ಸಿದ್ಧೇಶ್ವರ ಶ್ರೀಗಳ ಬದುಕು ಇಡೀ ಮನುಕುಲಕ್ಕೆ ಮಾದರಿ: ಡಾ.ಪ್ರಭುಗೌಡ

Siddheshwar Sri's life is a model for all mankind: Dr.Prabhu Gowda

ಸಿದ್ಧೇಶ್ವರ ಶ್ರೀಗಳ ಬದುಕು ಇಡೀ ಮನುಕುಲಕ್ಕೆ ಮಾದರಿ: ಡಾ.ಪ್ರಭುಗೌಡ  

ತಾಳಿಕೋಟಿ 01: ಸಿದ್ದೇಶ್ವರ ಶ್ರೀಗಳು ಜಗತ್ತು ಕಂಡ ಶ್ರೇಷ್ಠ ಸಂತ,ಅತ್ಯಂತ ಸರಳ ಬದುಕನ್ನು ನಡೆಸುವ ಮೂಲಕ ಇಡೀ ಜಗತ್ತಿಗೆ ಸರಳತೆಯ ಪಾಠ ಮಾಡಿದ ಮಹಾತ್ಮರು,ಅವರ ಇಡೀ ಬದುಕು ವೈರಾಗ್ಯದಿಂದ ಕೂಡಿತ್ತು,ಅದು ಮನುಕುಲಕ್ಕೆ ಮಾದರಿಯಾಗಿದೆ,ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುವುದೇ ನಿಜವಾದ ಗುರು ನಮನವಾಗಿದೆ ಎಂದು ಸಮಾಜ ಸೇವಕ,ಖ್ಯಾತ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ( ಚಬನೂರ) ಹೇಳಿದರು.  

ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ ಎರಡನೇ ಪುಣ್ಯ ಸ್ವರಣೋತ್ಸವ ಅಂಗವಾಗಿ ಯೋಗೋತ್ಸವ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸಿದ್ದೇಶ್ವರ ಶ್ರೀಗಳು ನುಡಿದಂತೆ ನಡೆದು ತೋರಿಸಿದರು. ಅವರ ಬದುಕಿನ ಆದರ್ಶಗಳನ್ನು ಶೇ.5 ರಷ್ಟಾದರೂ ನಾವು ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮ ಬದುಕು ಸಮೃದ್ಧವಾಗಿ ಸಾರ್ಥಕವಾಗುತ್ತದೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಆರ್‌.ಎಸ್‌.ಪಾಟೀಲ(ಕೂಚಬಾಳ) ಮಾತನಾಡಿ ವಿಜಯಪುರ ಜಿಲ್ಲೆ ಅಧ್ಯಾತ್ಮಿಕ ಕೇಂದ್ರವಾಗಿದ್ದು ಸಂತ ಶರಣರ ಹಾಗೂ ದರ್ಶನಿಕರ ತವರೂರಾಗಿದೆ,ಬಸವಣ್ಣನಿಗೆ ಜನ್ಮ ನೀಡಿದ ಪುಣ್ಯ ಭೂಮಿ ಇದಾಗಿದೆ ಇಂತಹ ಪಾವನ ನೆಲದಲ್ಲಿ ಉಚ್ಚ ಸಿದ್ದೇಶ್ವರ ಶ್ರೀಗಳು ಜನ್ಮ ತಾಳಿದರು, ಜಗತ್ತಿಗೆ ಜ್ಞಾನವನ್ನು ಗುಣಪಡಿಸಿದರು, ಹೆಚ್ಚು ಹೇಳಲಿಲ್ಲ, ಹೇಗೆ ಬದುಕಬೇಕೆಂದು ತೋರಿಸಿಕೊಟ್ಟರು. 

ಅವರು ನಿಸರ್ಗ ಪ್ರಿಯರಾಗಿದ್ದರು,ಇವತ್ತು ನಮ್ಮ ಮನಸ್ಸು ಮತ್ತು ಪ್ರಕೃತಿ ಎರಡೂ ಮಲೀನವಾಗಿವೆ ಅವುಗಳ ಶುದ್ಧೀಕರಣ ಅಗತ್ಯವಾಗಿದೆ ಅದು ಇಂತಹ ಮಹಾತ್ಮರ ಆದರ್ಶಗಳನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ಸಾಧ್ಯವಿದೆ ಎಂದರು. ಕಾರ್ಯಕ್ರಮಕ್ಕೂ ಮುನ್ನ ಲಿಂಗೈಕ್ಯ ಸಿದ್ದೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಕೆಸರಟ್ಟಿಯ ಪರಮಪೂಜ್ಯ ಸೋಮಲಿಂಗ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. 

ಪುರಸಭೆ ಸದಸ್ಯರಾದ ವಾಸುದೇವ ಹೆಬಸೂರ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಅಣ್ಣಪ್ಪ ಜಗತಾಪ, ಮುದುಕಪ್ಪ ಬಡಿಗೇರ, ಗಣ್ಯರಾದ ಕಾಶಿನಾಥ ಮುರಾಳ, ಮುರಿಗೆಪ್ಪ ಸರಸಟ್ಟಿ, ಮಹಾದೇವಪ್ಪ ಕುಂಬಾರ, ಪ್ರಕಾಶ ಹಜೇರಿ, ಮಾನಸಿಂಗ್ ಕೊಕಟನೂರ,ಬಾಬು ಹಜೇರಿ, ಮಹಾಂತೇಶ ಮುರಾಳ,ಸುವರ್ಣಾ ಬಿರಾದಾರ,ಇಬ್ರಾಹಿಂ ಮನ್ಸೂರ,ಚಿಂತಪ್ಪ ಯಾಳಗಿ,ಪ್ರಕಾಶ ಕಶಟ್ಟಿ, ಜಗದೀಶ ಬಿಳೆಭಾವಿ, ಜಮ್ಮಲದಿನ್ನಿ ಸರ್,ದ್ಯಾಮನಗೌಡ ಪಾಟೀಲ, ಪ್ರಭು ಬಿಳೇಬಾವಿ ಮತ್ತಿತರರು ಇದ್ದರು. ಪ್ರಭು ಸಣ್ಣಕ್ಕಿ ಪ್ರಾರ್ಥಿಸಿದರು. ಎಂ.ಎಸ್‌.ಮುರಾಳ ನಿರೂಪಿಸಿ ವಂದಿಸಿದರು.