ಉಪಚುನಾವಣೆ ಸೋಲಿಗೆ ಸಿದ್ದರಾಮಯ್ಯ ಒಬ್ಬರೇ ಕಾರಣರಲ್ಲ: ಡಾ.ಜಿ.ಪರಮೇಶ್ವರ

ಬೆಂಗಳೂರು,12 ಉಪಚುನಾವಣೆಯ ಸೋಲಿಗೆ ಸಿದ್ದರಾಮಯ್ಯ ಒಬ್ಬರೇ ಕಾರಣರಲ್ಲ. ಆದ್ದರಿಂದ ಶಾಸಕಾಂಗ  ಪಕ್ಷದ ನಾಯಕನ ಸ್ಥಾನಕ್ಕೆ ಅವರು ನೀಡಿರುವ ರಾಜೀನಾಮೆಯನ್ನು ಹಿಂಪಡೆಯುವಂತೆ  ಒತ್ತಾಯಿಸಿರುವುದಾಗಿ ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ್‌ ಹಿರಿಯ ನಾಯಕ  ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಸಿದ್ದರಾಮಯ್ಯ ನೀಡಿರುವ ರಾಜೀನಾಮೆ ಬಗ್ಗೆ ಹೈಕಮಾಂಡ್ ಯಾವ ತೀರ್ಮಾನ  ಕೈಗೊಳ್ಳುತ್ತದೆ ಎಂಬ ಬಗ್ಗೆ ತಮಗೆ ಮಾಹಿತಿಯಿಲ್ಲ. ಹೈಕಮಾಂಡ್ ಏನು ನಿರ್ಧಾರ  ಕೈಗೊಳ್ಳುತ್ತದೆಯೋ ಎಂಬ ನಿರೀಕ್ಷೆ ತಮಗೂ ಇದೆ. ಚುನಾವಣೆ ಎಂದ ಮೇಲೆ‌ ಸೋಲು,ಗೆಲುವು  ಸಹಜ. ಪಕ್ಷದ ಹಿರಿಯ ನಾಯಕರಾಗಿರುವ ಸಿದ್ದರಾಮಯ್ಯನವರೊಬ್ಬರೆ ಎಲ್ಲದಕ್ಕೂ ಜವಾಬ್ದಾರರಲ್ಲ. ಹೀಗಾಗಿ ಅವರು ತಮ್ಮ ರಾಜೀನಾಮೆ ಹಿಂಪಡೆಯುವಂತೆ ಮನವಿ ಮಾಡಿದ್ದೇವೆ ಎಂದರು.ಸಿದ್ದರಾಮಯ್ಯನವರು ಆರೋಗ್ಯವಾಗಿದ್ದಾರೆ. ಈ ಹಿಂದೆ ಅವರಿಗೆ ಮೊದಲು ಒಂದು ಭಾಗದ ರಕ್ತನಾಳ ಬ್ಲಾಕ್ ಆಗಿತ್ತು. ಈಗ ಮತ್ತೊಂದು ಭಾಗ ಶೇ.95 ರಷ್ಟು ಭಾಗ ಬ್ಲಾಕ್ ಆಗಿದ್ದರಿಂದ‌ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಅವರ ರಕ್ತನಾಳಕ್ಕೆ  ಸ್ಟಂಟ್ ಅಳವಡಿಸಲಾಗಿದ್ದು, ಸಂಜೆ ಐದು ಗಂಟೆಗೆ ಅವರನ್ನು ಡಿಸ್ಟಾರ್ಜ್ ಮಾಡುತ್ತಾರೆ ಎಂದು ಪರಮೇಶ್ವರ್ ಹೇಳಿದರು.ಇನ್ನು  ಚಿಕಿತ್ಸೆಗೊಳಲಾಗಿರುವ ಸಿದ್ದರಾಮಯ್ಯ ಬೇಗ ಗುಣಮುಖರಾಗಲಿ ಎಂದು ಜೆಡಿಎಸ್ ವರಿಷ್ಠ  ಹೆಚ್.ಡಿ.ದೇವೇಗೌಡ ಹಾರೈಸಿದ್ದಾರೆ. ತಮ್ಮ‌ಆಪ್ತ ಸಿದ್ದರಾಮಯ್ಯ ಚಿಕಿತ್ಸೆಗೊಳಾಗಿರುವುದು  ದುಃಖತಂದಿದ್ದು ಬೇಗ ಚೇತರಿಸಿಕೊಳ್ಳಲಿ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ.