ನವದೆಹಲಿ, ಏ 17 ರಾಜಕೀಯ ಭಿನ್ನಾಭಿಪ್ರಾಯ ಮರೆತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಣೆ ಮಾಡಿರುವ ಸಂಗತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಮೆಚ್ಚಗೆ ವ್ಯಕ್ತವಾಗಿದೆ. ತಿರುವಂತಪುರ ಪ್ರವಾಸ ಮುಗಿಸಿ ವೇಳೆ ಸೀತಾರಾಮನ್ ಅವರು ದೆಹಲಿಗೆ ವಾಪಸ್ ಬರುವ ಮುನ್ನ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿತರೂರ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು ಜೊತೆಗೆ ಈ ಚಿತ್ರ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ನಂತರ ಇದರ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ. ನಾವು ರಾಜಕೀಯ ಜೀವನದಲ್ಲಿ ಎದುರಾಳಿಗಳೇ ಹೊರತು ರಾಜಕೀಯ ವೈರಿಗಳಲ್ಲ ಮೇಲಾಗಿ ನಾನು ಆಸ್ಪತ್ರೆಗೆ ಹೋಗುವ ವಿಚಾರವನ್ನು ನಮ್ಮ ಪಕ್ಷದ ನಾಯಕರಿಗೂ ಮತ್ತು ಕಾರ್ಯಕರ್ತರು ಸೇರಿದಂತೆ ಯಾರಿಗೂ ಹೇಳಿರಲಿಲ್ಲ ಎಂದು ಅವರು ಸೀತಾರಾಮನ್ ಅವರು ಸ್ಪಷ್ಟ ಪಡಿಸಿದ್ದಾರೆ. ನನಗೆ ವಿಷಯ ಗೊತ್ತಾಯಿತು ಮೇಲಾಗಿ ಅವರ ತಲೆಗೆ ಪೆಟ್ಟುಬಿದ್ದು ಅನೇಕ ಕಡೆ ಹೊಲಿಗೆ ಹಾಕಲಾಗಿದೆ ಎಂಬ ವಿಚಾರ ತಿಳಿದ ನಂತರ ವಿಮಾನ ನಿಲ್ದಾಣಕ್ಕೆ ಹೋಗುವ ಮುನ್ನ, ಸೀತಾರಾಮನ್ ಅವರು ಆಸ್ಪತ್ರೆಗೆ ತೆರಳಿ ತರೂರ್ ಅವರ ಆರೋಗ್ಯ ವಿಚಾರಿಸಿದ್ದರು ಮೇಲಾಗಿ ಇದರ ಬಗ್ಗೆ ತರೂರ್ ಸಹ ಸಚಿವರ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿ ಪಕ್ಷ ಮೀರಿ ಅವರು ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ ನಾನು ಇದಕ್ಕಾಗಿ ಅವರಿಗೆ ಅಭಾರಿಯಾಗಿದ್ದೇನೆ ಎಂಬ ಅಭಿಮಾನದ ಮಾತು ಹೇಳಿದ್ದರು. ಇದೆಲ್ಲ ವೂ ಸಾಮಾಜಿಕ ಜಾಲತಾಣದಲ್ಲಿ ಬಂದ ಮೇಲೆ ಸಚಿವರ ಒಳ್ಳೆಯ ನಡವಳಿಕೆ ಬಹಳ ಅಭಿಮಾನದ ಮಾತುಗಳು ಕೇಳಿ ಬಂದಿವೆ. ನಾನು ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ ಮೇಲಾಗಿ ಕೊನೆ ಗಳಿಗೆಯಲ್ಲಿ ನಾನು ತೆಗೆದುಕೊಂಡ ತೀಮರ್ಾನವಾಗಿತ್ತು. ಎಲ್ಲರಿಗೂ ಹೇಳಿದರೆ ಆಸ್ಪತ್ರೆಯ ಬಳಿ ಕಾರ್ಯಕರ್ತರು ಮತ್ತು ಮಾಧ್ಯಮದವರು ಗುಂಪು ಸೇರಿ ಜನಜಂಗುಳಿ ವಾತವರಣ ನಿಮರ್ಾಣವಾಗಿ ಬೇರೆಯವರಿಗೆ ಇದರಿಂದ ತೊಂದರೆಯಾಗಲಿದೆ ಎಂಬ ಕಾರಣದಿಂದ ಯಾರಿಗೂ ಹೇಳದೆ ಹೋಗಿದ್ದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.