ಲೋಕದರ್ಶನ ವರದಿ
ಸಿರುಗುಪ್ಪ 13: ನಗರದಲ್ಲಿ ತುಂಗಭದ್ರಾ ನದಿ ಮೈದುಂಬಿ ಕೊಂಡು ಹರಿಯುತ್ತಿರುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಈ ಭಾಗದ ಜನ ಹಜರತ್ ನೂರ್ ಮೊಹಮ್ಮದ್ ಖಾದ್ರಿ ದರ್ಗಾ, ಶಂಭುಲಿಂಗೇಶ್ವರ ದೇವಸ್ಥಾನ ಮತ್ತು ಸುತ್ತಮುತ್ತ ನೀರು ಹರಿಯುತ್ತಿರುವುದು ಅಭೂತ ಪೂರ್ವ ಜನ ನಿಂತುಕೊಂಡು ನೋಡಿ ವೀಕ್ಷಿಸಿದರು. ತಾಲೂಕಿನ ಕೆಂಚನಗುಡ್ಡ ಸಮೀಪದ ದಡೇಸುಗೂರು ಸಯ್ಯದ್ ಆಲಂ ಬಾಷ ಖಾದ್ರಿ, ಮುಕ್ಕುಂದೆ ಗಡ್ಡೆ ಖಾದರ್ ಬಾಷಾ ಖಾದ್ರಿ ದಗರ್ಾ, ದೇಶನೂರು ಗ್ರಾಮದ ಬಳಿ ಉಕ್ಕಿ ಹರಿಯುತ್ತಿರುವ ನದಿ ನೋಡಲು ಸೇತುವೆ ಮೇಲೆ ನಿಂತು ನೋಡುತ್ತಿದ್ದ ಜನ ನದಿ ಪ್ರವಾಹದಲ್ಲಿ ಮೊಸಳೆಯನ್ನು ತೇಲಿ ಬಂದ ಹೆಬ್ಬಾವು ದಡದಲ್ಲಿ ಕಂಡಿರುವ ದೃಶ್ಯ, ಹೊಸಪೇಟೆ ತುಂಗಭದ್ರಾ ಜಲಾಶಯದ ಎಲ್ಲಾ ಕ್ರಸ್ಟ್ ಗೇಟ್ ಗಳನ್ನು ತೆರೆದು ಅಪಾರ ಪ್ರಮಾಣದಲ್ಲಿ ನದಿಗೆ ನೀರು ಹರಿಸಲಾಗುತ್ತಿದ್ದು 3ದಿನಗಳಲ್ಲೇ 50ಟಿಎಂಸಿ ಅಡಿಗೂ ಅಧಿಕ ನೀರು ವ್ಯರ್ಥವಾಗಿ ಹರಿದು ಹೋಗಿದೆ.
ಸಮುದ್ರ ಮಟ್ಟದಿಂದ ಜಲಾಶಯದ ನೀರಿನ ಮಟ್ಟ ಗರಿಷ್ಠ ಮಟ್ಟ 1633ಅಡಿಗಳಲ್ಲಿ ಇಂದಿನ ಮಟ್ಟ 1630ಅಡಿ. ಒಳಹರಿವು 2,51,298ಕ್ಯೂಸೆಕ್ಸ್ ಗಳಲ್ಲಿ ಹೊರ ಹರಿವು 2,21,220.ಸಿರುಗುಪ್ಪ ತಾಲ್ಲೂಕಿನ ನದಿ ತಟದಲ್ಲಿರುವ 22ಗ್ರಾಮಗಳ 7.5ಸಾವಿರ ಏತ ನೀರಾವರಿ ವಿದ್ಯುತ್ ಪಂಪ್ ಸೆಟ್ಗಳು ಮತ್ತು ಟ್ರಾನ್ಸ್ ಫಾರ್ಮರ್ ಗಳು ಪ್ರವಾಹದ ನೀರಿನಲ್ಲಿ ಮುಳುಗಡೆಯಾಗಿವೆ,ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಳಿಸಲಾಗಿದೆ ಎಂದು ಜೆಸ್ಕಾಂ ಸಹಾಯಕ ನಿವರ್ಾಹ ಎಂಜಿನಿಯರಿಂಗ್ ಜಾಫರ್ ತಿಳಿಸಿದರು. ಮುಳುಗಿರುವ ಪಂಪ್ ಸೆಟ್ಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಹಾಗೂ ಕಂದಾಯ ಪರಿವೀಕ್ಷಕ ಎಸ್.ಮೊಹಮ್ಮದ್ ಸಾದಿಕ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ದಯಾನಂದ ಪಾಟೀಲ್ ತಿಳಿಸಿದ್ದಾರೆ.
ನದಿ ಭಾಗದಲ್ಲಿರುವ ಏತ ನೀರಾವರಿ ಪಂಪ್ ಸೆಟ್ಗಳಿಗೆ ಮುಳುಗಿ ಹಾನಿಯಾಗಿರುವ ಪಂಪ್ ಸೆಟ್ ಗಳ ರೈತರಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ರೈತ ಮುಖಂಡ ಎನ್.ಮೋಹನ್ ಕುಮಾರ್ ಸಾಮಾಜಿಕ ಕಾರ್ಯಕರ್ತ ನೆರೆ ಹಾವಳಿ ಪ್ರಕೃತಿ ವಿಕೋಪ ತಾಲ್ಲೂಕು ಸದಸ್ಯರಾದ ಎ.ಅಬ್ದುಲ್ ನಬಿ ಅವರು ಮನವಿ ಮಾಡಿದ್ದಾರೆ. ಎ.ಮೊಹಮ್ಮದ್ ಇಬ್ರಾಹಿಂ ಮೊಹಮ್ಮದ್ ರಫಿ ಮೊಹಮ್ಮದ್ ನೌಷಾದ್ ಮತ್ತಿತರರು ಇದ್ದರು.