ಲೋಕದರ್ಶನ ವರದಿ
ಬೆಳಗಾವಿ 28: ಆರೋಗ್ಯದ ಅರಿವು, ಸ್ವಚ್ಛತೆ ಹಾಗೂ ಸರಳ ಜೀವನಪದ್ಧತಿಯಿಂದ ನಿರೋಗಿಯಾಗಿ ಜೀವನ ನಡೆಸಬಹುದಾಗಿದೆ. ಆದ್ದರಿಂದ ನಗರ ಗ್ರಾಮಗಳೆನ್ನದೇ ಎಲ್ಲರೂ ಇದರ ಅರಿವನ್ನು ಹೊಂದುವದು ಅತ್ಯವಶ್ಯಕವಾಗಿ ಎಂದು ಬೆಳಗಾವಿ ಪ್ರೊಪೆಶನಲ್ ಫೋರಂನ ಅಧ್ಯಕ್ಷ ಬಿ ಎಸ್ ಪಾಟೀಲ ಮಾತನಾಡಿದರು. ಅವರು ಇಂದು ನಗರದ ಮೂರು ಅತೀ ಮುಖ್ಯ ಕೊಳಗೇರಿಗಳಾದ ಅನಗೋಳನ ನ ಕುರುಬರಗಲ್ಲಿ, ವಂಟಮುರಿ ಕಾಲೊನಿ ಹಾಗೂ ಗಾಂದಿ ನಗರದ ಬಂಟರ ಭವನದಲ್ಲಿ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತಯ ಕುಟುಂಬ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಕನರ್ಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ, ಲೇಕವಿವ ಆಸ್ಪತ್ರೆ, ವಿಜಯ ಆಸ್ಪತ್ರೆ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ಭಾರತೀಯ ವೈದ್ಯರ ಸಂಘ ಬೆಳಗಾವಿ ಶಾಖೆ ಮತ್ತು ಭಾರತೀಯ ದಂತ ವೈದ್ಯರ ಸಂಘ ಬೆಳಗಾವಿ ಶಾಖೆ ಇವರ ಸಹಯೋಗದಲ್ಲಿ ಬೆಳಗಾವಿ ಕೊಳಗೇರಿಗಳಲ್ಲಿ ಆಯೋಜಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಂಗವಾಗಿ ಮಾತನಾಡುತ್ತಿದ್ದರು. ಮಲೀನತೆಯಿಂದ ಕೂಡಿದ ಪರಿಸರವೂ ಎಲ್ಲ ರೋಗಗಳ ಮೂಲವಾಗಿದೆ ಆದ್ದರಿಂದ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿರಿ ಎಂದು ಕರೆ ನೀಡಿದರು.
ಕಾರ್ಯಕ್ರಮದ ಮುಖ್ಯ ಸಂಘಟಕರಲ್ಲಿ ಒಬ್ಬರಾದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿದರ್ೇಶಕ ಡಾ. ಎಸ್ ಸಿ ಧಾರವಾಡ ಮಾತನಾಡುತ್ತ ದೇಶದಲ್ಲಿ ಅಭಿವೃದ್ದಿ ಹೊಂದುತ್ತಿರುವ ನಗರಗಳಲ್ಲಿ ನಮ್ಮ ಬೆಳಗಾವಿಯು ಒಂದಾಗಿದ್ದು ಜನರ ಆರೋಗ್ಯ ಕಾಪಾಡುವಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳೆಲ್ಲ ಒಟ್ಟಾಗಿ ಸೇವೆಸಲ್ಲಿಸುತ್ತಿರುವದು ನಿಜಕ್ಕೂ ಹೆಮ್ಮೆಎನ್ನಿಸುತ್ತದೆ. ಅದರಲ್ಲೂ ಸ್ಮಾರ್ಟಸಿಟಿ ಕಾರ್ಯಕ್ರಮದಲ್ಲಿ ಅಗ್ರಪಟ್ಟಿಯಲ್ಲಿರುವ ನಮ್ಮ ಬೆಳಗಾವಿಯ ನಾಗರಿಕರು ಆರೋಗ್ಯದ ಅರಿವನ್ನು ಹೊಂದಬೇಕು ಇದರಿಂದ ನಮ್ಮ ನಗರವು ಅಭಿವೃದ್ಧಿ ಹೊಂದುವದರಲ್ಲಿ ಎರಡು ಮಾತಿಲ್ಲ ಎಂದು ಅಭಿಮತ ವ್ಯಕ್ತಪಡಿಸಿದರು.
ಇನ್ನೊಬ್ಬ ಮುಖ್ಯ ಸಂಘಟಕ ಡಾ ಹೆಚ್ ಬಿ ರಾಜಶೇಖರ ಮಾತನಾಡಿ ಕೊಳಗೇರಿಗಳು ಎಲ್ಲ ನಗರಗಳಲ್ಲಿ ಸವರ್ೇಸಾಮನ್ಯವಾಗಿ ಕಾಣಬಹುದಾಗಿದೆ. ಆದರೆ ಸರಿಯಾದ ನಿರ್ವಹಣೆಯ ಕೊರೆತೆಯಿಂದಾಗಿ ರೋಗಗಳ ಮೂಲಸ್ಥಾನಗಳಾಗಿವೆ. ಆದ್ದರಿಂದ ವೈದ್ಯಕೀಯ ಪರಿಣಿತಿ ಹೊಂದಿದ ನಾವೆಲ್ಲರೂ ಅವರಿಗೆ ಆರೋಗ್ಯದ ಅರಿವು ನೀಡಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ಪ್ರೊಪೆಶನಲ್ ಫೋರಂನ ಅಧ್ಯಕ್ಷ ಬಿ ಎಸ್ ಪಾಟೀಲ, ಖಜಾಂಚಿ ಆನಂದ ಹಾವನ್ನವರ, ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ ಬಿ ಎಸ್ ಮಾಹಾಂತಶೆಟ್ಟಿ, ಜಿಲ್ಲಾ ಆರೋಗ್ಯ ಕುತುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ, ಮಹಾನಗರ ಪಾಲಿಕೆಯ ಸಿಬ್ಬಂದಿ, ಕನರ್ಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಸಿಬ್ಬಂದಿ, ಲೇಕವಿವ ಆಸ್ಪತ್ರೆಯ ಸಿಬ್ಬಂದಿ, ವಿಜಯ ಆಸ್ಪತ್ರೆಯ ಸಿಬ್ಬಂದಿ, ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಿಬ್ಬಂದಿ, ಭಾರತೀಯ ವೈದ್ಯರ ಸಂಘ ಬೆಳಗಾವಿ ಶಾಖೆಯ ಪದಾಧಿಕಾರಿಗಳು ೆ ಮತ್ತು ಭಾರತೀಯ ದಂತ ವೈದ್ಯರ ಸಂಘ ಬೆಳಗಾವಿಯ ಶಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಈ ಶಿಬಿರದಲ್ಲಿ ಸುಮಾರು 1300 ಕ್ಕೂ ಅಧಿಕ ಕೊಳಗೇರಿ ನಿವಾಸಿಗಳನ್ನು ಉಚಿತವಾಗಿ ತಪಾಶಿಸಿ ಔಷಧಿಗಳನ್ನು ವಿತರಿಸಲಾಯಿತು. ಅನಗೋಳದ ಕುರುಬರಗಲ್ಲಿಯ ಕೇಂದ್ರದಲ್ಲಿ 400 ಕ್ಕೂ ಅಧಿಕ ರೋಗಿಗಳನ್ನು ತಪಾಶಿಸಲಾಯಿತು. ಗಾಂಧೀನಗರದ ಬಂಟರ ಭವನದಲ್ಲಿ 575 ಕ್ಕೂ ಅಧೀಕ ಕೊಳಗೇರಿನಿವಾಸಿಗಳನ್ನು ತಪಾಶಿಸಲಾಯಿತು. ಅದೇರೀತಿ ವಂಟಮುರಿ ಕಾಲೋನಿಯ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿ 350 ಕ್ಕೂ ಅಧಿಕ ಕೊಳಗೇರಿನಿವಾಸಿಗಳನ್ನು ತಪಾಶಿಸಲಾಯಿತು. ಈ ಕೇಂದ್ರಗಳಿಗೆ ಸಂಘಟಕವೃಂದವು ಭೇಟಿನೀಡಿ ಪರಿಶಿಲಿಸಿ ಅವರಿಗೆ ತಮ್ಮ ಹತ್ತಿರದ ಆಸ್ಪತ್ರೆಗಳಾದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿನ ಅತ್ಯಲ್ಪ ದರದ ಚಿಕಿತ್ಸೆಯನ್ನು ಹೊಂದಲು ಸೂಚಿಸಿದ್ದಾರೆ.