ಪ್ಲೋರ್ ಬಾಲ್ ಹಾಕಿಯಲ್ಲಿ ಬೆಳ್ಳಿ ಪದಕದ ಸಾಧನೆ

ಲೋಕದರ್ಶನ ವರದಿ

ರಾಮದುರ್ಗ 01: ತಾಲೂಕಿನ ಚಂದರಗಿಯ ಕ್ರೀಡಾ ವಸತಿ ಶಾಲೆಯ ಪ್ಲೋರ್ ಬಾಲ್ ಹಾಕಿ ಕ್ರೀಡಾಪಟುಗಳು ಇತ್ತೀಚೆಗೆ ಹರಿಯಾನ ರಾಜ್ಯದ ರೋತಕ್ನಲ್ಲಿ ನಡೆದ 13ನೇ ರಾಷ್ಟ್ರ ಮಟ್ಟದ ಪ್ಲೋರ್ ಬಾಲ್ ಹಾಕಿಯಲ್ಲಿ ಕನರ್ಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿ ಬೆಳ್ಳಿ ಪದಕ ಜಯಿಸಿದ್ದಾರೆ. ರಾಷ್ಟ್ರೀಯ ಪ್ಲೋರ್ ಬಾಲ್ ಹಾಕಿ ಅಶೋಸಿಯೇಶನ್ ಆಯೋಜಿಸಿದ್ದ ಈ ಕ್ರೀಡಾಕೂಟದ ಸೆಮಿಫೈನಲ್ನಲ್ಲಿ ಛತ್ತೀಸಗಡ ತಂಡದ ವಿರುದ್ದ ಜಯಿಸಿ, ಫೈನಲ್ ಪಂದ್ಯದಲ್ಲಿ ಉತ್ತರಾಖಂಡದ ವಿರುದ್ದ ಪರಾಜಯ ಹೊಂದಿ ಬೆಳ್ಳಿ ಪದಕ ಗೆದ್ದುಕೊಂಡಿದೆ.

ಸಾಧನೆಗೈದ ವಿದ್ಯಾಥರ್ಿಗಳಾದ ಪ್ರಜ್ವಲ್ ಮೇತ್ರಿ, ಗಣೇಶ ಬೀರಗೊಂಡ, ಶಿವಪ್ರಕಾಶ ಮಠ, ಸಂತೋಷ ಮೇಟಿ, ಸುದೀಪ ಚಿಕ್ಕಣ್ಣವರ ಹಾಗೂ ತರಬೇತಿ ನೀಡಿದ ಎಚ್. ಹಾಲೇಶ ಅವರನ್ನು  ಸಂಸ್ಥೆಯ ಸಂಸ್ಥಾಪಕರು, ಅಧ್ಯಕ್ಷರು, ಉಪಾಧ್ಯಕ್ಷರು, ನಿದರ್ೇಶಕರು, ಪ್ರಾಚಾರ್ಯರು, ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.