'ಶಾಸಕರಿಗಾಗಿ 235.95 ಕೋಟಿ ವ್ಯಯಸಿದ ಸಿದ್ದು ಸರಕಾರ'


ಬೆಳಗಾವಿ 07: ಈ ಹಿಂದೆ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ ಸರಕಾರದ 5 ವರ್ಷದ ಆಡಳಿತ ಅವಧಿಯಲ್ಲಿ ಶಾಸಕರು ಹಾಗೂ ಪರಿಷತ್ ಸದಸ್ಯರಿಗೆ ವೇತನ ಹಾಗೂ ಭತ್ಯೆ ಹೆಸರಲ್ಲಿ 235.95 ಕೋಟಿ ರೂ. ದುಂದುವೆಚ್ಚ ಮಾಡಲಾಗಿದೆ. ಇದರಿಂದ ತೆರಿಗೆ ರೂಪದಲ್ಲಿ ಸಾರ್ವಜನಿಕರಿಂದ ಸಂಗ್ರಹವಾಗಿದ್ದ ಹಣ ಪೋಲ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಇಂದಿಲ್ಲಿ ಆರೋಪಿಸಿದರು. 

ಮಂಗಳವಾರ ದಿನದಂದು ನಗರದಲ್ಲಿ ಮಾಧ್ಯಮದವರೊಂದಿಗೆ ಈ ವಿಷಯ ತಿಳಿಸಿದ ಅವರು, 5 ವರ್ಷದ ಅವಧಿಯಲ್ಲಿ ಶಾಸಕರ ವೇತನ, ಪ್ರಯಾಣ ಭತ್ಯೆ, ವಿದೇಶಿ ಪ್ರವಾಸ, ವೈದ್ಯಕೀಯ ವೆಚ್ಚ ಹಾಗೂ ರೈಲ್ವೆ ಪ್ರಯಾಣಕ್ಕೆ 203.17 ಕೋಟಿ ಹಾಗೂ ಪರಿಷತ್ ಸದಸ್ಯರಿಗೆ 32.78 ಕೋಟಿ ರೂ. ವೆಚ್ಚ ಮಾಡಿರುವ ಮಾಹಿತಿಯು ಮಾಹಿತಿ ಹಕ್ಕಿನಿಂದ ತಮಗೆ ದೊರೆತಿದೆ ಎಂದು ನುಡಿದರು.

ಹದಿನಾಲ್ಕನೇ ವಿಧಾನ ಸಭೆಯ ಅವಧಿ ಮುಗಿಯುವವರೆಗೆ ಶಾಸಕರ ಭತ್ಯೆ ನೆಪದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಶಾಸಕರ ಭತ್ಯೆಗಾಗಿ ಅಗತ್ಯಕ್ಕಿಂತ ಹೆಚ್ಚು ಹಣ ವೆಚ್ಚ ಮಾಡಿ ಸಾರ್ವಜನಿಕರಿಗೆ ತೆರಿಗೆ ಹಣವನ್ನು ಪೋಲು ಮಾಡಿದೆ ಎಂದು ಗಡಾದ ಆರೋಪಿಸಿದರು.

ಸಚಿವಾಲಯ ಅಧಿಕಾರಿಗಳು ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ಐದು ವರ್ಷದ ಅವಧಿಯಲ್ಲಿ ಶಾಸಕರ ವೇತನ, ಇತರ ಭತ್ಯೆಗೆ 90.24 ಕೋಟಿ, ವಸತಿಗೆ 63.68 ಲಕ್ಷ, ವಿದೇಶ ಪ್ರವಾಸ, ರೈಲ್ವೆ, ಅಧಿವೇಶನ ಭತ್ಯೆಗೆ 106.43 ಕೋಟಿ, ವೈದ್ಯಕೀಯ ವೆಚ್ಚಕ್ಕೆ 5.86 ಕೋಟಿ ವೆಚ್ಚ ಮಾಡಲಾಗಿದೆ. ವಿಧಾನ ಪರಿಷತ್ ಸದಸ್ಯರ ವೇತನ, ದೂರವಾಣಿ, ಕ್ಷೇತ್ರ ಮತ್ತು ಅಂಚೆ ಭತ್ಯೆಗೆ 28.63 ಕೋಟಿ, ವೈದ್ಯಕೀಯಕ್ಕೆ 3.22 ಕೋಟಿ ರೂ. ವೆಚ್ಚ ಮಾಡಲಾಗಿದೆ.

ಶಾಸಕರ ಪ್ರತಿ ತಿಂಗಳ ವೆಚ್ಚ ಬರೋಬ್ಬರಿ 2 ಲಕ್ಷ ರೂ.! ವೇತನ, 25000, ದೂರವಾಣಿ, 20,000, ಕ್ಷೇತ್ರ ಭತ್ಯೆ- 40,000, ಅಂಚೆ ವೆಚ್ಚ, 5000, ಆಪ್ತ ಸಹಾಯಕರ ಕೊಠಡಿ ಸೇವಕರ ಭತ್ಯೆ, 10,000 ಸೇರಿ ಮಾಸಿಕ ಸಂಬಳ 1 ಲಕ್ಷ ರೂ. ದೊರೆಯುತ್ತದೆ. ಇನ್ನು ಪ್ರಯಾಣ ಭತ್ಯೆ- ಪ್ರತಿ ಕಿಮೀಗೆ 25 ರೂ, ರಾಜ್ಯ ಪ್ರವಾಸದ ದಿನಭತ್ಯೆ 2000 ರೂ, ಹೊರ ರಾಜ್ಯದ ಪ್ರವಾಸ 2500ರೂ, ಹೋಟೆಲ್ ವಾಸ್ತವ್ಯಕ್ಕೆ 5000 ಹಾಗೂ ಸ್ಥಳೀಯ ಸಾರಿಗೆಯಲ್ಲಿ ರಾಜ್ಯ ಪ್ರವಾಸಕ್ಕೆ 1500 ವೆಚ್ಚ ಮಾಡಲಾಗುತ್ತಿದೆ. ದೂರವಾಣಿ ಸೇವೆ ಇಂದು ಅಗ್ಗವಾಗಿದ್ದು, ಪ್ರತಿ ತಿಂಗಳಿಗೆ 20 ಸಾವಿರ ರೂ ಭತ್ಯೆ ನೀಡುವುದು ಸರಿಯಲ್ಲ. ತಿಂಗಳಿಗೆ 500 ರೂ ಕರೆನ್ಸಿ ಹಾಕಿದರೆ ಮೂರು ತಿಂಗಳು ಕರೆ ಅಂತರಜಾಲ ಸೇವೆ, ಇತರ ಸೇವೆ ಇರುವಾಗ ದೂರವಾಣಿಗಾಗಿ 20 ಸಾವಿರ ರೂ ನೀಡುವುದು ಸೂಕ್ತ ಅಲ್ಲ. ಇದಲ್ಲದೇ ಉಳಿದ ಭತ್ಯೆಗಳು ತೀರಾ ಹೆಚ್ಚಾಗಿವೆ ಎಂದು ಅವರು ಆರೋಪಿಸಿದರು.

ಶಾಸಕರಿಗೆ ಇಷ್ಟೆಲ್ಲ ಹಣ ಖಚರ್ು ಮಾಡಿದರೂ ಸದನಕ್ಕೆ ನಿಯಮಿತವಾಗಿ ಹಾಜರಾಗದೇ ಚಚರ್ೆಯಲ್ಲಿ ತೊಡಗದ ಶಾಸಕರಿಗೆ ಇಷ್ಟೆಲ್ಲ ಹೆಚ್ಚುವರಿ ಭತ್ಯೆಗಳನ್ನು ನೀಡುವುದು ಅಗತ್ಯ ಇತ್ತೆ ಎಂದು ಗಡಾದ ಪ್ರಶ್ನಿಸಿದ್ದಾರೆ. ಅಭಿವೃದ್ಧಿ ಚಚರ್ೆಗೆ ಬಾರದ ಶಾಸಕರಿಗೆ ಹೆಚ್ಚುವರಿ ಭತ್ಯೆ ಸಲ್ಲದು. ಶಾಸಕರಿಗೆ ಭತ್ಯೆ ನೀಡುವುದರಲ್ಲಿ ನಮ್ಮ ಅಭ್ಯಂತರವಿಲ್ಲ. ಆದರೆ ಅಗತ್ಯಕ್ಕೆ ತಕ್ಕಂತೆ ಹಣ ಖಚರ್ು ಮಾಡಿ ಜನರ ತೆರಿಗೆ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು. ಈ ಖಚರ್ು ವೆಚ್ಚಕ್ಕೆ ವಿಧಾನ ಸಭಾಧ್ಯಕ್ಷರು ಕಡಿವಾನ ಹಾಕದಿದ್ದರೆ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವದು ಎಂದು ಭಿಮಪ್ಪ ಗಡಾದ ಎಚ್ಚರಿಕೆ ನೀಡಿದ್ದಾರೆ