ಜೆಟ್ ಏರ್ವೇಸ್ ನೌಕರರಿಂದ ಬೆಂಗಳೂರಿನಲ್ಲಿ ಮೌನ ಪ್ರತಿಭಟನೆ


ಬೆಂಗಳೂರು ಏ 22 - ತೀವ್ರ ಆರ್ಥಿಕ  ಸಂಕಷ್ಟದಲ್ಲಿರುವ ಜೆಟ್ ಏರ್ವೇಸ್ನ ಪೈಲಟ್ಗಳು ಹಾಗೂ ಆಡಳಿತ ಸಿಬ್ಬಂದಿ ಸೋಮವಾರ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು.  ಟೌನ್ಹಾಲ್ ಬಳಿ ಬೆಳಿಗ್ಗೆ ಸಮವಸ್ತ್ರದೊಂದಿಗೆ ಜಮಾಯಿಸಿದ ಉದ್ಯೋಗಿಗಳು ತಮ್ಮ ಬೇಡಿಕೆಗಳನ್ನು ಹೊತ್ತ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.  ಇತ್ತೀಚಿನ ದಿನಗಳಲ್ಲಿ ತೀವ್ರ ಹಣಕಾಸು ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಒಡೆತನದ ವಿಮಾನಯಾನ ಸಂಸ್ಥೆಗೆ ಉಳಿವಿಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರದ  ಗಮನ ಸೆಳೆಯಲು ಉದ್ಯೋಗಿಗಳು ಧರಣಿ ನಡೆಸಿದರು.   ಇದಕ್ಕೂ ಮುನ್ನ, ಫ್ರೀಡಂ ಪಾರ್ಕನಿಂದ  ಟೌನ್ಹಾಲ್ ವರೆಗೆ ಜೆಟ್ ಉದ್ಯೋಗಿಗಳು ಪ್ರತಿಭಟನಾ ಮೆರವಣಿಗೆ ನಡೆಸಲು ಉದ್ದೇಶಿಸಿದ್ದರು. ಆದರೆ, ಪೊಲೀಸರು ಮೆರವಣಿಗೆಗೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಟೌನ್ಹಾಲ್ ಬಳಿ ಸೇರಿ ಮೌನ ಧರಣಿ ನಡೆಸಲು ತೀರ್ಮಾನಿಸಿದರು .