ದಿ,15 ರಂದು ಮಿಲ್ಲತ್ ಶಾಲೆಯಲ್ಲಿ ರಜತಮಹೋತ್ಸವ ಹಾಗೂ ವಾರ್ಷಿಕೋತ್ಸವ
ಕೊಪ್ಪಳ 12: ಮಿಲ್ಲತ್ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ವತಿಯಿಂದ ನಗರದ ನಿರ್ಮಿತಿ ಕೇಂದ್ರ ಬಡಾವಣೆಯಲ್ಲಿ ನಡೆಯುತ್ತಿರುವ ಮಿಲ್ಲತ್ ಪಬ್ಲಿಕ್ ಶಾಲೆಯಲ್ಲಿ ದಿ, 15 ರ ಶನಿವಾರ ಸಂಜೆ 5:00 ಗಂಟೆಗೆ 25ನೇ ವರ್ಷದ ಬೆಳ್ಳಿ ಹಬ್ಬ ರಜತ ಮಹೋತ್ಸವ ಹಾಗೂ ವಾರ್ಷಿಕೋತ್ಸವ ಸಮಾರಂಭ ಜರುಗಲಿದೆ, ಸಮಾರಂಭದ ಉದ್ಘಾಟನೆಯನ್ನು ಶಾಸಕ ಕೆ ರಾಘವೇಂದ್ರ ಹಿಟ್ನಾಳ ನೆರವೇರಿಸಲಿದ್ದು ಸಂಸದ ಕೆ ,ರಾಜ ಶೇಖರ ಹಿಟ್ನಾಳ ರವರು ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ,ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾಗಿರುವ ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರಾದ ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷಾ ಕಾಟನ್ ಮತ್ತು ಅಂಜುಮನ್ ಕಮಿಟಿ ಅಧ್ಯಕ್ಷರಾದ ಎಂಡಿ ಆಸಿಫ್ ಕರ್ಕಿಹಳ್ಳಿ ಒಳಗೊಂಡಂತೆ ವಿಶೇಷ ಸನ್ಮಾನಿತರಾಗಿ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಕ್ಬರ್ ಪಾಷಾ ಪಲ್ಟನ್ ಸಮಾಜದ ಮುಖಂಡರು ಹಾಗೂ ಉದ್ಯಮಿ ಗಳಾದ ಸೈಯದ್ ನಾಸಿರ್ ಹುಸೇನ್, ಸಾಧಿಕ್ ಮೋಸಿನ್ ಅತ್ತಾರ್, ಕರೀಂ ಪಾಷಾ ಗಚ್ಚಿನಮನಿ, ಫಕ್ರುದ್ದೀನ್ ಚುಕುನಕಲ್, ಇಮತಿಯಾಜ್, ಎಂಡಿ ಇಬ್ರಾಹಿಂ ಪಟೇಲ್ ಹಾಗೂ ಮೈಸೂರಿನ ಎಂ ತಾಹಿರ್ ಅಲಿ ಮತ್ತು ಉರ್ದು ಸಾಹಿತಿ ಹಾಗೂ ವಾಗ್ಮಿ ಎಂ ಬದಿಯುದ್ದೀನ್ ಅಹಮದ್ ನವೀದ ಸೇರಿದಂತೆ ಸಂಸ್ಥೆಯ ಮುಖ್ಯ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ಎಂ ಸಾಧಿಕ್ ಅಲಿ ,ಸಂಸ್ಥಾಪಕ ಸೈಯದ್ ಗೌಸ್ ಪಾಷಾ ಖಾಜಿ, ಮುಖ್ಯ ಶಿಕ್ಷಣ ಸಲಹೆಗಾರ ಸೈಯದ್ ನಜೀರ್ ಅಹ್ಮದ್ ಅತ್ತಾರ್, ಆಡಳಿತ ಮಂಡಳಿ ಸದಸ್ಯರಾದ ಎಂಡಿ ಜಹೀರ್ ಅಲಿ, ದಾವುದ್ ಹುನಗುಂದ್ ಮತ್ತು ರೇಷ್ಮಾ ಅಲ್ಲಾಭಕ್ಷ್ ಇಳಿಯಾಳ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಕಾರ್ಯನಿರ್ವಾಹಕ ಸಂಚಾಲಕರಾದ ಅಬ್ದುಲ್ ಅಜೀಜ್ ಮಾನ್ವಿ ಕರ್ ಮತ್ತು ಸೈಯದ್ ಇಮಾಮ್ ಹುಸೇನ್ ಸಿಂದೋಗಿ ಹಾಗೂ ಮುಖ್ಯ ಶಿಕ್ಷಕ ಮೊಹಮ್ಮದ್ ಅಜೀಜ್ ರೆವಡಿ ರವರು ತಿಳಿಸಿದ್ದಾರೆ.