ಜಂಬಲ್ಸ್ ಡಬಲ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಸಿದ್ದು ಕೊಣ್ಣೂರ ಚಾಲನೆ
Siddukonnur gears up for Jumbles Doubles Badminton Tournament
ಮಹಾಲಿಂಗಪುರ 31: ಕೆಎಲ್‌ಇ ಸೊಸೈಟಿಯ ಎಸ್‌ಸಿಪಿ ಕಲಾ ವಿಜ್ಞಾನ ಹಾಗೂ ಡಿಡಿಎಸ್ ವಾಣಿಜ್ಯ ಮಹಾ ವಿದ್ಯಾಲಯ ಇವರ ಸಹಯೋಗದಲ್ಲಿ ಸ್ಥಳೀಯ ಕ್ರೀಡಾ ಕ್ಲಬ್ ವತಿಯಿಂದ ರಾಜ್ಯಮಟ್ಟದ ಮುಕ್ತ 75+ ಜಂಬಲ್ಸ್ ಡಬಲ್ಸ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ತೇರದಾಳ ಮತ ಕ್ಷೇತ್ರದ ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಶನಿವಾರ ಚಾಲನೆ ನೀಡಿದರು. ಪಂದ್ಯಾವಳಿ ನಡೆಯುವ ಕೆಎಲ್‌ಇ ಸಂಸ್ಥೆಯ ಒಳಾಂಗಣ ಕ್ರೀಡಾಂಗಣದ ಟೆನಿಸ್ ಕೋರ್ಟ್ ನಲ್ಲಿ ರಿಬ್ಬನ್ ಕಟ್ ಮಾಡುವ ಮೂಲಕ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮೃದ್ಧ ಆರೋಗ್ಯದೊಂದಿಗೆ ಜೀವನ ಸಾಗಿಸಬೇಕಾದರೆ ಕ್ರೀಡೆ ಅವಶ್ಯಕವಾಗಿದ್ದು, ಯುವಕರು ಸೇರಿದಂತೆ ನಾವೆಲ್ಲರೂ ಯಾವುದಾದರೂ ಒಂದು ಕ್ರೀಡೆಯಲ್ಲಿ ಭಾಗವಹಿಸಲೆ ಬೇಕು. ಇದನ್ನು ನಾವು ನಮ್ಮ ಜೀವನದ ಅವಿಭಾಜ್ಯ ಅಂಗವೆಂದು ತಿಳಿಯಬೇಕು. ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ಪ್ರತಿ ಆಟಗಾರನಿಗೆ ಶುಭವನ್ನು ಕೋರಿ ಪಂದ್ಯಾವಳಿ ಯಶಸ್ವಿಯಾಗಲಿ ಎಂದರು.
ಕಾರ್ಯಕ್ರಮದ ಮತ್ತೋರ್ವ ಅತಿಥಿ ಡಾ.ಅಜೀತ ಕನಕರೆಡ್ಡಿ ಅವರು ಮಾತನಾಡಿ, ನಮ್ಮ ದೇಶದ ಸಂಪತ್ತು ಯುವಕರು, ಈ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ದುಶ್ಚಟಗಳಿಗೆ ಬಲಿಯಾಗಿ, ಹೃದ್ರೋಗವೋ ಅಥವಾ ಇನ್ನಿತರ ಖಾಯಿಲೆಗಳಿಗೆ ಬಲಿಯಾಗುತ್ತಿದ್ದು,ದೇಶಕ್ಕೆ ಮತ್ತು ತಮ್ಮ ಪರಿವಾರಕ್ಕೂ ತುಂಬಲಾರದ ನಷ್ಟ.ಇನ್ನೂ ಕಾಲ ಮಿಂಚಿಲ್ಲ ಯುವಕರು ಎಚ್ಚೆತು ತಮ್ಮ ಮಾನಸಿಕ ಸಮತೋಲನ ಕಾಪಾಡಿಕ್ಕೊಳ್ಳುವತ್ತ ಕ್ರೀಡೆ ಕಡೆಗೆ ಗಮನ ಹರಿಸಿ ಎಂದು ಯುವ ಮಿತ್ರರಿಗೆ ಕರೆ ನೀಡಿ,ಪಂದ್ಯಾವಳಿಗಳ ಉದ್ದೇಶ ನಮ್ಮ ಬದುಕಿನಲ್ಲಿ ಉತ್ತಮ ಹವ್ಯಾಸಗಳು ಮೈಗೂಡಲಿ ಎನ್ನುವುದಾಗಿದೆ ಎಂದರು.
ಪಂದ್ಯಾವಳಿಯಲ್ಲಿ ಮುಕ್ತ (ಪುರುಷರ) ಟೆನಿಸ್ ಆಟಗಾರರ ಜೋಡಿ ಪ್ರಥಮ 25 ಸಾವಿರ, ದ್ವಿತೀಯ 15 ಸಾವಿರ ಮತ್ತು ತೃತೀಯ 10 ಸಾವಿರ ಮತ್ತು 75+ ಜಂಬಲ್ಸ್ ಡಬಲ್ಸ್ ವಿಭಾಗದಲ್ಲಿ ಜೋಡಿ ಪ್ರಥಮ 15 ಸಾವಿರ, ದ್ವಿತೀಯ 10 ಸಾವಿರ ಮತ್ತು ತೃತೀಯ 7 ಸಾವಿರ ರೂಗಳು ಹಾಗೂ ಚಾಂಪಿಯನ್ ಟ್ರೋಫಿಗಳನ್ನು ಪಡೆಯಲಿದ್ದಾರೆ.ಅಷ್ಟೇ ಅಲ್ಲದೆ ಪಂದ್ಯಾವಳಿಯ ಉದ್ದಕ್ಕೂ ವೈಯಕ್ತಿಕವಾಗಿ ತಮ್ಮ ಉತ್ತಮ ಆಟವನ್ನು ಪ್ರದರ್ಶನ ಮಾಡುವವರಿಗೂ ಸಹ ವೈಯಕ್ತಿಕ ಬಹುಮಾನಗಳನ್ನು ನೀಡಿ ಆಟಗಾರರನ್ನು ಉತ್ತೇಜಿಸಲಾಗುತ್ತದೆ.
ಪಂದ್ಯಾವಳಿಯ ಉದ್ಘಾಟನೆಯಲ್ಲಿ ಪಾಲ್ಗೊಂಡ ಗಣ್ಯಮಾನ್ಯರನ್ನು ಟೆನಿಸ್ ಕ್ಲಬ್ ಸದಸ್ಯರು ಸನ್ಮಾನಿಸಿ ಗೌರವಿಸಿದರು.ವೇದಿಕೆ ಮೇಲೆ ಇನ್ನೂಳಿದಂತೆ ಕೆಎಲ್‌ಇ ಸಂಸ್ಥೆಯ ಸ್ಥಾನಿಕ ಮಂಡಳಿ ಸದಸ್ಯರಾದ ಅಶೋಕ ಅಂಗಡಿ, ಸಂತೋಷ ಹುದ್ದಾರ ಮತ್ತು ಹೆಸ್ಕಾಂ ಅಧಿಕಾರಿ ರಾಜೇಶ್ ಬಾಗೋಜಿ, ಹಿರಿಯ ಪತ್ರಕರ್ತರಾದ ಜಯರಾಂ ಶೆಟ್ಟಿ, ಮುಖಂಡರಾದ ಬಸವರಾಜ ರಾಯರ, ಸಯ್ಯದ್ ಖಾಜಿ,ಮೋನೇಶ ಬಟ್ಟಲ್, ಸುರೇಶಗೌಡ ಪಾಟೀಲ್, ಹುಚ್ಚೇಶ ವಡ್ಡರ, ಪ್ರಾಚಾರ್ಯರಾದ ಎಲ್.ಬಿ. ತುಪ್ಪದ, ಎನ್.ಬಿ.ಪಾಟೀಲ್, ಅಶೋಕ ಜಗದೀಶ. ಅಂಗಡಿ ಹಾಗೂ ಆಯೋಜಕರಾದ ಬಸವರಾಜ ಕರೆಹೊನ, ಸುನೀಲ್ ಯಂಕಂಚಿ, ಉಮಾರ ಮುಳುಗುಂದ, ಗಣೇಶ್ ಶೇಟ್, ಪ್ರವೀಣ ಗಣಾಚಾರಿ, ದೀಪಕ್ ಪೋತದಾರ್, ರಮೇಶ ಬಡಿಗೇರ, ಮೋಹನ್ ಬಡಿಗೇರ, ಸುರೇಶ ಆಸಂಗಿ, ವಿಶಾಲ ಶೀಲವಂತ, ಹರೀಶ ರಾಹುಲ್, ರಾಜು ಕಟಗಿ, ರಾಕೇಶ ಹುದ್ದಾರ್, ಮಲ್ಲು ಕೊಣ್ಣೂರ್ ಮತ್ತು ಸಂತೋಷ ಇನ್ನೂ ಮುಂತಾದವರಿದ್ದರು. ದೈಹಿಕ ಶಿಕ್ಷಕರಾದ ಪರ್ಮಾನಂದ ಹಿಪ್ಪರಗಿ ಸ್ವಾಗತಿಸಿ, ಉಪನ್ಯಾಸ ಟಿ.ಡಿ.ಡಂಗಿ ನಿರೂಪಿಸಿ, ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 