ಸಿದ್ದೇಶ್ವರ ಸ್ವಾಮಿಗಳ ಗುರುಸ್ಮರಣೆ ಕಾರ್ಯಕ್ರಮ

Siddeshwar Swami's Gurusmarane program

ಸಿದ್ದೇಶ್ವರ ಸ್ವಾಮಿಗಳ ಗುರುಸ್ಮರಣೆ ಕಾರ್ಯಕ್ರಮ  

ತಾಂಬಾ  07: ಹಿರೇಮಸಳಿ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗಳ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಅನ್ನದಾನಿಗಳಾದ ಕಾಶಿರಾಯ ಪಾಟೀಲ ಮತ್ತು ಧರೆಪ್ಪ ಕೀಲಾರಿ ಅವರಿಗೆ ಶ್ರೀಗಳ ಭಾವಚಿತ್ರ ನೀಡಿ ಗೌರವಿಸಲಾಯಿತ್ತು. 

ತಾಂಬಾ: ನಡೆದಾಡುವ ದೇವರಾದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅವರ ಮನಮುಟ್ಟಯವ ಪ್ರವಚನವೆ ನಮ್ಮ ಮನಸನ್ನು ಪರಿವರ್ತಿಸುವ ಶಕ್ತಿಯಾಗಿದೆ ಎಂದು ಪ್ರೋ.ಶಿವಾನಂದ ವಾಲೀಕಾರ ಹೇಳಿದರು. 

ಹಿರೇಮಸಳಿ ಗ್ರಾಮದ ಶ್ರೀ ಶರಣಬಸವೇಶ್ವರ ಮಂದಿರದಲ್ಲಿ ನಡೆದ ಶ್ರೀ ಸಿದ್ದೇಶ್ವರ ಶ್ರೀಗಳ ಗುರುಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಶ್ರೀಗಳಿಗೆ ಪ್ರವಚನವೆ ಸರ್ವಸ್ವ ಅವರ ಪ್ರವಚನ ಅಂಬೃತ ಸಮಾನ ಪ್ರವಚನದ ಮೂಲಕ ದೇಶ ವಿದೇಶಗಳಲ್ಲಿ ಜ್ಞಾನದೀವಿಗೆ ಹಿಡಿದ ಸರಳತೆಯ ಸಾಕಾರ ಮೂರ್ತಿ ಜಾತಿ, ಕುಲ, ಧರ್ಮ, ವರ್ಗ, ಲಿಂಗ ಬೇದ ಎನ್ನದೆ ಸರ್ವರ ಏಳಿಗೆಗೆ ಸಂದೇಶ ಸಾರಿದ ಸಿದ್ದೇಶ್ವರ ಶೀಗಳು ಶತಮಾನ ಖಂಡ ಶ್ರೇಷ್ಠ ಸಂತ ಎಂದರು.  

ಕಾಶಿರಾಯ ಪಾಟೀಲ ಮಾತನಾಡಿ ಭಾರತಿಯ ಸಂಸ್ಕೃತಿಯನ್ನು ತಮ್ಮ ಪ್ರವಚನಗಳ ಮೂಲಕ ಜಗತ್ತಿನ ಬೇರೆ ಬೇರೆ ದೇಶಗಳಿಗೆ ಪರಿಚಯ ಮಾಡಿಕೊಟ್ಟಿರುವ ಶ್ರೀಗಳು ಸಮಾಜಕ್ಕೆ ಜ್ಞಾನವನ್ನು ಹಂಚಿದ್ದಾರೆ. ಶ್ರೀಗಳ ಜೀವನವೇ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕ ಎಂದರು. ಶ್ರೀಮಠದ ಸಂಗನಬಸವ ಸ್ವಾಮಿಕಳು ಸಾನಿಧ್ಯ ವಹಿಸಿದರು. ಮಾಜಿ ಸೈನಿಕರಾದ ಮಲೇಶಗೌಡ ಪಾಟೀಲ, ಬಸವರಾಜ ಹತ್ತರಕಿ, ನಾಗಪ್ಪ ಖೇಡಗಿ, ವಿಲಾಸ ತಳವಾರ, ಶರಣು ಉಪ್ಪಾರ, ಅಶೋಕ ಮರಡಿ, ಮಲಕಣ್ಣ ಲಚ್ಯಾಣ, ಪ್ರವಿಣ ಮನಮಿ, ಶಿವಾನಂದ ಕ್ಷತ್ರೀ, ಸಂತೋಷ ವಾಲಿಕಾರ, ಚಂದು ಮನಮಿ, ಭೀಮು ದೇಸುಣಗಿ, ಧರೇಪ್ಪ ಕೀಲಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.