಎಳೆಎಳೆಯಾಗಿ ವಿಶ್ಲೇಷಿಸಿ ಅಭಿವೃದ್ಧಿಯನ್ನು ಮುಖ್ಯ ಧ್ಯೇಯವಾಗಿಸಬೇಕೆಂದು ಹೇಳಿದರು. 50 ವರ್ಷಗಳಲ್ಲಿ ಈ ಮಹಾವಿದ್ಯಾಲಯ ಅಪ್ರತಿಮ ಸಾಧನೆ ಮಾಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಜಿ.ಜಿ.ಕರಲಟ್ಟಿ ಈ ತರಹದ ಫೆಸ್ಟ್ಗಳು ಹಲವಾರು ಆಸಕ್ತರಿಗೆ ಯಾವ ರೀತಿಯಾಗಿ ಪ್ರಯೋಜನ ಕಾರಿಯಾಗಿವೆಯೆಂದು ವಿವರಿಸಿದರಲ್ಲದೆ ಸ್ಪಧರ್ಿಗಳು ಮನಸಾರೆ ಪ್ರಯತ್ನಿಸಿರೆಂದು ಕರೆ ನೀಡಿದರು.
ಸಾನಿಧ್ಯ ವಹಿಸಿದ ಪ.ಪೂ ಯತೀಶ್ವರಾನಂದ ಸ್ವಾಮೀಜಿಯವರು ಶುಭ ಹಾರೈಸಿದರು. ಸಂಯೋಜಕರಾದ ಡಾ. ಎಸ್.ಓ.ಹಲಸಗಿಯವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಪೌವರ್ ಆಫ್ ಫಿಫ್ಟಿಯು ಮಹಾವಿದ್ಯಾಲಯದ ಐದುನೂರು ವಿದ್ಯಾಥರ್ಿಗಳ ಶಕ್ತಿಯೆಂದು ಹೇಳಿ, ಇಡೀ ಫೆಸ್ಟ್ದ ಸ್ಪಧರ್ೆಗಳನ್ನು ವಿವರಿಸಿದರು. ಕನರ್ಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ 30 ಕಾಲೇಜುಗಳಿಂದ 400 ಹೆಚ್ಚು ವಿದ್ಯಾಥರ್ಿಗಳು ಭಾಗವಹಿಸಿದ್ದಾರೆಂದು ಹೇಳಿದರು. ಆಡಳಿತ ಮಂಡಳಿ ಸದಸ್ಯರಾದ ಎ.ಎ.ಪಾಟೀಲ, ಆದರ್ಶ ವಿದ್ಯಾಥರ್ಿನಿ ಅಪ್ಸಾನಾ ದಶಾವಂತ, ಸಂಘದ ಕಾರ್ಯದಶರ್ಿ ಮಲ್ಲಿನಾಥ ಬೋಸಗೆ ಉಪಸ್ಥಿತರಿದ್ದರು. ಪ್ರೊ.ಎಸ್.ಎಸ್.ಬಾಗನೆ ಸ್ವಾಗತಿಸಿ ಪರಿಚಯಿಸಿದರು. ಡಾ.ಎಸ್.ಎ.ಕಕರ್ಿ ವಂದಿಸಿದರು.