ಸಿದ್ದರಾಮಯ್ಯ ಕಾರು ತಪಾಸಣೆ

Siddaramaiah car inspection

ಚಿಕ್ಕಬಳ್ಳಾಪುರ,‌ಡಿ‌‌2-ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರ ಕಾರನ್ನು ಚುನಾವಣಾಧಿಕಾರಿಗಳು  ತಡೆದು ತಪಾಸಣೆ ನಡೆಸಿದ ಪ್ರಸಂಗ‌ ಜರುಗಿತು.

ಸೋಮವಾರ ಬೆಳಿಗ್ಗೆ ಪ್ರಚಾರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ನಂದಿ ಚೆಕ್ ಪೋಸ್ಟ್ ನಲ್ಲಿ ಸಿದ್ದರಾಮಯ್ಯ ಅವರ ಕಾರನ್ನು ಚುನಾವಣಾಧಿಕಾರಿಗಳು ತಡೆದು ತಪಾಸಣೆಗೆ ಮುಂದಾದರು. ಆಗ ಸಿಡುಕಿದ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಅವರ ಕಾರು ಪರಿಶೀಲಿಸಿದೀರಾ ಎಂದು ಚುನಾವಣಾಧಿಕಾರಿಯನ್ನು ಪ್ರಶ್ನಿಸಿದರು.

ಏಯ್ ಬಾರಯ್ಯಾ ಯಾರದಾದ್ರೂ ಏನಾದ್ರೂ ಹಿಡಿದಿದ್ದೀರಾ ಎಂದು ಕೇಳಿದಾಗ ಗ್ರಾನೈಟ್‌ನವರಿಗೆ ಸೇರಿದ 5ಲಕ್ಷ ರೂ.ಗಳನ್ನು ಹಿಡಿದಿದ್ದೇವೆ.ಸುಧಾಕರ್‌ ಅವರದ್ದು ಯಾವುದು ಸಿಕ್ಕಿಲ್ಲ ಎಂದರು. ಆಗ ಸಿದ್ದರಾಮಯ್ಯ ನಡಿನಡಿಯಪ್ಪ ನಮ್ಮ ಗಾಡಿಯಲ್ಲಿ ಏನಿದೆ ಮಣ್ಣಾಗಟ್ಟಿ ಎಂದು ಹೇಳುತ್ತಾ ಮುನ್ನಡೆದರು.

ಕಳೆದ ವಾರ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರ ಸ್ವಾಮಿ ಅವರ ಕಾರನ್ನು ಇದೇ ಸ್ಥಳದಲ್ಲಿ ಚುನಾವಣಾ ಅಧಿಕಾರಿಗಳು ತಡೆದು ತಪಾಸಣೆ ನಡೆಸಿದ್ದರು.