4 ವರ್ಷದ ಪುಟಾಣಿಮಹನ್ಯಗೆ ಸಿಂಗಿಂಗ್ ಸ್ಟಾರ್ ವಿಶೇಷ ಪ್ರಶಸ್ತಿ


ಹುಬ್ಬಳ್ಳಿ, 22: ಇಲ್ಲಿನ ಸಾಂಸ್ಕೃತಿಕ ಭವನದಲ್ಲಿ ಆನಂದ ಮೆಲೋಡಿಯವರು ಹಮ್ಮಿಕೊಂಡಿದ್ದ 'ಸಿಂಗಿಂಗ್ ಸ್ಟಾರ್ ಆಫ್ ಹುಬ್ಬಳ್ಳಿ : 2018ರ ಸೀಸನ್-2' ಸಂಗೀತ ಸ್ಪಧರ್ೆಯ ಜ್ಯೂನಿಯರ್ ವಿಭಾಗದಲ್ಲಿ 4 ವರ್ಷದ ಪುಟಾಣಿ ಮಹನ್ಯ ಜಿ. ಪಾಟೀಲ ಅವಳಿಗೆ ಸಿಂಗಿಂಗ್ ಸ್ಟಾರ್ ಆಫ್ ಹುಬ್ಬಳ್ಳಿ ವಿಶೇಷ ಪ್ರಶಸ್ತಿ ದೊರೆತಿದೆ.

 ಅಂತಿಮ ಸುತ್ತಿನಲ್ಲಿ ಅವಳು ಶ್ರೀಮಂಜುನಾಥ ಚಿತ್ರದ 'ಆನಂದ ಪರಮಾನಂದ ಪರಮಾನಂದ' ಹಾಡನ್ನು ಅದ್ಭುತವಾಗಿ ಪ್ರಸ್ತುತ ಪಡಿಸಿದಳು. ಕೇವಲ ನಾಲ್ಕು ವರ್ಷದ ಬಾಲಕಿಯ ಗಾನಸುಧೆಗೆ ಪ್ರೇಕ್ಷಕರು, ನಿಣರ್ಾಯಕರು ಹಾಗೂ ಸ್ಪಧರ್ಾಳುಗಳು ಬೆರಗಾದರು. ಇವಳ ಜೊತೆ ಮತ್ತೊಬ್ಬ ಬಾಲ ಗಾಯಕಿ ದಾವಣಗೇರಿಯ 6 ವರ್ಷದ ಜೀವಿತಾಳಿಗೂ ವಿಶೇಷ ಪ್ರಶಸ್ತಿ ನೀಡಲಾಯಿತು. 

ನಿಣರ್ಾಯಕ ಶಾಸ್ತ್ರೀಯ ಸಂಗೀತ ಗಾಯಕ ನರೇಂದ್ರ ಪಾಟೀಲರು ಮಹನ್ಯಳಿಗೆ ಪ್ರಶಸ್ತಿ ವಿತರಿಸಿದರು. ಕಾರ್ಯಕ್ರಮದ ಸಂಘಟಿಕರಾದ ಆನಂದ ಮೆಲೋಡಿಸ್ನ ಗಾಯಕ ಪ್ರಭಾಕರ, ದರ್ಶನ ಹಾಗೂ ನಿಣರ್ಾಯಕರಾದ ಬಸವರಾಜ ಹಿರೇಮಠ, ಅಮೋದಿನಿ ಮಹಾಲೆ ಹಾಗೂ ವಾಸುದೇವ ಮಹಾಲೆ ಇದ್ದರು.