ಬ್ಯಾಂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಕಾಶೀನಾಥ ಸಜ್ಜನ ಭರವಸೆ

Sincere effort for the development of the bank: Kashinath Sajjan's promise

ಬ್ಯಾಂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಕಾಶೀನಾಥ ಸಜ್ಜನ ಭರವಸೆ   

ತಾಳಿಕೋಟಿ 08: ಹಿರಿಯರು ಹಾಕಿಕೊಟ್ಟು ಹೋದ ಮಾರ್ಗದಲ್ಲಿ ನಡೆದು ಎಲ್ಲ ನಿರ್ದೇಶಕರ ಸಹಕಾರದಿಂದ ಬ್ಯಾಂಕಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ನೂತನ ಅಧ್ಯಕ್ಷ ಕಾಶಿನಾಥ ಸಜ್ಜನ ಹೇಳಿದರು.  

ಶುಕ್ರವಾರ ಪಟ್ಟಣದ ವಿಠಲ ಮಂದಿರದಲ್ಲಿ ರಜಪೂತ ಸಮಾಜದ ವತಿಯಿಂದ ಸಹಕಾರಿ ಬ್ಯಾಂಕಿನ ನೂತನ ನಿರ್ದೇಶಕರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.ರಜಪೂತ ಸಮಾಜ ಸಣ್ಣದಾಗಿದ್ದರೂ ಅವರ ಹೃದಯ ವಿಶಾಲವಾಗಿದೆ. ಅವರದ್ದೇ ಸಮಾಜದ ಇಬ್ಬರು ಈ ಬಾರಿ ಬ್ಯಾಂಕಿಗೆ ಆಯ್ಕೆಯಾಗಿದ್ದು ನಮಗೆ ಕೆಲಸ ಮಾಡಲು ಇನ್ನಷ್ಟು ಶಕ್ತಿ ಬಂದಿದೆ ಎಂದರು.  

ರಜಪೂತ ಸಮಾಜದ ವತಿಯಿಂದ ಮಾತನಾಡಿದ ಶಿಕ್ಷಕ ರಾಜು ವಿಜಾಪುರ ಅವರು ಎಲ್ಲ ಸಮಾಜದವರ ಆಶೀರ್ವಾದದಿಂದ ನಮ್ಮ ಸಮಾಜದ ಇಬ್ಬರು ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು.  

ಸಾನಿಧ್ಯ ವಹಿಸಿದ  ಮುರಗೇಶ ವಿರಕ್ತಮಠ ಮಾತನಾಡಿ ಎಲ್ಲ ಶೇರುದಾರರು ನಿಮ್ಮ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿ ಕಳಿಸಿದ್ದಾರೆ ಅವರ ವಿಶ್ವಾಸವನ್ನು ಉಳಿಸುವ ಕಾರ್ಯ ಮಾಡಿ ಖಾಸ್ಟತೇಶರ ಆಶೀರ್ವಾದ ನಿಮ್ಮೆಲ್ಲರ ಮೇಲೆ ಇರಲಿದೆ ಎಂದರು. 

ಸಮಾಜದ ವತಿಯಿಂದ ಎಲ್ಲಾ 13 ಜನ ನಿರ್ದೇಶಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ, ಉಪಾಧ್ಯಕ್ಷ ರತನ ಸಿಂಗ್ ಕೊಕಟನೂರ, ಗೋಪಾಲಸಿಂಗ್ ರಜಪೂತ, ಗಣ್ಯರಾದ ವಿ.ಸಿ. ಹಿರೇಮಠ, ಕಾಶಿನಾಥ ಮುರಾಳ, ಮಹಿಬೂಬ ಕೆಂಭಾವಿ, ಅಶೋಕ್ ಚಿನಗುಡಿ ಜಗದೀಶ್ ಬಿಳೆಭಾವಿ, ಮುತ್ತು ಕಶಟ್ಟಿ, ಎನ್‌.ಎಸ್‌. ಧಾಯಪುಲೆ, ರವಿ ಚಂದುಕರ್, ಮುತ್ತುಗೌಡ ಪಾಟೀಲ, ಶಂಕರ ಹಿರೇಮಠ, ದತ್ತು ಉಬಾಳೆ, ವಜ್ರು ಪ್ರಥಮಶೆಟ್ಟಿ, ಹಣಮಂತ ಈಳಗೇರ ಬ್ಯಾಂಕಿನ ನೂತನ ನಿರ್ದೇಶಕರಾದ ಮುರಿಗೆಪ್ಪ ಸರಶೆಟ್ಟಿ, ದತ್ತಾತ್ರೇಯ ಹೆಬಸೂರ, ಈಶ್ವರ​‍್ಪ ಬಿಳೇಭಾವಿ, ಚಿಂತಪ್ಪಗೌಡ ಯಾಳಗಿ, ಡಿ.ಕೆ. ಪಾಟೀಲ, ಬಾಬು ಹಜೇರಿ, ಪ್ರಹ್ಲಾದಸಿಂಗ್ ಹಜೇರಿ, ಸುರೇಶ ಪಾಟೀಲ, ಗಿರಿಜಾಬಾಯಿ ಕೊಡಗನೂರ, ಶೈಲಾ ವಿಶ್ವನಾಥ ಬಡದಾಳಿ, ಸಂಜೀವಪ್ಪ ಬರದೇನಾಳ, ರಾಮಣ್ಣ ಕಟ್ಟಿಮನಿ ಇದ್ದರು.