ಡಾ. ಎಸ್‌. ಡಬ್ಲೂ ಮೆಣಸಿನಕಾಯಿ ಅವರ ಸ್ಮರಣಾರ್ಥ ಹದಿನಾರನೇ ಸಂಸ್ಥಾಪನಾ ದಿನಾಚರಣೆ ಹಾಗೂ ರಾಷ್ಟ್ರೀಯ ಸಮ್ಮೇಳನ

ಡಾ. ಎಸ್‌. ಡಬ್ಲೂ ಮೆಣಸಿನಕಾಯಿ ಅವರ ಸ್ಮರಣಾರ್ಥ ಹದಿನಾರನೇ ಸಂಸ್ಥಾಪನಾ ದಿನಾಚರಣೆ ಹಾಗೂ ರಾಷ್ಟ್ರೀಯ ಸಮ್ಮೇಳನ Sixteenth Foundation Day Celebration and National Conference in Memory of Dr. S. W. Menasinakayi

ಧಾರವಾಡ 30: ರಾಷ್ಟ್ರಮಟ್ಟದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡದ ಹೆಸರು ಮುಂಚೂಣೆಗೆ ಬರಲು ಶ್ರಮಿಸಿದ, ಶ್ರೇಷ್ಠ ದಾರ್ಶನಿಕ ಹಾಗೂ ದಕ್ಷ ಆಡಳಿತಗಾರರು ಹಾಗೂ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ ಡಾ. ಎಸ್‌. ಡಬ್ಲೂ ಮೆಣಸಿನಕಾಯಿಯವರ ಸ್ಮರಣಾರ್ಥ 16ನೇ ಸಂಸ್ಥಪನಾ ದಿನಾಚರಣೆಯನ್ನು ಇದೇ ರವಿವಾರ ದಿನಾಂಕ 01 ನೇ ಫೆಬ್ರವರಿ, 2026 ರಂದು ಬೆಳಿಗ್ಗೆ 10.00ಗಂಟೆಗೆ ಕೃ.ವಿ.ವಿ.,ಯ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಕೃಷಿ ಮಹಾವಿದ್ಯಾಲಯ ಧಾರವಾಡ ಉದಯವಾಗಲು ಶ್ರಮಿಸಿದ ಅಂದಿನ ಬಾಂಬೆ ರಾಜ್ಯ ಸರಕಾರದ ಕೃಷಿ ಸಚಿವರಾಗಿದ್ದ ಬೆಳಗಾವಿಯ ಧೀಮಂತ ನಾಯಕ ದಿ. ಎಂ. ಪಿ. ಪಾಟೀಲ ಹಾಗೂ ಕೃಷಿ ವಿಶ್ವವಿದ್ಯಾಲಯದ ಏಳಿಗೆಗೆ ಪ್ರಮುಖ ಪಾತ್ರ ವಹಿಸಿದ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ​‍್ರ​‍್ರಥಮ ಕುಲಪತಿಗಳಾದ ಡಾ. ಜೆ.ವಿ.ಗೌಡ ಇವರ ಸ್ಮರಣಾರ್ಥವಾಗಿ 3 ದಿನದ (01 ರಿಂದ 03 ಫೆಬ್ರವರಿ, 2026) ರಾಷ್ಟ್ರೀಯ ಸಮ್ಮೇಳನವನ ಎಂಬ ವಿಷಯದ ಮೇಲೆ ಏರಿ​‍್ಡಸಲಾಗಿದೆ.

ಸದರಿ ಸಮ್ಮೇಳಕ್ಕೆ ಮುಖ್ಯ ಅತಿಥಿಗಳಾಗಿ, ಹೈದರಾಬಾದ್‌ದ ಪತಂಚೇರು ಅರೆ-ಶುಷ್ಕ ಉಷ್ಣವಲಯದ ಅಂತರರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆಯ ಮಹಾನಿರ್ದೇಶಕರಾದ ಡಾ. ಹಿಮಾಂಶು ಪಾಠಕ್ ಇವರು ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಕೃಷಿ ವಿಶ್ವವಿದ್ಯಾಲಯ ಧಾರವಾಡದ ಗೌರವಾನ್ವಿತ ಕುಲಪತಿಗಳಾದ ಡಾ. ಪಿ. ಎಲ್‌. ಪಾಟೀಲ ವಹಿಸಲಿದ್ದಾರೆ. ದಿ. ಡಾ. ಎಸ್‌. ಡಬ್ಲೂ ಮೆಣಸಿನಕಾಯಿ ಇವರ ಧರ್ಮಪತ್ನಿಗೌರಾದೇವಿ ಮೆಣಸಿನಕಾಯಿ ಉಪಸ್ಥಿತರಿರುವರು.  

ಗೌರವಾನ್ವಿತ ಅತಿಥಿಗಳಾಗಿ ಕೃಷಿ ವಿಶ್ವವಿದ್ಯಾಲಯ, ಧಾರವಾಡದ ಮಾನ್ಯ ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳಾದ  ಜಿ.ಎಸ್‌.ಪಾಟೀಲ್, ಶಾಸಕರು (ರೋಣ),  ಸೆಲ್ವಕುಮಾರ ಎಸ್‌., (ಭಾ.ಆ.ಸೇ), ಡಾ. ಶಮ್ಲಾ ಇಕ್ಬಾಲ್, (ಭಾ.ಆ.ಸೇ), ಡಾ  ಸೀಮಾ ಜಗ್ಗಿ,   ಪಾರ್ವತಿ ಎಸ್‌.ಕುರ್ಲೆ, ವೀರನಗೌಡ ಪಿ. ಪೋಲಿಸಗೌಡರ್, ರವಿಕುಮಾರ ಮಾಳಿಗೇರ, ಬಸವರಾಜ ಕುಂದಗೋಳಮಠ, ಡಾ. ವಾಸುದೇವ ಆರ್‌.,  ಮಾಲತೇಶ ಶ್ಯಾಗೋಟಿ, ವಾಯ್‌. ಬಿ., ಹೊನ್ನಲಿಂಗಪ್ಪ ಹಾಗೂ ಕುಲಸಚಿವರಾದ ಜಯಶ್ರೀ ಶಿಂತ್ರಿ, (ಕೆ.ಎ.ಎಸ್‌.) ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ

ಎಂದು ಕೃಷಿ ಮಹಾವಿದ್ಯಾಲಯ, ಧಾರವಾಡದ ವಿದ್ಯಾಧಿಕಾರಿ ಮತ್ತು ಫೌಂಡೇಶನ್ ಉಪಾಧ್ಯಕ್ಷರಾದ  ಡಾ. ವಿ.ಬಿ.ಕುಲಿಗೋಡ, ಫೌಂಡೇಶನ್ ಕಾರ್ಯದರ್ಶಿಗಳಾದ ಡಾ. ಎಸ್‌. ಎ. ದೇಸಾಯಿ ಹಾಗೂ ಡಾ. ಬಿ. ಆರ್‌. ಪಾಟೀಲ, ಪ್ರಾಧ್ಯಾಪಕರು ್ಘ ಸಂಪಾದಕರು ಹಾಗೂ ಸಂಘಟನಾ ಕಾರ್ಯದರ್ಶಿಗಳು, ಎಸ್‌. ಡಬ್ಲೂ. ಮೆಣಸಿನಕಾಯಿ ಫೌಂಡೇಶನ್ ಇವರು ತಿಳಿಸಿದ್ದಾರೆ ಹಾಗೂ ಎಲ್ಲರಿಗೂ ವಿಶ್ವವಿದ್ಯಾಲಯದ ಪರವಾಗಿ ಆದರದ ಸ್ವಾಗತವನ್ನು ಕೋರಿದ್ದಾರೆ.