ದೇಶದಲ್ಲಿಯೇ ಮೊದಲ ಬಾರಿಗೆ 4 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡನೆ ಮಾಡಿರುವ ಮೊದಲನೇ ಮುಖ್ಯಮಂತ್ರಿ ಸಿದ್ಧರಾಮಯ್ಯ
ಹಾವೇರಿ 07: ಮುಖ್ಯಮಂತ್ರಿ ಸಿದ್ಧರಾಮಯ್ಯನವರು 16ನೇ ಬಜೆಟ್ ಮಂಡನೆ ಮಾಡಿರುವ ಕೀರ್ತಿ ಇವರದ್ದಾಯಾಗಿರುತ್ತದೆ. 2025-26ರ ಬಜೆಟ್ ಮಂಡನೆಯು ದೇಶದಲ್ಲಿಯೇ ಮೊದಲ ಬಾರಿಗೆ 4 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡನೆ ಮಾಡಿರುವ ಮೊದಲನೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರದು ಆಗಿದ್ದು, ಇದರಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಉತ್ತಮ ಮತ್ತು ತೃಪ್ತಿಕರ ಬಜೆಟ್ ಯಾಗಿದೆ ಹಾಗೂ ಸಮ ಸಮಾಜದ ಸಮತೋಲನ ಬಜೆಟ ಯಾಗಿದೆ. ಕೃಷಿ, ಕೈಗಾರಿಕೆ, ಉದ್ಯೋಗ, ಆರೋಗ್ಯ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮಹತ್ವ ನೀಡಿದೆ ಎಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸಂಜೀವಕುಮಾರ ನೀರಲಗಿ ಅವರು ಬಜೆಟ್ ಪ್ರತಿಕ್ರಿಯ ನೀಡಿದ್ದಾರೆ.